Advertisements

ಬಸ್ ನಲ್ಲಿ ಮಹಿಳೆಗೆ ಹೃದಯಘಾ’ತ, ಆದರೆ ಕಂಡಕ್ಟರ್ ಮಾಡಿದ್ದು ಏನ್ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕೇರಳದ ಸರ್ಕಾರಿ ಬಸ್ ಒಂದರಲ್ಲಿ ನಡೆದ ಘಟನೆ ಇದು.. ಒಂದು ಏರಿಯಾದಿಂದ ಮತ್ತೊಂದು ಏರಿಯಾಗೆ ಹೋಗುತ್ತಿದ್ದ ಬಸ್ ನಲ್ಲಿ ಒಬ್ಬ ಮಹಿಳೆಗೆ ದಿಡೀರ್ ಆಗಿ ಎದೆ ನೋ’ವು ಕಾಣಿಸಿಕೊಂಡಿದೆ.. ಊ’ಸಿರಾಡಲೂ ಕೂಡ ಆ ಮಹಿಳೆಗೆ ತುಂಬಾ ಕಷ್ಟವಾಗುತ್ತಿತ್ತು. ಇನ್ನೂ ಈ ಮಹಿಳೆಗೆ ಎದೆ ನೋವು ಕಾಣಿಸಿಕೊಂಡಿದ್ದನ್ನ ನೋಡಿದ ಪ್ರಯಾಣಿಕರು ಕಂಡಕ್ಟರ್ ಬಳಿ ಗಾಬರಿಯಿಂದ ಹೇಳಿಕೊಳ್ಳುತ್ತಾರೆ.. ನಂತರ ಕಂಡಕ್ಟರ್ ಈ ಮಹಿಳೆಯ ಸ್ಥಿತಿಯನ್ನು ನೋಡಿ ನೇರವಾಗಿ ಡ್ರೈವರ್ ಬಳಿ ಹೋಗಿ ವಿಚಾರ ತುಂಬಾ ಗಂ’ಭೀರವಾಗಿದೆ ಬೇಗ ಆಸ್ವತ್ರೆಯ ಕಡೆ ಬಸ್ಸನ್ನು ಓಡಿಸಿ ಎಂದು ಹೇಳುತ್ತಾರೆ..

Advertisements

ಡ್ರೈವರ್ ಈ ವಿಷಯ ತಿಳಿಯುತ್ತಿದ್ದಂತೆ ಆಂಬುಲೆನ್ಸ್ ರೀತಿ ವೇಗವಾಗಿ ಬಸ್ಸನ್ನು ಆರನ್ ಮಾಡಿಕೊಂಡು ಓಡಿಸುತ್ತಿರುತ್ತಾರೆ.. ಇನ್ನೂ ಚೆಕ್ ಪೋಸ್ಟ್ ನಲ್ಲಿ ವೇಗವಾಗಿ ಬರುತ್ತಿರುವ ಬಸ್ ಅನ್ನು ನೋಡಿದ ಪೋಲಿಸರು ಏಕೆ ಇಷ್ಟೊಂದು ವೇಗವಾಗಿ ಹೋಗುತ್ತಿದೆ ಎಂದು ತಿಳಿದು ಬಸ್ ಅನ್ನು ನಿಲ್ಲಿಸುತ್ತಾರೆ.. ನಂತರ ಒಬ್ಬ ಮಹಿಳೆಗೆ ಆಗಿರುವ ಸ್ಥಿತಿಯನ್ನು ಕಂಡ ಪೋಲಿಸರು ತಮ್ಮ ವಾಹನದ ಸಹಾಯದಿಂದ ರೋಡ್ ಕ್ಲೀಯರ್ ಮಾಡಿಕೊಟ್ಟಿದೆ..

ಪೋಲಿಸ್ ವಾಹನದ ಹಿಂದೆ ಈ ಬಸ್ ವೇಗವಾಗಿ ಹೋಗಿ ಐದು ಕಿಲೋಮೀಟರ್ ದೂರವಿರುವ ಆಸ್ವತ್ರೆಗೆ ಸೇರುತ್ತಾರೆ.. ನಂತರ ಕಂಡಕ್ಟರ್ ಸ್ಟ್ರೆಚರ್ ಗೂ ಕಾಯದೇ ಆ ಮಹಿಳೆಯನ್ನ ಆಸ್ವತ್ರೆಯ ಹೊಳಗೆ ಎತ್ತಿಕೊಂಡು ಹೋಗುತ್ತಾರೆ.. ಇನ್ನೂ ಬಸ್ ನಲ್ಲಿದ್ದ ಪ್ರಯಾಣಿಕರು ಸಹ ಕಂಡಕ್ಟರ್ ಹಾಗೂ ಡ್ರೈವರ್ ಗೆ ಸಹಕರಿಸಿದ್ದಾರೆ..  ಈ ಘಟನೆ ಎಲ್ಲಾ ಕಡೆ ಬಹಳ ಸುದ್ದಿಯಾಗಿ ಡ್ರೈವರ್, ಕಂಡಕ್ಟರ್ ಮತ್ತು ಪೋಲಿಸರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ..