Advertisements

ತಾಯಿ ಹಾಲು ತರಲು ಹೋದಾಗ ಗೂಳಿ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಮಗು.. ಗೂಳಿ ಮಾಡಿದ್ದೇನು ತಲೆ ತಿರುಗುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ನಾವುಗಳು ಸಾಮಾನ್ಯವಾಗಿ ಬೇರೆ ಊರುಗಳಿಗೆ ಹೋದಾಗ ಅಲ್ಲಿ ಪ್ರಸಿದ್ಧಿ ಹೊಂದಿರುವಂತಹ ದೇವಸ್ತಾನಗಳಿಗೆ ಹೋಗುತ್ತೇವೆ.. ಹಾಗೆ ಆ ದೇವಸ್ತಾನ ಹತ್ತಿರ ಕೆಲವು ಗೋವುಗಳು ಓಡಾಡುವುದನ್ನು ನೀವು ನೋಡಿರುತ್ತೀರಾ.. ಬಹಳ ಹಸುಗಳು ಹಾಗೂ ಗೂಳಿಗಳು ದೇವಸ್ತಾನದ ಸುತ್ತಾ ಅಲ್ಲಿಗೆ ಬರುವ ಬಕ್ತರು ಕೊಡುವ ಹಣ್ಣು ಹಂಪಲು ತಿನ್ನುತ್ತಾ ಓಡಾಡುತ್ತಿರುತ್ತವೆ.. ಇನ್ನೂ ತಮಿಳುನಾಡಿನ ಒಂದು ಪ್ರಸಿದ್ಧ ದೇವಸ್ತಾನದಲ್ಲಿ ಒಂದು ಕಪ್ಪು ಗೂಳಿ ಮಾಡಿದ ಒಂದು ವಿಚಿತ್ರ ಕೆಲಸದ ಬಗ್ಗೆ ತಿಳಿಯೋಣ.. ತಮಿಳುನಾಡಿನ ದಿಂಡಿಗಲ್ ಎಂಬ ಸಣ್ಣ ಹಳ್ಳಿಯಲ್ಲಿ ಮದನ್ ಎಂಬ ವ್ಯಕ್ತಿ ವಾಸ ಮಾಡುತ್ತಿದ್ದಾನೆ..

Advertisements

ಮೂರು ವರ್ಷದ ಹಿಂದೆ ಮೀನಾ ಎಂಬ ಯುವತಿಯನ್ನು ಮದುವೆ ಮಾಡಿಕೊಂಡು ಈಗ ಮುದ್ದಾದ ಒಂದು ಹೆಣ್ಣುಮಗುವಿದೆ.. ಕೆಲವು ತಿಂಗಳುಗಳ ಹಿಂದೆ ಮದನ್ ಹೆಂಡತಿ ಮಗುವಿನ ಜೊತೆ ಮದುರೈನ ಒಂದು ದೇವಸ್ತಾನಕ್ಕೆ ಹೋಗಿದ್ದಾರೆ.. ನಂತರ ದೇವಸ್ತಾನದಲ್ಲಿ ದೇವರ ದರ್ಶನ ಮಾಡಿದ ಇವರು ದೇವಾಲಯದ ಆವರಣದಲ್ಲಿ ಕೂತು ಮಾತನಾಡುತ್ತಿರುತ್ತಾರೆ.. ಈಗೆ ಮದನ್ ಮೀರಾ ಮಾತನಾಡುತ್ತಿದ್ದಾಗ ಕೆಲವು ಸಮಯದ ನಂತರ ಇವರ ಮಗುವಿಗೆ ನಿದ್ದೆ ಬಂದ ಕಾರಣ ಅಳಲು ಶುರುಮಾಡುತ್ತದೆ..

ಆಗ ತಾಯಿ ಮೀರಾ ಬ್ಯಾಗಿನಲ್ಲಿ ತಂದಿದ್ದ ಒಂದು ಸೀರೆಯನ್ನು ಎತ್ತಿಕೊಂಡು. ಅಲ್ಲೇ ಇದ್ದ ಒಂದು ಮರದ ಬಳಿ ಹೋಗಿ ತೊಟ್ಟಿಲಿನ ರೀತಿ ಜೋಗುಳ ಕಟ್ಟಿ ಅದರಲ್ಲಿ ಮಗುವನ್ನು ಮಲಗಿಸಿ ತೂಗುತ್ತಾರೆ.. ಈ ವೇಳೆ ತನ್ನ ಹೆಂಡತಿ ಜೋಗುಳವನ್ನು ತೂಗುತ್ತಿರುವದನ್ನ ನೋಡಿ ಸ್ವಲ್ಪ ಹೊರಗಡೆ ಸುತ್ತಾಡಿಕೊಂಡು ಬರೋಣ ಎಂದು ಮದನ್ ಹೋಗುತ್ತಾರೆ.. ಬಹಳ ಸಮಯದವರೆಗೂ ಜೋಗುಳವನ್ನು ತೂಗಿ ಮಗುವನ್ನು ಮಲಗಿಸಲು ಪ್ರಯತ್ನ ಮಾಡಿದರು ಸಹ ಮಗು ಮಲಗಲೇ ಇಲ್ಲ.. ಒಂದು ವೇಳೆ ಮಗುವಿಗೆ ಹಸಿವಾಗಿರಬಹುದು ಅದಕ್ಕೇ ಈ ರೀತಿ ಅಳುತ್ತಿದೆ ಎಂದು ಅರಿತ ಮೀರಾ ಹಾಲನ್ನು ತರಿಸಲು ಮದನ್ ಗೆ ಪೋನ್ ಕಾಲ್ ಮಾಡುತ್ತಾರೆ ಆದರೆ ಎಷ್ಟು ಬಾರಿ ಕಾಲ್ ಮಾಡಿದರು ರಿಸಿವ್ ಮಾಡಲೇ ಇಲ್ಲ..

ಮಗು ತುಂಬಾ ಜೋರಾಗಿ ಅಳುತ್ತಿದ್ದರಿಂದ ತಾನೇ ಹೋಗಿ ಹಾಲನ್ನು ತೆಗೆದುಕೊಂಡು ಬರೋಣ ಎಂದು ತಿರ್ಮಾನಿಸುತ್ತಾರೆ.. ತೊಟ್ಟಿಲಿನಿಂದ ನೂರು ಮೀಟರ್ ನಷ್ಟು ಅಂಗಡಿ ಇರುವುದು ಮೀರಾ ಅವರಿಗೆ ಕಾಣಿಸುತ್ತದೆ.. ಸರಿ ನನ್ನ ಮಗುವಿನ ಜೋಗುಳ ಎದುರಗಡೆ ಕಾಣಿಸುತ್ತದೆ ಎಂದು ಮಗುವನ್ನು ಅಲ್ಲೇ ಬಿಟ್ಟು ಮೀನಾ ಹಾಲು ತರಲು ಅಂಗಡಿಗೆ ಹೋಗುತ್ತಾರೆ.. ಇನ್ನೂ ಆ ದೇವಸ್ತಾನದ ಸುತ್ತಾ ಹಸುಗಳು, ಗೂಳಿಗಳು ಜ್ಯಾಸ್ತಿ ಸಂಖ್ಯೆಯಲ್ಲಿ ಯಾವಾಗಲೂ ಓಡಾಡುತ್ತಿದ್ದವು.. ಅದೇ ಸಮಯಕ್ಕೆ ಮಗು ಇರುವ ಜಾಗಕ್ಕೆ ಒಂದು ಕಪ್ಪು ಗೂಳಿ ಬರುತ್ತದೆ.. ಈ ಗೂಳಿ ಬಹಳ ವರ್ಷಗಳಿಂದ ಇದೇ ದೇವಸ್ತಾನದಲ್ಲಿ ನೆಲೆಸಿಕೊಂಡಿದೆ..

ಆದರೆ ಈ ಗೂಳಿ ಇದುವರೆಗೂ ದೇವಸ್ತಾನದ ಬಳಿ ಓಡಾಡುವ ಜನರಿಗೆ ಯಾವುದೇ ರೀತಿ ತೊಂದರೆ ಕೊಟ್ಟಿಲ್ಲ.. ಈಗೆ ಓಡಾಡಿಕೊಂಡು ಬಂದ ಈ ಗೂಳಿ ಕೊನೆಗೆ ಮಗುವಿನ ಜೋಗುಳ ಹತ್ತಿರ ಬರುತ್ತದೆ.. ಮಗು  ಅಳುತ್ತಿರುವುದನ್ನು ನೋಡಿದ ಈ ಗೂಳಿ ಒಂದು ನಿಮಿಷ ಅಲ್ಲೇ ನಿಂತು ನೋಡುತ್ತದೆ.. ನಂತರ ಗೂಳಿ ತನ್ನ ಕೊಂಬುಗಳಿಂದ ಜೋಗುಳವನ್ನು ತೂಗಲು ಶುರುಮಾಡಿದೆ.. ಆಗ ಹಾಲು ತರಲು ಹೋಗಿದ್ದ ಮೀನಾ ತನ್ನ ಮಗುವಿನ ಜೋಗುಳ ಹತ್ತಿರ ಗೂಳಿ ಏನು ಮಾಡುತ್ತಿದೆ ಎಂದು ಗಾಬರಿಯಿಂದ ಓಡಿ ಬರುತ್ತಾರೆ.. ಮೀನಾ ಬಂದ ನಂತರವೂ ಕೂಡ ಆ ಗೂಳಿ ಜೋಗುಳವನ್ನು ತೂಗುತ್ತಲೆ ಇತ್ತು ಆಗ ಮೀನಾ ಅವರು ಕಾಪಾಡಿ ಕಾಪಾಡಿ ಎಂದು ಜೋರಾಗಿ ಕೂಗುತ್ತಿದ್ದರು..

ಆದರೆ ಮೀನಾಳ ಕೂಗಿಗೆ ತಲೆ ಕೆಡಿಸಿಕೊಳ್ಳದ ಆ ಗೂಳಿ ಮಗು ಅಳುವ ಶಬ್ದ ನಿಲ್ಲುವವರೆಗೂ ಜೋಗುಳವನ್ನು ತೂಗುತ್ತಲೇ ಇತ್ತು.. ಕೆಲವು ಸಮಯದ ನಂತರ ಮಗು ಅಳುವುದನ್ನು ನಿಲ್ಲಿಸಿ ನಿದ್ರೆಗೆ ಜಾರುತ್ತದೆ.. ಆಗ ಗೂಳಿ ತನ್ನ ಪಾಡಿಗೆ ತಾನು ಹೊರಟು ಹೊಗುತ್ತದೆ.. ಈ ದೃಶ್ಯವನ್ನು ಕಂಡ ಮೀನಾ ಒಂದು ಕ್ಷಣ ಆಶ್ಚರ್ಯ ಪಡುತ್ತಾರೆ.. ಅದೇ ಸಮಯಕ್ಕೆ ಮದನ್ ಬರುತ್ತಾನೆ.. ಗೂಳಿ ತನ್ನ ಮಗುವಿನ ಜೋಗುಳವನ್ನು ತೂಗಿದ ವಿಚಾರವನ್ನು ಗಂಡನ ಹತ್ತಿರ ಬಳಿ ಹೇಳುತ್ತಾರೆ.‌. ಆಗ ಈ ದಂಪತಿಗಳು ಎಲ್ಲಾ ದೇವರ ಇಚ್ಚೆ ಅಂದುಕೊಂದು ಮತ್ತೆ ದೇವರ ದರ್ಶನ ಪಡೆದು ಮನೆಗೆ ತೆರಳುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..