Advertisements

ದಿನನಿತ್ಯ ಈ ಹಸು ಬಟ್ಟೆ ಅಂಗಡಿಯಲ್ಲಿ ಬಂದು ಬಟ್ಟೆ ವ್ಯಾಪಾರ ಮಾಡುತ್ತದೆಯಂತೆ ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಕು ಪ್ರಾಣಿಗಳನ್ನ ದೇವರಂತೆ ನೋಡುತ್ತೇವೆ.. ಇನ್ನೂ ಗೋಮಾತೆಯಲ್ಲಿ ಮುಕ್ಕೊಟಿ ದೇವತೆಗಳು ಸಹ ವಾಸವಾಗಿದ್ದಾರೆ ಎಂದು ಹೇಳಲಾಗಿದೆ. ನಂದಿಯನ್ನ ನೀವೆಲ್ಲರೂ ಶಿವನ ಪರಮ ಭಕ್ತರು ಎಂತಲೂ ಕೂಡ ಪೂಜಿಸುತ್ತೇವೆ.. ಪ್ರತೀ ಶಿವನ ದೇವಾಲಯದಲ್ಲಿ ನಂದಿ ಇದ್ದೇ ಇರುತ್ತಾರೆ. ಇನ್ನೂ ಈ ಮಾಹಿತಿಯಲ್ಲಿ ನಂದಿಯ ಒಂದು ಅ’ಚ್ಚರಿ ಸಂಗತಿಯನ್ನು ತಿಳಿಯೋಣ ಬನ್ನಿ.. ಭಾರತದ ವಾರಣಾಸಿ. ಇದೊಂದು ಅದ್ಬುತವಾದ ಧರ್ಮ ಕ್ಷೇತ್ರ.

Advertisements

ಇಲ್ಲಿಗೆ ದಿ‌ನಕ್ಕೆ ಸಾವಿರಾರು ಭಕ್ತಾದಿಗಳು ಬೇಟಿ ಕೊಡುತ್ತಾರೆ. ಇನ್ನೂ ವಾರಣಾಸಿ ಅಂದರೆ ದೇಶಾದ್ಯಂತ ಪ್ರಸಿದ್ಧವಾದ ಕ್ಷೇತ್ರ.. ಇಲ್ಲಿ ಒಂದು ಬಟ್ಟೆ ಅಂಗಡಿಯಲ್ಲಿ ಒಂದು ವಿಚಿತ್ರ ಘಟನೆ ನಡೆಯುತ್ತಲೇ ಇದೆ. ಅದೇನೆಂದರೆ ವಾರಣಾಸಿಯಲ್ಲಿ ಒಂದು ಬಟ್ಟೆ ಅಂಗಡಿ ಇದೆ.. ಆ ಅಂಗಡಿಯ ಹೊಳಗೆ ಈಶ್ವರನ ಮೂರ್ತಿಯೂ ಕೂಡ ಇದೆ. ಇಲ್ಲಿಗೆ ಪ್ರತಿ ದಿನವೂ ನಂದಿ ಬಂದು ಆ ಅಂಗಡಿಯಲ್ಲಿ ಕೂತು ಬಟ್ಟೆ ವ್ಯಾಪಾರ ಮಾಡುತ್ತದೆಯಂತೆ‌.. ಇನ್ನೂ ಶಿವನ ಮೂರ್ತಿಯ ಕೆಳಗೆ ಕೂತು ಬೆಳಗ್ಗೆಯಿಂದ ಸಂಜೆಯವರೆಗೂ ಆ ಅಂಗಡಿಯಲ್ಲೇ ನಂದಿ ಕುಳಿತುಕೊಂಡಿರುತ್ತದೆ.

ಇದೊಂದು ನಿಜಕ್ಕೂ ಅ’ಚ್ಚರಿ ಸಂಗತಿಯೇ ಹೌದು.. ಪ್ರತಿ ದಿನ ಅಂಗಡಿ ಮುಂದೆ ನಂದಿಯೂ ಬಂದ ನಂತರವೇ ಆ ಅಂಗಡಿಯ ಮಾಲೀಕ ಅಂಗಡಿಯ ಬಾಗಿಲನ್ನು ತೆಗೆಯುತ್ತಾರೆ ಎಂದು ಹೇಳಿದ್ದಾರೆ.. ಇನ್ನೂ ನಂದಿಯೂ ಕೂಡ ಬೇರೆಯವರಿಗೆ ಅಂಗಡಿಯ ಬಾಗಿಲನ್ನು ತೆಗೆಯಲು ಬಿಡುವುದಿಲ್ಲ. ಪ್ರವಾಸಿಗಳೂ ಸಹ ಈ ಅಂಗಡಿಗೆ ಬಂದು ನಂದಿಯನ್ನು ನೋಡಿಕೊಂಡು ಹೋಗುತ್ತಾರೆ‌‌.. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.