Advertisements

ರುಚಿಯಾದ ಕರಿ ಬೇವು ಸೊಪ್ಪಿನ ಚಟ್ನಿ ಪುಡಿ ಮಾಡುವ ವಿಧಾನ.

Aduge

ಕರಿ ಬೇವು ಸೊಪ್ಪಿನ ಚಟ್ನಿ ಪುಡಿ ಮಾಡಲು ಬೇಕಾಗಿರುವ ಪದಾರ್ಥಗಳು : ಕರಿಬೇವು 80 ಕಡ್ಡಿಯ ಎಲೆಗಳು, ಕಡ್ಲೆಬೇಳೆ, 4 ಟೇಬಲ್ ಚಮಚ, ಉದ್ದಿನಬೇಳೆ 4 ಟೇಬಲ್ ಚಮಚ, ಒಣ ಕೊಬ್ಬರಿ ಅರ್ಧ ಗಿಟುಕು ತುರಿದು ಇಡಿ, ಬ್ಯಾಡಗಿ ಮೆಣಸು 12, ಇಂಗು ಕಾಲು ಟೀ ಚಮಚದಷ್ಟು, ಹುಣಸೇ ಹಣ್ಣು, 1ಟೀ ಚಮಚದಷ್ಟು ಬೆಲ್ಲಅರ್ಧ ನಿಂಬೆಯ ಗಾತ್ರ, ಕಲ್ಲು ಉಪ್ಪು ರುಚಿಗೆ ತಕ್ಕಷ್ಟು.

Advertisements

ಮಾಡುವ ವಿಧಾನ : ಕರಿಬೇವಿನ ಸೊಪ್ಪನ್ನು ಕಡ್ಡಿಯಿಂದ ಬಿಡಿಸಿ ತೊಳೆದು ಆರಲು ಬಿಡಿ. ಮರುದಿನ ಒಣಗಿರುವ ಕರಿಬೇವಿನ ಸೊಪ್ಪನ್ನು ಬಾಣಲೆಯಲ್ಲಿ ಗರಿ ಗರಿ ಯಾಗುವಂತೆ ಹುರಿಯಬೇಕು. ಎಣ್ಣೆಯ ಬಳಕೆ ಬೇಡ. ಉದ್ದಿನಬೇಳೆ, ಕಡ್ಲೆಬೇಳೆ, ಬ್ಯಾಡಗಿ ಮೆಣಸಿನಕಾಯಿ, ತುರಿದ ಒಣ ಕೊಬ್ಬರಿ, ಹುಣಸೇ ಹಣ್ಣು ಎಲ್ಲವನ್ನೂ ಬೇರೆ ಬೇರೆಯಾಗಿ ಹುರಿಯಬೇಕು. ಎಣ್ಣೆಯ ಬಳಕೆ ಬೇಡ. ಹುರಿದು ತಣ್ಣಗಾದ ಕರಿಬೇವಿನ ಸೊಪ್ಪನ್ನು ನುಣ್ಣಗೆ ಪುಡಿಮಾಡಿ.

ನಂತರ ಹುರಿದು ತಣ್ಣಗಾದ ಬ್ಯಾಡಗಿ ಮೆಣಸಿನ ಕಾಯಿ, ಹುಣಸೇ ಹಣ್ಣು, ಕಡ್ಲೆಬೇಳೆ, ಉದ್ದಿನಬೇಳೆ, ಒಣ ಕೊಬ್ಬರಿ, ಬೆಲ್ಲ, ಹಾಗೂ ಉಪ್ಪು ಸೇರಿಸಿ ನುಣ್ಣಗೆ ಪುಡಿಮಾಡಿ. ನಂತರ ಇದನ್ನು ಕರಿಬೇವಿನ ಸೊಪ್ಪಿನ ಪುಡಿಯೊಂದಿಗೆ ಸೇರಿಸಿ,ಇಂಗು ಪುಡಿಯನ್ನೂ ಸೇರಿಸಿ ಚೆನ್ನಾಗಿ ಬೆರೆಸಿ, ರುಚಿ ಸರಿ ಹೊಂದಿಸಿ.ಈಗ ಚಟ್ನಿ ಪುಡಿ ಸವಿಯಲು ಸಿದ್ಧ. ಈ ಚಟ್ನಿ ಪುಡಿಗೆ ಒಗ್ಗರಣೆ ಹಾಕಿಲ್ಲ. ಅನ್ನದ ಜೊತೆಯಲ್ಲಿ ಸೇವಿಸುವಾಗ ಸ್ವಲ್ಪ ತುಪ್ಪ, ಅಥವಾ ಎಣ್ಣೆ ಸೇರಿಸದರೆ ಚೆನ್ನಾಗಿರುತ್ತದೆ. ಇಡ್ಲಿ, ದೋಸೆಯ ಜೊತೆಗೆ ಸೇವಿಸುವಾಗ ಎಣ್ಣೆಯ ಅವಶ್ಯಕತೆ ಇರುವುದಿಲ್ಲ.