Advertisements

ಕೋಟಿಗಳ ಬೆಲೆ ಬಾಳುವ 400 ಕಾರುಗಳಿದ್ರು ಕಟಿಂಗ್ ಮಾಡೋ ಕೆಲಸ ಮಾತ್ರ ಬಿಟ್ಟಿಲ್ಲ.. ಅಷ್ಟಕ್ಕೂ ಯಾರು ಗೊತ್ತಾ?

Kannada Mahiti

ಇವತ್ತಿನ ನಮ್ಮ ಕಥಾ ನಾಯಕ ನಿಜಕ್ಕೂ ಯುವ ಮನಸ್ಸುಗಳಿಗೆ ಪ್ರೇರಣೆಯಾಗುವಂತಹ ವ್ಯಕ್ತಿ. ಈತನ ಕಥೆ ಕೇಳಿದ್ರೆ ಸರಳತೆಗೆ, ಪ್ರಾಮಾಣಿಕತೆಗೆ ಗೆಲುವು ನಿಶ್ಚಿತ ಅಂತ ಎನಿಸುತ್ತದೆ. ಒಬ್ಬ ಸಾಮನ್ಯ ಬಾರ್ಬರ್ ಶಾಫ್ ಓನರ್ ಇವತ್ತು ನಾನೂರು ಕೋಟಿಯ ಒಡೆಯ ಆದ ಕಥೆಯಿದು, ಅದಕ್ಕಿಂತನೂ ಇಷ್ಟೆಲ್ಲ ಕೋಟಿಗಟ್ಟಲೇಯಿದ್ದರು ಆತ ತನ್ನ ಕಸುಬನ್ನೇ ಇನ್ನು ಮಾಡುತ್ತಿದ್ದಾನೆ ಅಂದ್ರೆ ಎಷ್ಟು ಗ್ರೇಟ್ ಅಲ್ವಾ.. ಅಂದಹಾಗೆ ನಮ್ಮ ಕಥಾ ನಾಯಕನ ಹೆಸರು ರಮೆಶ್ ಬಾಬು. ಚಿಕ್ಕ ವಯಸ್ಸಿನಂದಲೇ ಕಷ್ಟ ಪಟ್ಟು ದುಡಿದಂತಹ ವ್ಯಕ್ತಿ. ಪುಟ್ಟ ಕಂಗಳಲ್ಲಿ ಬದುಕಿನ ಬಗ್ಗೆ ದೊಡ್ಡ ದೊಡ್ಡ ಆಸೆಯಿಟ್ಟುಕೊಂಡಂತಹ ವ್ಯಕ್ತಿ. ಆದರೆ ರಮೇಶ್ ಇನ್ನು ಹನ್ನೊಂದರ ವಯಸ್ಸಿನಲ್ಲಿರುವಾಗಲೇ ಅವರ ತಂದೆ ತೀರಿಕೊಳ್ತಾರೆ..

[widget id=”custom_html-3″]

Advertisements

ತಾಯಿ ಕಷ್ಟ ಪಟ್ಟು ಮಗನನ್ನು ಸಾಕುತ್ತಿರುತ್ತಾರೆ, ಇವರ ತಂದೆಯ ಒಂದು ಶಾಪ್ ಇದ್ರು ಸಹ ಆ ಶಾಪ್‌ನ್ನು ಬಾಡಿಗೆಗೆ ಕೊಡ್ತಾರೆ. ಆದರೆ ಕಿತ್ತು ತಿನ್ನುವ ಬಡತನ ಇವರನ್ನು ಮತ್ತೆ ಕಾಡುತ್ತೆ, ಹೀಗಾಗಿ ಅವರ ತಾಯಿ ಬೇರೆಯವರ ಮನೆ ಕೆಲಸ ಹೋಗಲಿಕ್ಕೆ ಶುರು ಮಾಡ್ತಾರೆ, ಇಷ್ಟಾದರೂ ರಮೇಶ್ ಶಾಲಾ ಶುಲ್ಕ, ಮನೆ ಖರ್ಚು ಹೊಂದಿಸಲು ಸಾಕಾಗುತ್ತಿರಲಿಲ್ಲ, ಈ ಹಿನ್ನಲೆ ರಮೇಶ್ ಕೂಡ ಓದಿನ ಜೊತೆ ಕೆಲಸಕ್ಕೆ ಹೋಗಿ ಅಮ್ಮನಿಗೆ ನೆರವಾಗ್ತಾರ, ಚೆನ್ನಾಗಿ ಓದುತ್ತಿದ್ದಾರೆ ಅಂದುಕೊಳ್ಳುವಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗ್ತಾರೆ, ನಂತರ ಐಟಿಐ ಕೋರ್ಸಿಗೆ ಸೇರಿ ಕೋರ್ಸ್ ಕಂಪ್ಲೀಟ್ ಮಾಡಿದ್ರು ಸಹ ಅವರಿಗೆ ಯಾಕೋ ಮುಂದೆ ಓದಬೇಕು ಅನಿಸಿಲ್ಲ.

[widget id=”custom_html-3″]

ನಂತರ ತಮ್ಮ ತಂದೆಯ ಅಂಗಡಿಯನ್ನು ಬಾಡಿಗೆ ಕೊಡುವುದನ್ನು ಬಿಟ್ಟು ಇವರೇ ಆ ಅಂಗಡಿಯನ್ನು ಸ್ವಲ್ಪ ಮೊಡ್ಯುಲೇಷನ್ ಕೊಟ್ಟು ಅದನ್ನು ಬಾರ್ಬ್ರ್ ಶಾಪ್ ಆಗಿ ಕನ್ವರ್ಟ್ ಮಾಡುತ್ತಾರೆ. ನಂತರ ಊಟ ತಿಂಡಿ ಮಾಡಲು ಸಮಯವಿಲ್ಲದಷ್ಟು ಜನ ಬರಲಿಕ್ಕೆ ಶುರು ಮಾಡ್ತಾರೆ. ಹೀಗೆ ಸಂಸಾರದ ಬಂಡಿಯನ್ನು ಸಾಗಿಸುವಾಗ ಒಂದು ಓಮಿನಿ ಕಾರ್‌ನ್ನು ರಮೇಶ್ ತೆಗೆದುಕೊಳ್ತಾರೆ. ಆದರೆ ಅವರಿಗೆ ಕಾರ್‌ನ ಲೋನ್ ಕಟ್ಟೋದು ಬಹಳ ಕಷ್ಟವಾಗುತ್ತೆ. ಇದರಿಂದ ಅವರು ಕಾರ್‌ನ್ನು ತಾನೇ ಬಾಡಿಗೆಗೆ ಓಡಿಸಲಿಕ್ಕೆ ಶುರು ಮಾಡ್ತಾರೆ, ನಂತರ ಅದರಿಂದ ಬಂದ ಹಣದಲ್ಲಿ ಲೋನ್ ಕಟ್ಟಿ ಕ್ಲಿಯರ್ ಮಾಡಿಕೊಳ್ಳುತ್ತಾರೆ. ಬಳಿಕ ಇನ್ನೊಂದು ಕಾರ್, ಹಾಗೇ ಕಾರ್ ಮೇಲೆ ಕಾರ್ ತೆಗೆದುಕೊಂಡು ಒಂದು ಟ್ರಾನ್ಸ್ಪೋರ್ಟ್ ಶುರು ಮಾಡ್ತಾರೆ.
ರಮೇಶ್ ಬಾಬು ಟರ‍್ಸ್ ಆಂಡ್ ಟ್ರಾವೆಲ್ಸ್ ಶುರು ಮಾಡುತ್ತಾರೆ.

[widget id=”custom_html-3″]

ಇದರಿಂದ ಬಹುತೇಕ ಲಾಭ ಗಳಿಸಿ ಇವತ್ತು ಅತ್ಯಂತ ಕಡುಬಡತನದಲ್ಲಿದ್ದ ವ್ತಕ್ತಿ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿಕೊಳ್ತಾರೆ. ಕಷ್ಟಪಟ್ಟರೇ ಯಾರು ಬೇಕಾದ್ರೂ ಸಾಧಿಸಬಹುದು ಅಂತ ಕೆಲವರು ಅಂದುಕೊಳ್ತಾಯಿದ್ರೆ ಹಾಗೇ ಅಂದುಕೊಳ್ಳೋಕೆ ಹೋಗಬೇಡಿ ಯಾಕಂದ್ರೆ ಈ ಶಾಧಕನ ಕಥೆ ಇಲ್ಲಿಗೆ ಮುಗಿದಿಲ್ಲ,
ಎಸ್ ಓಮಿನಿಯಿಂದ ಶುರು ಮಾಡಿ ಇವತ್ತು ಬೆನ್ಜ್, ಆಡಿ, ಫೆರಾರಿಯಂತಹ ಲಕ್ಸೂರಿ ಕಾರ್‌ಗಳನ್ನು ಇಟ್ಟುಕೊಂಡಿರುವ ರಮೇಶ್ ಬಾಬು ಐಶಾರಾಮಿ ಬದುಕನ್ನು ಆರಾಮಾಗಿ ನಡೆಸಬಹುದಿತ್ತು, ಆದರೆ ಆತ ಈ ಆಡಂಬರದ ಬದುಕು ಬಂದ ತಕ್ಷಣ ತನ್ನನ್ನು ಕೈ ಹಿಡಿದ ವೃತ್ತಿಯನ್ನು ಬಿಡಲಿಲ್ಲ. ಹೌದು ಇವತ್ತಿಗೂ ಸಹ ಆತ ದಿನಕ್ಕೆ ಒಮ್ಮೆಯಾದರೂ ಕಟಿಂಗ್ ಶಾಪ್‌ಗೆ ಭೇಟಿ ಕೊಟ್ಟು ಯಾರಾದ್ರು ಒಬ್ಬರಿಗೆ ಕಟಿಂಗ್ ಮಾಡಿಯೇ ಬರುತ್ತಾರಂತೆ. ಇಷ್ಟೆಲ್ಲಾ ಶ್ರೀಮಂತಿಕೆಯಿದ್ರು ತನ್ನ ಕಷ್ಟ ಕಾಲದಲ್ಲಿ ಕೈ ಹಿಡಿದ ಕಾಯಕವನ್ನು ಮರೆಯದ ಈತ ನಿಜಕ್ಕೂ ಗ್ರೇಟ್ ಅಲ್ವಾ..