Advertisements

ಏಷ್ಯಾ ಖಂಡದ ಅತಿ ಉದ್ದವಾದ ಈ ರಸ್ತೆ. ಕನ್ನಡ ಸೂಪರ್ ಸ್ಟಾರ್ ನಟನ ಹೆಸರಿನಲ್ಲಿದೆ ಯಾರು ಗೊತ್ತಾ..?

News

ನಾವು ದಿನನಿತ್ಯ ಓಡಾಡಿದ ಜಾಗದಲ್ಲೇ ಓಡಾಡುತ್ತಿರುತ್ತೇವೆ. ಆದರೆ ಆ ಜಾಗದ ಬಗ್ಗೆ ಅಲ್ಲಿನ ಇತಿಹಾಸದ ಬಗ್ಗೆ ನಾವು ತಿಳಿದುಕೊಂಡಿರುವುದಿಲ್ಲ. ನಮ್ಮ ಕನ್ನಡ ಪ್ರಸಿದ್ಧ ನಟನ ಹೆಸರಿನಲ್ಲಿ ಒಂದು ಉದ್ದವಾದ ರಸ್ತೆ ಇದ್ದು ಅದು ಏಷ್ಯಾ ಖಂಡದಲ್ಲೇ ಅತೀ ಉದ್ದವಾದ ರಸ್ತೆ ಎಂದು ಎಗ್ಗಳಿಗೆ ಪಡೆದಿದೆ. ಹಾಗಾದರೆ ಆ ನಟ ಯಾರು? ಅತೀ ಉದ್ದವಾದ ರಸ್ತೆ ಎಲ್ಲಿದೆ? ಎಂದು ತಿಳಿದುಕೊಳ್ಳೋಣ.

Advertisements

ಇವತ್ತಿಗೂ ಕನ್ನಡಿಗರ ಮನದಲ್ಲಿ ಉಳಿದುಕೊಂಡಿರುವ ನಟ. ಹಾಗೂ ಕನ್ನಡ ಸೂಪರ್ ಸ್ಟಾರ್ ಯಾರು ಎಂಬ ಸರ್ವೆಯಲ್ಲಿ ಅತಿ ಹೆಚ್ಚು ವೋಟ್ ಗಳಿಸಿರುವ ನಟ ಯಾರು ಗೊತ್ತಾ? ಆ ನಟ ಬೇರಾರು ಅಲ್ಲ ಒನ್ ಅಂಡ್ ಓನ್ಲಿ ಸಾಹಸಸಿಂಹ ವಿಷ್ಣುವರ್ಧನ್. ಕನ್ನಡಿಗರು ಎಂದಿಗೂ ಮರೆಯಲಾಗದಂತಹ ಹೃದಯವಂತ. ವಿಷ್ಣುವರ್ಧನ್ ಎಲ್ಲರಿಗೂ ಗೊತ್ತು ಆದರೆ ಅವರ ಹೆಸರಿನಲ್ಲಿ ರಸ್ತೆ ಇದೆ ಎಂದು ಹಲವು ಜನರಿಗೆ ತಿಳಿದಿಲ್ಲ.

ಏಷ್ಯಾ ಖಂಡದಲ್ಲೇ ಅತಿ ಉದ್ದವಾಗಿರುವ ಈ ರಸ್ತೆ ವಿಷ್ಣುವರ್ಧನ್ ಹೆಸರಿನಲ್ಲಿ ವಿಶಿಷ್ಟವಾದ ರೆಕಾರ್ಡ್ ಪಡೆದಿದೆ. ಬನಶಂಕರಿ ದೇವಸ್ಥಾನದಿಂದ ಇಡಿದು ಕೆಂಗೇರಿ ರಸ್ತೆವರೆಗೂ 14.15 ಕಿಲೋಮೀಟರ್ ಉದ್ದವಿರುವ ಈ ರಸ್ತೆಗೆ ವಿಷ್ಣುವರ್ಧನ್ ಅವರ ಹೆಸರಿಡಲಾಗಿದೆ. ಇದು ಏಷ್ಯಾ ಖಂಡದಲ್ಲೇ ನಟನ ಹೆಸರಲ್ಲಿ ಇರುವ ಅತ್ಯಂತ ಉದ್ದವಾದ ರಸ್ತೆಯಾಗಿದೆ. ಯಾವ ನಟನ ಹೆಸರಿನಲ್ಲಿ ಇರದ ಈ ರೆಕಾರ್ಡ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರಿನಲ್ಲಿದೆ.

ಇದು ವಿಷ್ಣುವರ್ಧನ್ ಗೆ ನಾವು ಕೊಡುವ ಗೌರವ ಹಾಗೂ ಒಂದು ರೀತಿಯ ಹೆಮ್ಮೆ. ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ಹೃದಯವಂತ ಸಾಹಸಸಿಂಹ ವಿಷ್ಣುವರ್ಧನ್.