Advertisements

ರಾತ್ರಿ ಇಡೀ ಊರಿಗೆ ಊರೇ ನಿಶ್ಯಬ್ದವಾಗಿ ಮಲಗಿದರೆ.. ಒಂದು ಮನೆಯಲ್ಲಿ ಮಾತ್ರ ಮೂರು ವರ್ಷದ ಮಗು ಮತ್ತು ತಂದೆಯ ನಡುವೆ ನಡೆದದ್ದು ಏನು ಗೊತ್ತಾ? ಕಣ್ಣೀರು ತರಿಸುತ್ತದೆ..

Inspire Kannada Mahiti

ರಾತ್ರಿ ಇಡೀ ಊರೇ ನಿಶಬ್ದವಾಗಿ ಮಲಗಿದೆ ಆದರೆ ಒಂದು ಮನೆಯಲ್ಲಿ ಮೂರುವರ್ಷದ ಪುಟ್ಟ ಮಗು ಹಾಗೂ ಮಗುವಿನ ತಂದೆ ನಡುವೆ ಮನಕಲುಕುವಂತಹ  ಸನ್ನಿವೇಶ ನಡೆಯುತ್ತದೆ.. ಅದೇನು ಗೊತ್ತಾ. ಮಗು ತಂದೆಗೆ ಕೇಳ್ತು ಅಪ್ಪ ಅಮ್ಮ ಎಲ್ಲಿ ಅಂತಾ.. ಅದಕ್ಕೆ ತಂದೆ ನಾನು ಹೇಳಿದ್ದೇನೆ ಅಲ್ವಾ ಪಾಪು ಅಮ್ಮ ಕನಸಲ್ಲಿ ಬರ್ತಾಳೆ ಅದಕ್ಕೆ ತಾಚಿ ನಿದ್ದೆ ಮಾಡು ಅಂತ ಹೆಳ್ತಾರೆ.. ಆಗ ಮಗು ಅಪ್ಪ ಮೊನ್ನೆ ಕೇಳಿದರೆ ಅಮ್ಮ ದೇವರ ಹತ್ತಿರ ಹೋಗಿದ್ದಾಳೆ.. ದೇವರು ಅಮ್ಮನಿಗೆ ತುಂಬಾ ಕೆಲಸ ಕೊಟ್ಟಿದ್ದಾರೆ, ಅದೆಲ್ಲಾ ಮುಗಿಸಿ ಬರ್ತಾಳೆ ಅಂದೇ ಅಲ್ವಾ ಅಂತಾ.. ಹೌದು ನಾನು ಹೇಳಿದ್ದೇ ಈಗ ಮಲಗು ಪುಟಾ ಎಂದು ಮಗುವಿಗೆ ಕಣ್ಣೀರು ಕಾಣದಿರಲೆಂದು ಮಗ್ಗಲು ಮಲಗುತ್ತಾರೆ ತಂದೆ. ಮಗು ಮತ್ತೆ ಅಪ್ಪ ನಾನು ಹೋಗಿ ಅಮ್ಮನನ್ನು ಕರೆದುಕೊಂಡು ಬರುಬಹುದಲ್ವಾ ಎಂದು ಯೋಚನೆ ಮಾಡಿ ಅಪ್ಪನಿಗೆ ಈ ರೀತಿ ಕೇಳುತ್ತದೆ.

[widget id=”custom_html-3″]

Advertisements

ಅಪ್ಪ ನಾನು ನೀನು ದೇವರತ್ರ  ಹೋಗಿ ದೇವರನ್ನು ಕೇಳಿಕೊಂಡು ಅಮ್ಮನನ್ನು ಕರೆದುಕೊಂಡು ಬರೋಣ್ವಾ ಅಂತಾ.. ಆಯಿತು ಪುಟಾ ಕರ್ಕೊಂಡು ಬರೋಣ ಈಗ ಮಲಗು ಎಂದು ಮಗುವನ್ನು ಮಲಗಿಸುತ್ತಾರೆ.. ನಂತರ ತಂದೆ ಪಕ್ಕದ ಕೋಣೆಗೆ ಹೋಗಿ ಅ’ಗ್ನಿ ಪರ್ವತವನ್ನೇ ತನ್ನ ಕಣ್ಣೀರಿನಿಂದ ತೋಯಿಸಿ ನಂದಿಸುವಷ್ಟು ಅಳುತ್ತಾರೆ.. ಇದು ಯಾವುದು ಸಿನಿಮಾ ಕಥೆ ಅಥವಾ ಕಾದಂಬರಿಯಲ್ಲಿ ಬರುವ ದೃಶ್ಯವಲ್ಲ. ಆತ್ಮೀಯರೊಬ್ಬರು ತನ್ನ ಪ್ರಿಯ ಮಡದಿಯನ್ನು  ಕಳೆದುಕೊಂಡು ಅನುಭವಿಸುತ್ತಿರುವ ಯಾತನೆಯನ್ನು ನನ್ನೊಡನೆ ಹೇಳುವಾಗ ನನ್ನ ಕಣ್ಣಿನ ಒಂದೆರಡು ಹನಿ ಜಿನುಗಿತ್ತು. ಮನಸ್ಸು ತುಂಬಾ ಘಾಸಿಗೊಂಡಿತ್ತು. ನನ್ನ ಇಬ್ಬರು ಸ್ನೇಹಿತೆಯರು ಕ’ರೋ’ನ ರ’ಕ್ಕ’ಸನಿಂದ ತಮ್ಮ ಸೌಭಾಗ್ಯ ಕಳೆದುಕೊಂಡು ಚಿಕ್ಕವಯಸ್ಸಿನಲ್ಲಿ ವಿ’ಧ’ವೆಯಾದರು. ಅವರು ಮದುವೆಯಾಗಿ ಇನ್ನೂ ಎರಡು ವರ್ಷಗಳು ಕಳೆದಿಲ್ಲ ಆಗಲೇ ವಿಧಿಯು ಅವರ ಬಾಳಿನ ಮಗ್ಗುಲನ್ನೇ ಬದಲಾಯಿಸಿತು.

[widget id=”custom_html-3″]

ಕ’ರೋ’ನ ಎಂಬ ಮ’ಹಾಮಾರಿಯು ತನ್ನ ಕೆನ್ನಾಲಿಗೆ ಚಾಚಿ ಕಿತ್ತುಕೊಂಡದ್ದು ಬರೀ ಪ್ರಾ’ಣಗಳನ್ನಲ್ಲ, ಕ’ರೋ’ನದಿಂದ ಮಡಿದ ಕುಟುಂಬಗಳ ಖುಷಿಯನ್ನು, ನೆಮ್ಮದಿಯನ್ನು, ಆತ್ಮಸ್ಥೈರ್ಯವನ್ನು. ಕ’ರೋ’ನ 2 ನೇ ಅಲೆಯ ತೀವ್ರತೆಗೆ ಕಳೆದುಹೋದ ಪ್ರಾ’ಣಗಳೆಷ್ಟೋ.. ಕಳೆದುಕೊಂಡ ತಮ್ಮವರ ಅಂ’ತ್ಯಕ್ರಿಯೆಯನ್ನು ಸಹ ಮಾಡಲಾಗಲಿಲ್ಲವಲ್ಲ ಎಂದು ಮರುಗಿದ ಮನಗಳೆಷ್ಟೋ.. ಲೆಕ್ಕವಿಲ್ಲ. ಈಗ ಪರಿಸ್ಥಿತಿ ಸ್ವಲ್ಪ ನಿಯಂತ್ರಣವಿದೆಯಾದರೂ ಕ’ರೋ’ನ 2ನೇ ಅಲೆಯು ಕೆಲವರ ಜೀವನದಲ್ಲಿ ನೋವಿನ ಅಲೆಯಾಗಿ ಬಂದು ಬದುಕನ್ನೇ  ಬರಡಾಗಿಸಿತು. ಈ ನೋವಿನಲೆಯಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೂ ಅವರ ನೆನಪಲ್ಲೇ ಕಾಲ ಕಳೆಯುತ್ತಿರುವ ಮನಗಳಿಗೆ ಮುಂದಿನ ಜೀವನಕ್ಕೆ ಅಣಿಯಾಗಲು
ಆತ್ಮಸ್ಥೈರ್ಯ ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ.. ಈ ಮಾಹಿತಿಯನ್ನು ಹಂಚಿಕೊಂಡವರು.. ಗಾಯತ್ರಿ ಟೀವಿ. ಈ ಮಾಹಿತಿಯ ಬಗ್ಗೆ ನೀವೇನ್ ಹೇಳ್ತಿರಾ.