Advertisements

ಒಳ್ಳೆಯವನಾಗಿದ್ದಾಗ ಉದ್ಧಾರ ಆಗಲಿಲ್ಲ.. ಕೆಟ್ಟವನಾದ ಮೇಲೆ ನಾನು ಉದ್ಧಾರವಾಗಿದ್ದು! ಡಾಲಿ ಧನಂಜಯ ಅಸಲಿ ಕಥೆ ಏನು ಗೊತ್ತಾ?

Cinema

ಡಾಲಿ ಧನಂಜಯ್ ನಟನಾಗಿ, ಖ’ಳನಟನಾಗಿ, ಗುರುತಿಸಿಕೊಂಡಿರುವ ಕನ್ನಡ ಸಿನಿಲೋಕದ ಮೇರು ಕಲಾವಿದ. ಧನಂಜಯ್ ಅವರು ಇವತ್ತು ಗಳಿಸಿರುವ ನೇಮ್ ಫೇಮ್ ಅಷ್ಟು ಇಸಿಯಾಗಿ ಅವರನ್ನು ಹುಡುಕಿಕೊಂಡು ಬರಲಿಲ್ಲ. ಅದೆಷ್ಟೋ ರಾತ್ರಿಗಳ ನಿದ್ದೆ ತ್ಯಾಗ, ಸತತ ಶ್ರಮ ಎಲ್ಲವೂ ಇವತ್ತು ಧನಂಜಯ್ ಅವರನ್ನು ಡಾಲಿ ಧನಂಜಯ್ ಆಗಿಸಿದೆ. ಚಿಕ್ಕ ವಯಸ್ಸಿನಲ್ಲೇ ಧನಂಜಯ್ ಅವರಿಗೆ ಬಣ್ಣ ಹಚ್ಚುವತ್ತ ಮನಸ್ಸು ವಾಲುತಿತ್ತು. ಹಾಗಂದ ಮಾತ್ರಕ್ಕೆ ಅವರೇನು ಕಲಿಕೆಯಲ್ಲಿ ಹಿಂದೆ ಇರಲಿಲ್ಲ. ಓದಿನಲ್ಲಿ ಅಷ್ಟೆ ಉತ್ತೀರ್ಣರಾಗಿದ್ದರು. ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಅಷ್ಟೆ ಸಕ್ರಿಯರಾಗಿದ್ರು. ಡಾಲಿ ಅವರ ತಂದೆಯು ಸಹ ನಾಟಕಗಳನ್ನು ಪ್ರದರ್ಶಿಸುತ್ತಿದ್ದರಂತೆ ಇದರಿಂದ ತಂದೆಯಿಂದ ಮಗನು ಸಹ ಪ್ರಭಾವಿತರಾಗಿದ್ದಾರೆ.

[widget id=”custom_html-3″]

Advertisements

ಇನ್ನು ಚೆನ್ನಾಗಿ ಓದುತ್ತಿದ್ದ ಡಾಲಿ ಅವರು ಇಂಜಿನಿಯರಿಂಗ್ ಪದವೀದರರಾಗ್ತಾರೆ. ಇಂಜಿನಿಯರಿಂಗ್ ಕೋರ್ಸ ಮುಗಿದ ಬಳಿಕ ಪ್ರತಿಷ್ಟಿತ ಇನ್ಫೋಸಿಸ್ ಕಂಪನಿಯಲ್ಲಿ ಸಹ ಧನಂಜಯ್ ಅವರಿಗೆ ಕೆಲಸ ಸಿಗುತ್ತೆ. ಆದರೆ ಕೆಲಸಕ್ಕೆ ಸೇರುವ ದಿನವೇ ನನ್ನ ಬದುಕು ಇದಲ್ಲ, ಯಾರದೋ ಕೆಳಗಡೆ ಕೆಲಸ ಮಾಡುತ್ತ ಯಾಂತ್ರಿಕ ಬದುಕಿನಲ್ಲಿ ಒಗ್ಗಿಕೊಳ್ಳೋಕೆ ನಂಗೆ ಇಷ್ಟ ಇಲ್ಲ ಅಂತ ಹೇಳಿ ನಾಟಕಗಳತ್ತ ಧನಂಜಯ್ ಮುಖ ಮಾಡ್ತಾರೆ. ಸಿಕ್ಕ ಕೆಲಸವನ್ನು ಬಿಟ್ಟಾಯ್ತು, ಆದರೆ ಕೆಲಸ ಇಲ್ಲದೆ ಮನೆಯವರ ದುಡ್ಡಲ್ಲಿ ಕಾಲ ಕಳೆಯಬಹುದಾದ ಐಷಾರಾಮಿ ಬದುಕು ಧನಂಜಯ್‌ದಲ್ಲಿ ಈ ಹಿನ್ನಲೆ ಕೆಲಸಕ್ಕಾಗಿ ಮೈಸೂರಿಗೆ ಬಂದ್ರು. ಇವರಿಗೆ ಜರ್ಮನ್ ಮೂಲದ ಕ್ರಿಸ್ಟನ್ ಎನ್ನುವ ವ್ಯಕ್ತಿಯ ಪರಿಚಯವಾಗ್ತದೆ. ಆತನು ಸಹ ಥಿಯೇಟರ್ ನಡೆಸಿಕೊಂಡಿದ್ದರಿಂದ ಅವರೊಂದಿಗೆ ಕೆಲಸಕ್ಕೆ ಸೇರಿ ಅಲ್ಲಿಯೇ ಅಭಿನಯವನ್ನು ಕಲಿಯುತ್ತಾರೆ.

[widget id=”custom_html-3″]

ಅದಾದ ಬಳಿಕ ಮೈಸೂರಿನ ರಂಗಾಯಣ ನಾಟಕ ತಂಡವನ್ನು ಸೇರಿಕೊಂಡು ಸಾಕಷ್ಟು ಯಶಸ್ವಿ ಪ್ರದರ್ಶನವನ್ನು ಕೊಡುತ್ತಾರೆ. 2007ರ ಹೊತ್ತಿಗೆ ಬಾಲಗಣೇಶ್ ಎನ್ನುವ ಕಾರ್ಟೂನ್ ಶೋಗೆ ವಾಯ್ಸ್ ಡಬ್ ಮಾಡುವ ಅವಕಾಶ ಧನಂಜಯ್‌ಗೆ ಸಿಗುತ್ತದೆ. ಅದಾದ ಬಳಿಕ ಖ್ಯಾತ ನಿರ್ದೆಶಕ ಗುರುಪ್ರಸಾದ್ ಅವರ ಪರಿಚಯ ಆಗಿ ಅವರೊಂದಿಗೂ ಸಹ ಧನಂಜಯ್ ಕೆಲಸ ಮಾಡ್ತಾರೆ. ಬಳಿಕ ಧನಂಜಯ್ ಅವರೇ ನಿರ್ದೆಶಿಸಿ ಅಭಿನಯಿಸಿ ಮಾಡಿದಂತಹ ಜಯನಗರ 4th ಬ್ಲಾಕ್ ಎನ್ನುವ ಕಿರುಚಿತ್ರವನ್ನು ಧನಂಜಯ್ ಹೊರತರುತ್ತಾರೆ, ಈ ಚಿತ್ರ ಸಾಕಷ್ಟು ಚರ್ಚೆಗೆ ಒಳಗಾಗಿದ್ದು ಹೊಸ ನಟನ ಬಗ್ಗೆ ಭರವಸೆಯ ಮಾತುಗಳು ಕೇಳಿ ಬಂದಿದ್ದು ಸುಳ್ಳಲ್ಲ. ಇದಾದ ಬಳಿಕ ಎಪಿ ಅರ್ಜುನ್ ಅವರು ಆಕ್ಷನ್ ಕಟ್ ಕೇಳಿದ ರಾಟೆ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಟನಾಗಿ ಗುರಿತುಸಿಕೊಳ್ತಾರೆ.

[widget id=”custom_html-3″]

ಬಳಿಕ ಎರಡನೇ ಸಲ, ಜೆಸ್ಸಿ, ಅಲ್ಲಮ, ಹ್ಯಾಪಿ ನ್ಯೂ ಇಯರ್ ಹೀಗೆ ಸಾಲು ಚಿತ್ರಗಳಲ್ಲಿ ನಟಿಸಿದ್ರು ಕೂಡ ಧನಂಜಯ್ ಅವರ ಅಭಿನಯಕ್ಕೆ ಚಪ್ಪಾಳೆ ಸಿಕ್ತಿತ್ತೆ ವಿನಃ ಧನಂಜಯ್ ಅವರ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಕೊಡ್ತಿರಲಿಲ್ಲ. ಇದಾದ ಬಳಿಕ ಟಗರು ಚಿತ್ರದಲ್ಲಿ ಶಿವಣ್ಣನೊಂದಿಗೆ ನಟಿಸುವ ಅವಕಾಶ ಧನಂಜಯ್‌ಗೆ ಸಿಗುತ್ತದೆ. ಈ ಚಿತ್ರದಲ್ಲಿಯೇ ಅದ್ಭುತ ಖಳನಟನಾಗಿ ಗುರುತಿಸಿಕೊಂಡು ಜನಗಳ ಪಾಲಿಗಿ ಅಂದಿನಿಂದ ಧನಂಜಯ್ ಡಾಲಿಯಾಗಿಬಿಡ್ತಾರೆ. ಈ ಚಿತ್ರ ಧನಂಜಯ್ ಅವರಿಗೆ ಒಂದು ಒಳ್ಳೆ ಬ್ರೇಕ್ ಕೊಟ್ಟಿತು. ಬಳಿಕ ದರ್ಶನ್ ಅಭಿನಯದ ಯಜಮಾನ ಸಿನಿಮಾದಲ್ಲಿ ಸಹ ಡಾಲಿ ವಿಲನ್ ಆಗಿ ಅಭಿನಯಿಸಿ ಜನಮನ ಗೆದ್ದರು.

[widget id=”custom_html-3″]

ಬಳಿಕ ಡಾಲಿಯ ಅದ್ಭುತ ನಟನಾ ಶೈಲಿಯಿಂದ ಮನಸೋತು ಡೈರೆಕ್ಟರ್ ಸೂರಿ ಅವರು ಪಾಪ್‌ಕಾರ್ನ ಮಂಕಿ ಎನ್ನುವ ಬ್ಯುಟಿಫುಲ್ ಸಿನಿಮಾವನ್ನು ನಿರ್ದೆಶಿಸಿದ್ರು. ಈ ಚಿತ್ರದಲ್ಲಿನ ಧನಂಜಯ್ ಅವರ ರೋಚಕ ಮ್ಯಾನರಿಸಂ, ಲುಕ್ ಸ್ಟೈಲ್ ಸಾಕಷ್ಟು ಗಾಂಧಿನಗರದಲ್ಲಿ ಚರ್ಚೆ ಹುಟ್ಟಿಸಿತು.
ಒಟ್ಟಾರೆಯಾಗಿ ನಾಯಕನಟನಾಗಿಯೂ ಒಳ್ಳೆ ಫಾರ್ಮ್ನಲ್ಲಿ ಡಾಲಿ ಈಗ ಗುರುತಿಸಿಕೊಂಡಿದ್ದು, ಖ’ಳನಟನಾಗಿಯೂ ಸಹ ಮಿಂಚುತ್ತಿದ್ದಾರೆ. ಇವರು ಮುಂದೆ ಯಾವರೀತಿ ಎರಡು ತದ್ವಿರುದ್ಧ ಶೇಡ್‌ಗಳನ್ನು ಮ್ಯಾನೇಜ್ ಮಾಡ್ತಾರೆ ಅಂತ ಕಾದು ನೋಡಬೇಕು..