Advertisements

ಈ ಪೆಕ್ರುನಾ ಎಲ್ಲಿಂದ ಹಿಡ್ಕೊಂಡ್ ಬಂದ್ರಿ ಅಂದವರು ಇವತ್ತು ನನ್ನ ಮನೆ ಕಾಯ್ತಿದ್ದಾರೆ.. ಈತ ದೊಡ್ಡ ಸ್ಟಾರ್ ಆಗಿದ್ದು ಹೇಗೆ ಗೊತ್ತಾ?

Cinema

ಒಂದು ಕಾಲದಲ್ಲಿ ಇವನೆಂಥಾ ನಟನಪ್ಪಾ.. ಇವನದ್ದೆಂತಾ ಸ್ಟೈಲಪ್ಪಾ ಅಂದೊರೆಲ್ಲ ಇವತ್ತು ಈ ನಟನ ಕಾಲ್‌ಶೀಟ್‌ಗೆ ಕ್ಯೂ ನಿಲ್ತಿದ್ದಾರೆ. ಅಂದಹಾಗೆ ಆ ನಟ ಬೇರೆ ಯಾರು ಅಲ್ಲ ಸಿನಿರಸಿಕರ ನೆಚ್ಚಿನ ನಟ ಧನುಷ್ ಎಸ್ ಅವರು ತಮಿಳುನಾಡಿನಲ್ಲಿ 1983ರಲ್ಲಿ ಜುಲೈ 28ರಂದು ಜನಿಸ್ತಾರೆ. ಇವರ ತಂದೆ ಕಸ್ತೂರಿ ರಾಜ್ ಹಾಗೂ ಇವರ ಅಣ್ಣ ಸೆಲ್ವರಾಜನ್ ಸಹ ಪ್ರಖ್ಯಾತ ನಿರ್ದೆಶಕರು. ಧನುಷ್ ಮೂಲ ಹೆಸರು ವೆಂಕಟೇಶ್ ಪ್ರಭು. ವೆಂಕಟೇಶ್ ಓದುವುದರಲ್ಲಿ ಆಸಕ್ತಿ ತೋರಸಿದವನೇ ಅಲ್ಲ. ಹೈಸ್ಕೂಲ್ ಓದುವಾಗಲೇ ಪ್ರೀತಿ ಪ್ರೇಮ ಅಂತ ಸುತ್ತಿ ಮನಸ್ಸನ್ನು ಹಾಳು ಮಾಡಿಕೊಂಡವನು. ಕಾಲೇಜು ಮೆಟ್ಟಿಲು ಹತ್ತಿದ ಮೇಲಂತು ಹದಿಹರೆಯದ ಮೀಸೆ ಚಿಗುರದ ವೆಂಕಟೇಶ್ ಪ್ರೀತಿ ಪ್ರೇಮ ಅಂತನೇ ಜೀವಿಸುತ್ತಿರುತ್ತಾನೆ.

Advertisements

ಇದರಿಂದ ಕಸ್ತೂರಿ ರಾಜ್ ಅವರು ಇವನು ಓದುವುದರಲ್ಲಿ ಅಂತು ಮುಂದೆ ಬರಲ್ಲ ಕೊನೆಪಕ್ಷ ಇವನನ್ನು ಸಿನಿಮಾದಲ್ಲಿ ಆದ್ರು ಬಣ್ಣ ಹಚ್ಚುವಂತೆ ಮಾಡಬೇಕು ಅಂತ ಸತತ ಪ್ರಯತ್ನ ಪಟ್ಟು ವೆಂಕಟೇಶ್ ಅವರಿಗೆ ಬಣ್ಣ ಹಚ್ಚಲು ಪ್ರೇರೇಪಿಸ್ತಾರೆ. ಆದರೆ ಮೊದ ಮೊದಲು ಸಿನಿರಂಗಕ್ಕೆ ಬರಲು ಸುತಾರಂ ಒಪ್ಪದ ವೆಂಕಟೇಶ್ ತಂದೆಯ ಆಸೆಯಂತೆ ಬಣ್ಣ ಹಚ್ಚಿದ ಇವರ ಮೊದಲ ಸಿನಿಮಾವನ್ನು ಸಹ ಕಸ್ತೂರಿ ರಾಜನ್ ಅವರೇ ನಿರ್ದೆಶನ ಮಾಡಿದ್ದಾರೆ. ಈ ಸಿನಿಮಾ ಮಾಡುವಾಗ ವೆಂಕಟೇಷ್ ಹುಡುಗಾಟಿಕೆಯ ಬುದ್ದಿಗೆ ಸಾಕಷ್ಟು ಭಾರಿ ತಂದೆ ಬಳಿ ಬೈಸಿಕೊಂಡಿದ್ರಂತೆ. ತುಳುವಾಧೋ ಇಲಾಮಯ ಇವರು ಅಭಿನಯಿಸಿದ ಪ್ರಥಮ ಚಿತ್ರ. ಈ ಚಿತ್ರದಲ್ಲಿಯೇ ವೆಂಕಟೇಶ್‌ನನ್ನು ಕಸ್ತೂರಿ ರಾಜನ್ ಅವರು ಧನುಷ್ ಆಗಿ ಜಗತ್ತಿಗೆ ಪರಿಚಯಿಸುತ್ತಾರೆ.

ಈ ಸಿನಿಮಾ ಆಗಿನ ಕಾಲದಲ್ಲಿಯೇ ಬ್ಲಾ’ಕ್ ಬಾ’ಸ್ಟರ್ ಹಿಟ್ ಆಗುತ್ತೆ, ಆದರೂ ಆಗ ಧನುಷ್ ಲುಕ್, ಸ್ಟೈಲ್, ಮೆನರಿಸಂಗೆ ಮಾತನಾಡಿದವರು ಅದೆಷ್ಟೋ, ಅವುಗಳನ್ನೆಲ್ಲ ಮೆಟ್ಟಿನಿಂತು ಸ್ಥೈರ್ಯದಿಂದ ಇರುವಂತೆ ದನುಷ್‌ಗೆ ಅವರ ತಂದೆ ತಿಳಿಸಿದ್ರು. ನಂತರ ಧನುಷ್ ಅವರ ಹೆಂಡತಿಯೇ ನಿರ್ದೆಶಿಸಿದ 3 ಎನ್ನುವ ಸಿನಿಮಾ ಸಖತ್ ಹಿಟ್ ತಂದಿಕೊಟ್ಟಿತ್ತು. ಈ ಸಿನಿಮಾದ ವೈ ದಿಸ್ ಕೊಲವರಿ ಡಿ ಹಾಡು ಯುಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆಯಿತು. ಇದನ್ನು ಧನುಷ್ ಅವರೇ ಹಾಡಿರುವುದು ಈ ಹಾಡಿನ ಇನ್ನೊಂದು ವಿಶೇಷ. 100 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡ ಮೊದಲನೆಯ ಭಾರತೀಯ ವಿಡಿಯೋ ಎಂಬ ಹೆಗ್ಗಳಿಕೆಗು ಪಾತ್ರವಾಯ್ತು.

[widget id=”custom_html-3″]

ಧನುಷ್‌ ಸರಳ ಸುಂದರ ನೈಜ ನಟನೆಗೆ ಸಾಕಷ್ಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಮೂರು ನ್ಯಾಷನಲ್ ಫಿಲಂ ಅವಾರ್ಡ್, ಏಳು ಫಿಲಂ ಫೇರ್ ಅವಾರ್ಡ್ ಸಹ ಲಭಿಸಿದೆ. ತೆಲುಗು ತಮಿಳಿನಲ್ಲಿ ಅಭಿನಯಿಸುವುದರ ಜೊತೆಗೆ ಹಿಂದಿಯಲ್ಲಿಯೂ ಅಭಿನಯಿಸಿದ್ದು, ಅಮಿತಾಬ್ ಬಚ್ಚನ್ ಅವರ ಜೊತೆ ತೆರೆ ಹಂಚಿಕೊಂಡ ಕೀರ್ತಿ ಧನುಷ್‌ಗಿದೆ. ಧನುಷ್ ಅವರ ಸಿನಿಮಾದಲ್ಲಿನ ಮನೋಜ್ಞ ಅಭಿನಯ ನೋಡಿ ಸೂಪರ್‌ಸ್ಟಾರ್ ರಜನಿಕಾಂತ್ ಅವರೇ ತಮ್ಮ ಮನೆಗೆ ಕರೆಸಿ ಧನುಷ್‌ರಿಗೆ ಶುಭಾಷಯ ತಿಳಿಸಿದ್ದಾರೆ.

[widget id=”custom_html-3″]

ನಂತರ ಧನುಷ್ ಹಾಗೂ ರಜನಿಕಾಂತ್ ಅವರ ಮಗಳು ಐಶ್ವರ್ಯ ಇಬ್ಬರು ಉತ್ತಮ ಸ್ನೇಹಿತರಾಗಿರ‍್ತಾರೆ. ಸ್ನೇಹ ಪ್ರೀತಿಯಾಗಿ ಪ್ರೀತಿ ಮದುವೆ ಹಂತಕ್ಕೆ ಬಂದು ನಿಲ್ಲುತ್ತೆ, ಆಗ ಒಬ್ಬ ಸಾಮನ್ಯ ಕಲಾವಿದನಿಗೆ ಸೂಪರ್‌ಸ್ಟಾರ್ ಮಗಳನ್ನು ಕೊಡಬೇಕಾ ಅಂತ ರಜನಿ ಎಂದಿಗೂ ಯೋಚಿಸಲೇಯಿಲ್ಲವಂತೆ. ಇಬ್ಬರಿಗೂ ವಿವಾಹ ಮಾಡಿಸಿಯೇ ಬಿಟ್ರು. ಹೀಗೆ ವೈಯಕ್ತಿಕ ಬದುಕಿನಲ್ಲಿಯೂ ಸಿನಿ ರಂಗದಲ್ಲಿಯೂ ಪ್ರಜ್ವಲಿಸ್ತಾಯಿರುವ ಧನುಷ್ ಇನ್ನಷ್ಟು ಮಗದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಲಿ ಎಂಬುವುದೇ ನಮ್ಮ ಹಾರೈಕೆ.. ಇವರ ಬಗ್ಗೆ ನಿವೇನ್ ಹೇಳ್ತೀರಾ.