Advertisements

ರುಚಿ ರುಚಿಯಾದ ದೊಣ್ಣೆ ಮೆಣಸಿನಕಾಯಿ ಎಣ್ಣೆಗಾಯಿ ಮಾಡುವ ವಿಧಾನ.

Aduge

ಮೆಣಸಿನಕಾಯಿ ಎಣ್ಣೆಗಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು : 1/4 kg ದಪ್ಪಮೆಣಸಿನಕಾಯಿ ಡೊಣ್ಣೆ ಮೆಣಸಿನಕಾಯಿ, 1 ಈರುಳ್ಳಿ ಸ್ಲೈಸ್ ಮಾಡಿ, ಎರಡು ಹಿಡಿ ಹುರಿದ ಶೇಂಗಾ ಬೀಜ, ಒಂದು ಹಿಡಿ ಹುರಿಗಡಲೆ ಒಂದು ಹಿಡಿ , ಕಾಯಿತುರಿ, 2 ಟೀಸ್ಪೂನ್ ಸಾಂಬಾರದ ಪುಡಿ, 2 ಟೀ ಸ್ಪೂನ್ ಗುರೆಳ್ಳು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ, 1 ಚಮಚ ಹುಣಸೆ ರಸ, 1ಗಡ್ಡೆ ಸುಲಿದ ಬೆಳ್ಳುಳ್ಳಿ, ಸ್ವಲ್ಪ ಕೊತ್ತುಂಬರಿಸೊಪ್ಪು ಮತ್ತು ಕರಿಬೇವು.

Advertisements

ಮಾಡುವ ವಿಧಾನ : ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ಪ್ಲಸ್ ಆಕಾರದಲ್ಲಿ ಹೆಚ್ಚಿ, ಮಧ್ಯದಲ್ಲಿರುವ ಬೀಜಗಳನ್ನು ಸ್ವಲ್ಪಭಾಗ ತೆಗೆಯಿರಿ. ಬೀಜ ತೆಗೆಯದೆ ಇದ್ದರೆ ತುಂಬಾ ಕಾರ ಆಗುತ್ತದೆ. ಆದ್ದರಿಂದ ಸ್ವಲ್ಪಭಾಗ ಬೀಜ ತೆಗೆಯಿರಿ .

ಶೇಂಗಾ ಬೀಜ , ಹುರಿಗಡಲೆ , ಸಾಂಬಾರದ ಪುಡಿ , ಗುರೆಳ್ಳುಪುಡಿ , ಉಪ್ಪು, ಬೆಲ್ಲ, ಬೆಳ್ಳುಳ್ಳಿ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಈರುಳ್ಳಿ ಸ್ಲೈಸ್ ಕಾಯಿತುರಿ ಕೊತ್ತಂಬರಿ ಕರಿಬೇವು ಹಾಕಿ ಮತ್ತೊಂದು ಸುತ್ತು ಮಿಕ್ಸಿ ಮಾಡಿಕೊಳ್ಳಿ. ಇದಕ್ಕೆ ಹುಣಸೇರಸ ಮತ್ತು 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ. ಕತ್ತರಿಸಿಟ್ಟ ಮೆಣಸಿನಕಾಯಿಯಲ್ಲಿ ಈ ಮಸಾಲೆಯನ್ನು ತುಂಬಿಸಿ.

ಗ್ಯಾಸ್ ಮೇಲೆ ಒಂದು ಕಡಾಯಿ ಇಟ್ಟು ನಾಲ್ಕು ಚಮಚ ಎಣ್ಣೆ ಹಾಕಿ ಕಾದನಂತರ ಸಾಸಿವೆ, ಜೀರಿಗೆ ಕರಿಬೇವು ಹಾಕಿ, ಸಾಸಿವೆ ಸಿಡಿದ ನಂತರ ತುಂಬಿಟ್ಟ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಎರಡು ನಿಮಿಷ ಹುರಿಯಿರಿ. ಮೆಣಸಿನಕಾಯಿ ಸ್ವಲ್ಪ ಬಾಡಿದ ನಂತರ ಉಳಿದ ಮಸಾಲೆಗೆ ಸ್ವಲ್ಪ ನೀರು ಸೇರಿಸಿ ಕಲೆಸಿ ಇದಕ್ಕೆ ಸೇರಿಸಿ. ಗಟ್ಟಿ ಅನಿಸಿದರೆ ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ಸ್ವಲ್ಪ ಹೊತ್ತು ಚೆನ್ನಾಗಿ ಕುದಿಸಿ.

5 ನಿಮಿಷದಲ್ಲಿ ಮೆಣಸಿನಕಾಯಿ ಬೆಂದಿರುತ್ತದೆ ಮೇಲೆ ಸ್ವಲ್ಪ ಕೊತ್ತುಂಬರಿಸೊಪ್ಪು ಹಾಕಿ .ಬಿಸಿ ಬಿಸಿ ಜೋಳದ ರೊಟ್ಟಿ ಮೆಣಸಿನಕಾಯಿ ಎಣ್ಣೆಗಾಯಿ ಯೊಂದಿಗೆ ಸವಿಯಿರಿ. ಮೆಣಸಿನಕಾಯಿಯಲ್ಲಿ ಖಾರ ಇರುವುದರಿಂದ , ಅಚ್ಚಕಾರದಪುಡಿ ಹಾಕುವ ಅಗತ್ಯವಿಲ್ಲ.  ಮೆಣಸಿನಕಾಯಿ ಜೊತೆಗೆ 4 ಚಿಕ್ಕ ಸಾಂಬಾರ್ ಈರುಳ್ಳಿ ಹಾಕಿರಿ. ಅದು ಆಪ್ಷನ್.