Advertisements

ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ? ಮದುವೆಗೆ ಯಾರೆಲ್ಲಾ ಸ್ಟಾರ್ ನಟರು ಬಂದಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನೆನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇಮಿಗಳ ದಿನದಂದೇ ಈ ಜೋಡಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.. ಇವರಿಬ್ಬರ ವಿವಾಹ ಮುಹೂರ್ತಕ್ಕೆ ಸ್ಯಾಂಡಲ್ವುಡ್ ಸ್ಟಾರ್ ಗಳಾದ.. ಪುನಿತ್ ರಾಜಕುಮಾರ್, ಶಿವರಾಜ್ ಕುಮಾರ್, ಆಶಿಕಾ ರಂಗನಾಥ್ ಸೇರಿದಂತೆ ಹಲಾವರು ನಟ ನಟಿಯರು ಭಾಗಿಯಾಗಿದ್ದರು. ಬಹಳ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿರುವ ಈ ಸ್ಟಾರ್ ಜೋಡಿಗಳ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಅಂತ ನೋಡೊಣ ಬನ್ನಿ.

Advertisements

ವಿವಾಹವಾದ ನಂತರ ಮಿಲನ ನಾಗರಾಜ್ ಮತ್ತು ಕೃಷ್ಣ ಮಾತನಾಡಿ.. ಮಿಲನ ನಾಗರಾಜ್ ಸ್ವಿಮರ್ ಹಾಗಾಗಿ ಈ ಮೊದಲು ಮಾತನಾಡುವಾಗ ಸ್ವಿಮ್ಮಿಂಗ್ ಫುಲ್ ನಲ್ಲಿ ಮದುವೆಯಾಗಬೇಕು ಎಂದು ಹೇಳಿಕೊಂಡಿದ್ದರು. ಇದೇ ತರಹ ಇನ್ನೂ ತುಂಬಾ ಆಸೆಗಳನ್ನ ಹೇಳಿಕೊಂಡಿದ್ದರು.. ಅದೇ ರೀತಿ ವಿವಾಹ ಸಿದ್ದತೆ ನಡೆಸುವ ಪ್ಲಾನರ್ ಬಳಿ ಮಾತನಾಡಿ ಮದುವೆಯ ಸಂಪೂರ್ಣ ತಯಾರಿ ಮಾಡಲಾಯಿತು. ಪ್ರೇಮಿಗಳ ದಿನದಲ್ಲಿ ಏನಾದರೂ ಹೊಸತು ಬೇಕು ಎಂದು ಅನಿಸುತ್ತಿತ್ತು..

ಇದೇ ದಿನ ನಮ್ಮ ವಿವಾಹವಾಗಿದೆ. ಈಗ ಪರಿಪೂರ್ಣ ಅನಿಸುತ್ತಿದೆ ಎಂದು ಹೇಳಿದರು. ಮಿಲನ ನಾಗರಾಜ್ ಅವರು ಏಪ್ರಿಲ್ 25, 1989 ರಲ್ಲಿ ಜನಿಸಿದ್ದೂ.. 31 ವರ್ಷ ವಯಸ್ಸಾಗಿದೆ. ಡಾರ್ಲಿಂಗ್ ಕೃಷ್ಣ ಅವರು ಜೂನ್ 12, 1985 ರಲ್ಲಿ ಜನಸಿದ್ದು 35 ವರ್ಷ ವಯಸ್ಸಾಗಿದೆ.. ಇವರಿಬ್ಬರ ನಡುವೆ ಕೇವಲ 4 ವರ್ಷಗಳ ವಯಸ್ಸಿನ ಅಂತರವಿದೆ. ಪ್ರೇಮಿಗಳ ದಿನ ವಿಶೇಷವಾಗಿ ನವಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಯ ಮುಂದಿನ ಜೀವನ ಸುಖಮಯವಾಗಿ ಇರಲೆಂದು ಆಶಿಸೋಣ..