Advertisements

ಸರಿಗಮಪದಲ್ಲಿ ಸೋತ ಕಂಬದ ರಂಗಯ್ಯನನ್ನು ಮನೆಗೆ ಕರೆಸಿಕೊಂಡ ದರ್ಶನ್ ಮಾಡಿದ್ದೇನು? ಸಿಕ್ಕೇ ಬಿಡ್ತು ದೊಡ್ಡ ಚಾನ್ಸ್..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತರೆಯ ದೊಡ್ಡ ರಿಯಾಲಿಟಿ ಶೋ ಸರಿಗಮಪ ಸೀಸನ್ 17 ಮುಕ್ತಾಯಗೊಂಡಿದೆ.. ಶ್ರಿನಿಧಿ ಶಾಸ್ತ್ರಿ ಈ ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದಾರೆ. ಆದರೆ ಈ ತೀರ್ಪು ಸರಿಯಾಗಿಲ್ಲ ಎಂದು ಸಾಕಷ್ಟು ಪ್ರೇಕ್ಷಕರು ದ್ವನಿ ಎತ್ತಿದ್ದರು.. ಈ ಕಾರ್ಯಕ್ರಮದಲ್ಲಿ ಕಂಬದ ರಂಗಯ್ಯ ಗೆಲ್ಲಬೇಕಾಗಿತ್ತು ಎಂದು ಸಾವಿರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ‌‌. ಇದೀಗ ಸರಿಗಮಪದಲ್ಲಿ ಸೋತ ಕಂಬದ ರಂಗಯ್ಯ ಅವರನ್ನು ಮನೆಗೆ ಕರೆಸಿಕೊಂಡ ದರ್ಶನ್ ಅವರು ಏನು ಮಾಡಿದ್ದಾರೆ ಎಂದು ನೋಡೊಣ ಬನ್ನಿ..

Advertisements

ದರ್ಶನ್ ಅವರು ಮೊದಲಿನಿಂದಲೂ ರಿಯಾಲಿಟಿ ಶೋಗಳಿಂದ ದೂರ ಉಳಿದಿದ್ದಾರೆ.. ಮಜಾ ಟಾಕೀಸ್ ಮತ್ತು ವೀಕೆಂಡ್ ವಿತ್ ರಮೇಶ್ ಶೋಗೆ ಹೋಗಲು ಕಂಡೀಷನ್ ಹಾಕಿ ಹೋಗಿದ್ದರು.. ಅದೇನೆಂದರೆ ಅಲ್ಲಿನ ಸಂಭಾವನೆಯನ್ನು ರೈತರಿಗೆ ನೀಡಬೇಕೆಂದು ಹೇಳಿದ್ದರು. ಸಂದರ್ಶನ ಒಂದರಲ್ಲಿ ಮಾತನಾಡಿದ ದರ್ಶನ್ ಅವರು ರಿಯಾಲಿಟಿ ಶೋಗಳಿಗೆ ನಾವು ಹೋದರೆ ಅವರ ಕೈಗೊಂಬೆಯಾಗಬೇಕು, ಅವರ ಹೇಳಿದ ಹಾಗೆ ನನ್ನಿಂದ ಕುಣಿಯಲು ಸಾದ್ಯವಿಲ್ಲ.. ಸ್ಪರ್ಧಿಗಳು ಚೆನ್ನಾಗಿ ಹಾಡುತ್ತಿದ್ದರು ಟಿ.ಆರ್‌‌‌.ಪಿ ಗೋಸ್ಕರ ಅವರನ್ನು ಬೈಯ್ಯಬೇಕು ಮತ್ತು ಎಲಿಮಿನೆಟ್ ಮಾಡಬೇಕು..

ಈ ಕಾರಣಕ್ಕಾಗಿ ನಾನು ರಿಯಾಲಿಟಿ ಶೋಗಳಿಂದ ದೂರವಿದ್ದೇನೆ‌ ಎಂದು ಹೇಳಿದ್ದರು. ಇದೀಗ ಸರಿಗಮಪ ಕಾರ್ಯಕ್ರಮದಲ್ಲಿ ಸೋತಿರುವ ಕಂಬದ ರಂಗಯ್ಯ ಅವರನ್ನು ಮನೆಗೆ ಕರೆಸಿಕೊಂಡಿರುವ ದರ್ಶನ್ ಅವರು.. ನೆನ್ನೆ ಕೆಲವು ಹಾಡುಗಳನ್ನು ಕೇಳಿದ್ದೇನೆ, ನಿಮಗೆ ಒಳ್ಳೆಯ ದ್ವನಿ ಇದೆ. ಸೋತಿರುವ ಬಗ್ಗೆ ಬೇಜಾರು ಮಾಡಿಕೊಳ್ಳಬೇಡ.. ಸೋಲೇ ಗೆಲುವಿನ ಮೆಟ್ಟಿಲು ಮುಂದೊಂದು ದಿನ ಒಳ್ಳೆಯ ಗಾಯಕನಾಗುತ್ತಿಯಾ ಸಧ್ಯದಲ್ಲಿ ನಿನಗೊಂದು ಗುಡ್ ನ್ಯೂಸ್ ಸಿಗಲಿದೆ ಎಂದು ಹೇಳಿದ್ದಾರೆ.. ಇದೀಗ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..