Advertisements

ಒಂದು ಸಿನಿಮಾ ಗೆ ದರ್ಶನ್ ಗೆ ಎಷ್ಟು ಸಂಭಳ! ಎಷ್ಟು ಕೋಟಿಗೆ ಅಧಿಪತಿ ಗೊತ್ತಾ?

Cinema

ಮೆಜೆಸ್ಟಿಕ್ ಎಂಬ ಅದ್ಭುತ ಮಾಸ್ ಸಿನಿಮಾದ ಮೂಲಕ ಅಭಿಮಾನಿಗಳ ಮನಕದ್ದ ನನ್ನ ಪ್ರೀತಿಯ ರಾಮು ಫೇಮ್ ಡಿ ಬಾಸ್ ಅಭಿಮಾನಿಗಳ ಸಂಖ್ಯೆ ಸಾಗರ.. ಸಾಗರ.. ದಚ್ಚು ಒಂದು ಮಾತನಾಡಿದ್ರೂ ಅದನ್ನು ತಲೆ ಮೇಲೆ ಇಟ್ಟು ಮಾಡಲು ಕೋಟಿ ಅಭಿಮಾಇಗಳು ಬರೋದ್ರಲ್ಲಿ ಡೌಟೇ ಇಲ್ಲ. ದಚ್ಚು ಆಸ್ತಿ ಅಂದ್ರೆ ಅದು ಅಭಿಮಾನಿಗಳು, ಗಜ. ದಾಸ, ಸಾರಥಿ, ಅರ್ಜುನ್, ಅಯ್ಯ, ಸ್ವಾಮಿ, ಹೀಗೆ ನಾನಾ ಸಿನಿಮಾಗಳಲ್ಲಿ ಡಿಫರೆಂಟ್ ಗೆಟಪ್ ಅಲ್ಲಿ ಕಾಣಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದೊಂದು ಸಿನಿಮಾಗೂ ಅಭಿನಯದ ಮುಖೇನ ಜೀವ ತುಂಬಿದ್ದಾರೆ. ಸಂಗೊಳ್ಳಿ ರಾಯಣ್ಣನಾಗಿ ಘರ್ಜಿಸಿ, ದುರ್ಯೋಧನನಾಗಿ ಆರ್ಭಟಿಸಿ, ನವಗೃಹದಲ್ಲಿ ಖಳನಟನಾಗಿಯೂ ಮಿಂಚಿ ತನ್ನ ಅಭಿನಯ ಕಲೆಯನ್ನು ಮೆರೆದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಖಾರವಾದ ಮಾತುಗಳಿಂದ, ನೇರವಾದ ವ್ಯಕ್ತಿತ್ವದಿಂದ ಎಡಗೈ ಅಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಸಹಾಯ ಮಾಡ್ತಾ ಹೆಸರು ಮಾಡಿದ ಸೆಲೆಬ್ರಿಟಿ ನಮ್ಮ ಡಿ ಬಾಸ್..

Advertisements

ಅಭಿಮಾನಿಗಳೇ ಆಸ್ತಿ ಅಂತಿರುವ ದರ್ಶನ್ ಅವ್ರ ನಿಜವಾದ ಆಸ್ತಿ ಏಷ್ಟು ಗೊತ್ತಾ..?
ಎರಡು ದಶಕಗಳ ಸುದೀರ್ಘ ಜರ್ನಿಯಲ್ಲಿ ದಚ್ಚು ಗಳಿಸಿದ ಆಸ್ತಿ ಏಷ್ಟು ಗೊತ್ತಾ.? ಅಭಿನಯದ ಅವಕಾಶಗಳನ್ನು ಹುಡುಕುತ್ತ ಬೆಂಗಳೂರಿಗೆ ಬಂದ ಡಿ ಬಾಸ್ಗೆ ಬರೀ ನಿರಾಸೆ.. ಕೊನೆಗೆ ಲೈಟ್ ಬಾಯ್ ಜೀವನವನ್ನು ಆರಂಭ ಮಾಡಿದ ದರ್ಶನ್ ಅವರಿಗೆ ಅನುಚಿ ನಾಗರಾಜ್ ಅವರ ಪರಿಚಯವಾಯಿತು. ಹೀಗೆ ದರ್ಶನ್ ಅದಾದ ಮೇಲೆ ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸಿದರು. 1998ರಲ್ಲಿ ತಮ್ಮ ಮಹಾಭಾರತ ಸೀರಿಯಲ್ನಲ್ಲಿ ದರ್ಶನ್ಗೆ ಅವಕಾಶ ಸಿಗುತ್ತೆ. ಅದಾದನಂತರ ಡಿಟೆಕ್ಟಿವ್ ಚಂದ್ರಕಾಂತ ಎಂಬ ಸೀರಿಯಲ್ನಲ್ಲಿ ದರ್ಶನ್ ನಟಿಸಿದ್ದರು. ಮೆಜೆಸ್ಟಿಕ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟಂತಹ ಈ ಅದ್ಭುತ ನಟ ದಾಸ, ಪೊರ್ಕಿ, ಸುಂಟರಗಾಳಿ, ಕಲಾಸಿಪಾಳ್ಯ, ಸಾರಥಿ, ಬುಲ್ ಬುಲ್, ಗಜ, ರಾಬರ್ಟಗಳಂತಹ ಹತ್ತು ಹಲವಾರು ಹಿಟ್ ಸಿನಿಮಾಗಳನ್ನು ಮಾಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸಲ್ಲಿ ಶಾಸ್ವತವಾಗಿ ಅಚ್ಚೊತ್ತಿದ್ರು.

ಎಲ್ಲ ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಕೊಟ್ಟಂತಹ ದರ್ಶನ್ ಬಳಿ ಲ್ಯಾಂಬೋರ್ಗಿನಿ, ಬೆನ್ಸ್, ಫಾರ್ಚುನರ್, ಬಸ್ಟಾಂಡ್, ರೇಂಜ್ ರೋವರ್ ಸೇರಿದಂತೆ ಹತ್ತಾರು ಕಾರುಗಳಿವೆ. ದರ್ಶನ್ ಅವ್ರಿಗೆ ಕಾರ್ ಅಂದ್ರೆ ಸಖತ್ ಇಷ್ಟ ಅದಕ್ಕೆ ಬಗೆ ಬಗೆಯ ಕಾರುಗಳು ಅವರ ಬಳಿಯಿದೆ. ಇನ್ನು ಡಿ ಬಾಸ್ ಒಂದು ಸಿನಿಮಾ ಮಾಡುವುದಕ್ಕೆ ಏನಿಲ್ಲ ಅಂದ್ರೂ ಬರೋಬ್ಬರಿ 13 ರಿಂದ 15 ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.ಮೂಲಗಳ ಪ್ರಕಾರ ದರ್ಶನ್ ಅವರ ಆಸ್ತಿಯ ಒಟ್ಟು ಮೌಲ್ಯ 150ರಿಂದ 170 ಕೋಟಿ ಎಂದು ಹೇಳಲಾಗುತ್ತಿದೆ.