Advertisements

ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೇಕಪ್ ಮ್ಯಾನ್ ಇನ್ನಿಲ್ಲ, ಕಂಬನಿ ಮಿಡಿದ ದರ್ಶನ್. ಏನಾಗಿತ್ತು ಗೊತ್ತಾ?

Cinema News

ನಟ ದರ್ಶನ್ ಅವರಿಗೆ ಮೇಕಪ್ ಮ್ಯಾನ್ ಹಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ ಅವರು ಸೋಮವಾರದಂದು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ದರ್ಶನ್ ಅವರು ಸಿನಿಮಾ ರಂಗದಲ್ಲಿ ನಟನಾಗಿ ಗುರುತಿಸಿಕೊಂಡ ಸಂದರ್ಭ ಆವತ್ತಿನಿಂದ ಇದುವರೆಗೂ ಅವರಿಗೆ ಶ್ರೀನಿವಾಸ್ಮೇ ಅವರೇ ಮೇಕಪ್ ಮಾಡುತಿದ್ದರು.

Advertisements

ಈ ಕೊರೊನಾ ಸಂಕಷ್ಟದ ನಡುವೆ ಸಾಲು ಸಾಲಾಗಿ ಕಹಿಗಳು ಬರುತ್ತಿವೆ, ಸಿನಿಮಾ ರಂಗಕ್ಕೆ ಸಂಬಂಧಪಟ್ಟ ಅನೇಕ ನಟರು ನಮ್ಮನ್ನು ವಿವಿಧ ರೀತಿಯಲ್ಲಿ ನಮ್ಮನ್ನು ಅಗಲಿದ್ದಾರೆ. ಈ ನಡುವೆ ಮತ್ತೊಂದು ಆಘಾತ ಎದುರಾಗಿದೆ. ಅವರೇ ದರ್ಶನ್ ಅವರ ಮೇಕಪ್ ಮ್ಯಾನ್ ಹೌದು ದರ್ಶನ ನಟಿಸುತ್ತಿರುವ ರಾಬರ್ಟ್ ಚಿತ್ರದಲ್ಲಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಶ್ರೀನಿವಾಸ್ ಅವರು ಕಾರ್ಯ ಮಾಡಿದ್ದರು. ಈಗ ಅವರು ಹೃದಯ ಆಘಾತದಲ್ಲಿ ಅಗಲಿದ್ದಾರೆ. ಶ್ರೀನಿವಾಸ್ ಅವರ ನಿಧನಕ್ಕೆ ದರ್ಶನ್ ಅವರು ಸೇರಿದಂತೆ ಅವರ ಅಭಿಮಾನಿಗಳು ಸಹ ಸಂತಾಪವನ್ನು ಸೂಚಿಸಿದ್ದಾರೆ.

ದರ್ಶನ್ ಅವರು ಶ್ರೀನಿವಾಸ್ ಅವರ ಆಘಾತವನ್ನು ಕಂಡು ಕಂಬನಿ ಮಿಡಿದಿದ್ದಾರೆ, ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಶ್ರೀನಿವಾಸ್ ಅವರ ನಿಲಯಕ್ಕೆ ಭೇಟಿ ಮಾಡಿ, ಶ್ರೀನಿವಾಸ್ ಅವರ ದರ್ಶನ ಮಾಡಿ ನಮನವನ್ನು ಸಲ್ಲಿಸಿದ್ದಾರೆ. ಜೊತೆಗೆ ದರ್ಶನ್ ಅವರು ಅವ್ರ ಕುಟುಂಭಕ್ಕೆ ಸಾಂತ್ವನ ಹೇಳಿ ಧೈರ್ಯವನ್ನು ತುಂಬಿದ್ದಾರೆ.

Leave a Reply

Your email address will not be published. Required fields are marked *