Advertisements

ಗಂಧದಗುಡಿ ಟೀಸರ್ ನೋಡಿ ಪುನೀತ್ ಬಗ್ಗೆ ದರ್ಶನ ಹೇಳಿದ್ದೇನು ಗೊತ್ತೇ!

Cinema

ಪುನೀತ್ ರಾಜಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ನ ಟೈಟಲ್ ಹಾಗೂ ಟೀಸರ್ ಮನ್ನೆ ಬಿಡುಗಡೆಯಾಗಿದೆ.ಅವರು ಪ್ರೀತಿಯಿಂದ ಮಾಡಿದ ಡಾಕ್ಯುಮೆಂಟ್ರಿಗೆ ಗಂಧದಗುಡಿ ಅಂತ ಹೆಸರಿಡಲಾಗಿದೆ ಕರ್ನಾಟಕದ ಕಾಡು ಮೇಡು ಸುತ್ತಿ ಅಪ್ಪು ಈ ಡಾಕ್ಯುಮೆಂಟ್ರಿ ಮಾಡಿದ್ದಾರೆ. ಇನ್ನು ಅಪ್ಪು ಅವರ ಕನಸನ್ನು ನನಸು ಮಾಡುವುದಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಮೊದಲೇ ತಿಳಿಸಿದ್ದರು. ಈಗ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆಯಾಗಿದ್ದು ಗಂಧದಗುಡಿ ಚಿತ್ರವನ್ನ ಮುಂದಿನ ವರ್ಷ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಪಿಆರ್ ಕೆ ಸಂಸ್ಥೆ ನಿರ್ಧಾರ ಮಾಡಿದೆ.

[widget id=”custom_html-3″]

Advertisements

ಡಿವೈಡ್ ಕರ್ನಾಟಕ ನಿರ್ದೇಶಿಸಿದ್ದ ಅಮೋಘವರ್ಷ ಅವರು ಗಂಧದಗುಡಿ ನಿರ್ದೇಶಿಸಿದ್ದು ಪಿಆರ್ ಕೆ ಪ್ರೊಡಕ್ಷನ್ ಅಡಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಮರ್ಡ್ಸ್ ಸ್ಕೀಪರ್ ಸಂಸ್ಥೆಯವರು ನಿರ್ಮಾಣ ಮಾಡಿದ್ದಾರೆ. ಗಂಧದಗುಡಿ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 2022ರಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು ದಿನಾಂಕವನ್ನು ಪಿಆರ್ ಕೆ ಸಂಸ್ಥೆ ಶೀಘ್ರದಲ್ಲೇ ಘೋಷಿಸಲಿದೆ. ಇನ್ನು ಈ ಟೀಸರ್ ನೋಡಿರುವ ಅಭಿಮಾನಿಗಳು ಬಹಳ ಸಂತಸ ಪಡುತ್ತಿದ್ದಾರೆ. ಹಾಗೂ ಅಪ್ಪು ಅವರನ್ನು ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.

[widget id=”custom_html-3″]

ಸದ್ಯಕ್ಕೆ ಈ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲಾ ನಟ ನಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇದರ ಜೊತೆಗೆ ದರ್ಶನ್ ಯಶ್ ಸುದೀಪ್ ಸೇರಿದಂತೆ ಎಲ್ಲ ನಟರು ಅಭಿಮಾನಿಗಳು ಕೂಡ ಟೀಸರ್ ಅನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಈ ಟೀಸರ್ ಬಗ್ಗೆ ಮಾತನಾಡಿರುವ ದರ್ಶನ್ ಅವರು ಪುನೀತ್ ಅವರ ಕನಸಿನ ಚಿತ್ರದ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ. ಟೀಸರ್ ನೋಡುತ್ತಿದ್ದರೆ ಪುನೀತ್ ಅವರು ಈಗಲೂ ನಮ್ಮೊಂದಿಗೆ ಇದ್ದಾರೆ ಅಂತ ಅನಿಸುತ್ತಿದೆ ಪುನೀತ್ ಅವರು ಅಮರರಾಗಿರುತ್ತಾರೆ ಎಂದು ದರ್ಶನ್ ಅವರು ತಿಳಿಸಿದ್ದಾರೆ.

[widget id=”custom_html-3″]