Advertisements

ಕೊನೆಗೂ ತನ್ನ ಆಪ್ತ ಗೆಳೆಯ ಕಿಚ್ಚ ಸುದೀಪ್ ಅವರ ಬಗ್ಗೆ ಮಾತನಾಡಿದ ದರ್ಶನ್.. ಹೇಳಿದ್ದೇನು ಗೊತ್ತಾ? ಮೈ ಜುಮ್ಮೆನಿಸುತ್ತದೆ.

Cinema

ನಮಸ್ತೆ ಸ್ನೇಹಿತರೆ, ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಟೈಟಲ್ ಲೋಗೋ ಬಿಡುಗಡೆಯಾಗಿದೆ. ಅದರ ಜೊತೆಗೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ ಪ್ರದರ್ಶನವಾಗಿದೆ..‌ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಸುಮಾರು 2000 ಅಡಿಗೂ ಎತ್ತರದ ವಿಶ್ವ ವಿಖ್ಯಾತ ಕಟ್ಟಡದ ಮೇಲೆ ಕಿಚ್ಚ ಸುದೀಪ್ ಅವರ ಕಟೌಟ್ ಪ್ರದರ್ಶನವಾಗಿದೆ. ಅದರಲ್ಲೂ ಕಿಚ್ಚನ ಕಟೌಟ್ ಬರೋದಕ್ಕು ಮುನ್ಮ ಕನ್ನಡ ಭಾವದ ಪ್ರದರ್ಶನವಾಗಿದ್ದು.. ಇದನ್ನು ನೋಡಿದ ಪ್ರತಿಯೊಬ್ಬ ಕನ್ನಡಿಗನ ಮೈ ಜುಮ್ ಅಂದಿದೆ.

Advertisements

ಅಷ್ಟೇ ಅಲ್ಲದೇ ಕನ್ನಡದ ಕನ್ನಡಿಗರ, ಕನ್ನಡ ಚಿತ್ರರಂಗದ ಪವರ್ ಎಲ್ಲರಿಗೂ ಗೊತ್ತಾಗುವಂತೆ ಸುದೀಪ್ ಅವರ ತಂಡ ಮಾಡಿದೆ. ಇದೀಗ ಬುರ್ಜ್‌ ಖಲೀಫಾದ ಮೇಲೆ ರಾರಾಜಿಸಿದ ಕಿಚ್ಚ ಸುದೀಪ್ ಅವರ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದು ಏನು ಹೇಳಿದ್ದಾರೆ ಅಂತ ಗೊತ್ತಾದ್ರೆ ಪ್ರತಿಯೊಬ್ಬ ಕನ್ನಡಿಗನ ಮೈ ಜುಮ್ ಅನಿಸುತ್ತದೆ.. ಆಗಾದ್ರೆ ಏನು ಹೇಳಿದ್ದಾರೆ ನೋಡೊಣ ಬನ್ನಿ. ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣದ ಜಲಕ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.. ದುಬೈನಲ್ಲಿದ್ದ ಅಭಿಮಾನಿಗಳು ಕಿಚ್ಚ, ಕಿಚ್ಚ ಎಂದು ಕೂಗಿ ಜೈಕಾರ ಹಾಕಿದ್ದಾರೆ.

ಇನ್ನೂ ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಸೂಪರ್ ಸ್ಟಾರ್ ಮೋಹನ್, ರಿಯಲ್ ಸ್ಟಾರ್ ಉಪೇಂದ್ರ, ಬಹುಭಾಷಾ ನಟಿ ರಮ್ಯ ಕೃಷ್ಣ, ಪ್ರಿಯಾ ಮಣಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.. ಅಷ್ಟೇ ಅಲ್ಲದೇ ಕಿಚ್ಚ ಸುದೀಪ್ ಅವರ ಬಹುಕಾಲದ ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕಿಚ್ಚ ಸುದೀಪ್ ಅವರ ಕಟೌಟ್ ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ್ದನ್ನ ನೋಡಿ ತಮ್ಮ ಪ್ರತಿಕ್ರಿಯೆಯನ್ನು ಕೊಟ್ಟಿದ್ದು ಮೊದಲ ಅನಿಸಿಕೆಯನ್ನು ಅಂಚಿಕೊಂಡಿದ್ದಾರೆ.

ಎಲ್ಲರೂ ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವೆ ಎಲ್ಲವೂ ಸರಿಯಿಲ್ಲ ಅವರಿಬ್ಬರ ಸಂಬಂಧ ಹಾಳಾಗಿದೆ ಅಂದು ಕೊಂಡಿದ್ದರು. ಆದರೆ ದರ್ಶನ್ ಅವರು ಕನ್ನಡ ಚಿತ್ರರಂಗದ ನಡ ಈ ರೀತಿಯಾಗಿ ಸಾಧನೆ ಮಾಡಿರೋದು ನಿಜಕ್ಕೂ ಹೆಮ್ಮೆಯ ವಿಚಾರ.. ಚಿತ್ರರಂಗದಲ್ಲಿ 25 ವರ್ಷಗಳನ್ನ ಪೂರೈಸೋದು ನಿಜಕ್ಕೂ ಸಾಮನ್ಯದ ಮಾತಲ್ಲ.. ನಮ್ಮ ನಮ್ಮಲ್ಲೇ ಜಗಳ ಬೇಡ. ನಮ್ಮ ನಟನು ಬೆಳೆಯುತ್ತಿದ್ದಾನೆ ಅಂದ್ರೆ ಅದಕ್ಕೆ ನಾವು ಎಲ್ಲರೂ ಕುಷಿ ಪಡೋಣ ಅಂತ ಕಿಚ್ಚ ಸುದೀಪ್ ಅವರಿಗೆ ಶುಭ ಆರೈಸಿದ್ದಾರೆ. ದರ್ಶನ್ ಅವರ ಮಾತು ನಿಜಕ್ಕೂ ಕನ್ನಡ ಚಿತ್ರರಂಗದ ಒಗ್ಗಟ್ಟನ್ನು ತೋರಿಸುವಂತಿದೆ. ಕನ್ನಡ ಚಿತ್ರರಂಗದವರು ಇದೇ ರೀತಿ ಇನ್ನಷ್ಟು ಒಗ್ಗಟ್ಟಾಗಿ ಸಾಧನೆ ಮಾಡಲಿ ಅಂತ ಆರೈಸೋಣ.. ಇದರ ಬಗ್ಗೆ ನೀವೇನು ಹೇಳ್ತಿರಾ ನಿಮ್ಮ ಅನಿಸಿಕೆ ತಿಳಿಸಿ.