ನಮಸ್ತೆ ಸ್ನೇಹಿತರೆ, ತಂದೆಯ ಮನಸ್ಸೇ ಹಾಗೆ. ಎಲ್ಲೇ ಇದ್ದರು. ಯಾವುದೇ ಕೆಲಸದಲ್ಲಿ ಬ್ಯುಸಿ ಇದ್ದರು ಮಕ್ಕಳ ಕಡೆ ಗಮನ ಇರುತ್ತದೆ. ಯಾವಾಗಲೂ ಅವರ ಬಗ್ಗೆ ಆಲೋಚನೆ ಮಾಡುತ್ತಾ ಇರುತ್ತಾರೆ.. ತಾವು ಎಷ್ಟೇ ಎತ್ತರಕ್ಕೆ ಬೆಳೆದರು ಮಕ್ಕಳ ಜೊತೆ ಮಗುವಾಗಿ ಅವರನ್ನು ನೋಡಿಕೊಳ್ಳುತ್ತಾರೆ.. ಈಗ ಸಖತ್ ವೈರಲ್ ಆಗಿರುವ ಈ ಪೊಟೊ ನೋಡುತ್ತಿದ್ದರೆ ಕನ್ನಡ ಸಿನಿಮಾ ರಂಗದ ಖ್ಯಾತ ನಟನಾಗಿ ಮಿಂಚಿದ ತೂಗುದೀಪ ಶ್ರೀನಿವಾಸ್ ಅವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ತಿಳಿಯುತ್ತದೆ.

ನೆಲೆದ ಮೇಲೆ ಕೂತು ದರ್ಶನ್ ಅವರ ಕಾಲಿಗೆ ಶೂ ತೊಡಿಸುತ್ತಿರುವ ದೃಶ್ಯ ನೋಡಿದರೆ ಪ್ರತಿಯೊಬ್ಬರು ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾರೆ. ನಾವು ತಂದೆಯ ಸ್ಥಾನಕ್ಕೆ ಬಂದರೆ ತಂದೆಯ ಪ್ರಾಮುಖ್ಯತೆ, ಪ್ರೀತಿ ಗೊತ್ತಾಗುತ್ತದೆ ಅನ್ನೋದು ಅಕ್ಷರಶಃ ಸತ್ಯ. ನಾವು ತಂದೆಯಾಗಿ ನಮ್ಮ ಮಗುವಿನ ಬಗ್ಗೆ ಹೃದಯದಲ್ಲಿ ಹುಟ್ಟುವ ಪ್ರೀತಿಯ ಅಲೆಯನ್ನು ಕಂಡು ನನ್ನ ತಂದೆಯೂ ಕೂಡ ಇಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂಬ ಜ್ಞಾನೋದಯ ಆಗುತ್ತದೆ. ಕೊನೆಯ ದಿನಗಳಲ್ಲಿ ತೂಗುದೀಪ ಶ್ರೀನಿವಾಸ್ ಅವರು ನಟನೆ ಮಾಡಲು ಸಾಧ್ಯವಾಗದೆ ಒಂದು ಲೀಟರ್ ಹಾಲು ಕೊಂಡುಕೊಳ್ಳುವಷ್ಟು ಕಷ್ಟದ ಪರಿಸ್ಥಿತಿಗೆ ಬಂದಿದ್ದರು.

ತಂದೆಯ ಮಾತಿನಂತೆ ನೀನಾಸಂನಲ್ಲಿ ನಟನೆ ಕಲಿಯಲು ಹೊರಟರು ದರ್ಶನ್ ಅವರು. ಕೈಯಲ್ಲಿ ಒಂದು ಪೈಸೆ ದುಡ್ಡಿಲ್ಲದಿದ್ದರು ಹೇಗೋ ಕಾಲ ಕಳಿಯುತ್ತಿದ್ದಾಗ ಒಂದು ದಿನ ಬರಿಸಲಾಗದಂತಹ ಸುದ್ದಿಯೊಂದು ದರ್ಶನ್ ಅವರಿಗೆ ತಿಳಿದು ಬಂತು. ಅದೇ ತೂಗುದೀಪ ಶ್ರೀನಿವಾಸ್ ಅವರ ನಿ’ಧನ. ಈ ಸುದ್ದಿಯನ್ನು ಕೇಳಿದ ದರ್ಶನ್ ಅವರು ನೀನಾಸಂ ನಿಂದ ಮೈಸೂರಿಗೆ ಬರಬೇಕು, ಆದರೆ ಕೈಯಲ್ಲಿ ಒಂದು ರುಪಾಯಿ ಕೂಡ ಇರಲಿಲ್ಲ.. ಈ ರೀತಿಯ ಕಷ್ಟದ ಪರಿಸ್ಥಿತಿ ಯಾರಿಗು ಬರಬಾರದು. ಆ ಸಮಯದಲ್ಲಿ ಬೇರೆಯವರತ್ತಿರ 500 ರೂಪಾಯಿ ಸಾಲ ಪಡೆದ ದರ್ಶನ್ ತಮ್ಮ ತಂದೆಯ ಅಂತಿಮ ದರ್ಶನಕ್ಕೆ ಬರುತ್ತಾರೆ.

ನಂತರ ಕಾಲ ಕಳೆದಂತೆ ತನ್ನ ಪರಿಶ್ರಮ, ನೆಲೆ ನಿಲ್ಲಬೇಕೆಂಬ ಛಲದಿಂದ ಮುನ್ನುಗ್ಗಿದರು. ಈಗ ದರ್ಶನ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟನಾಗಿ ನಿಂತು ಅನೇಕ ಅಭಿಮಾನಿಗಳ ಮನ ಗೆದ್ದಿದ್ದಾರೆ.. ಇದರ ಜೊತೆಗೆ ದರ್ಶನ್ ಅವರು ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಇದನ್ನು ನೋಡಿ ಸಂತೋಷ ಪಡಲು ತೂಗುದೀಪ ಶ್ರೀನಿವಾಸ್ ಅವರು ಇಲ್ಲ.. ತಮ್ಮ ಮಗನ ಈ ಉತ್ತುಂಗ ಸ್ಥಾನವನ್ನು ತೂಗುದೀಪ ಅವರು ನೋಡಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರು ಅಲ್ಲವೇ. ಜೀವನ ಅಂದರೆ ಹೀಗೆ ಒಂದನ್ನು ಕೊಟ್ಟು ಇನ್ನೊಂದನ್ನು ನಮ್ಮಿಂದ ತೆಗೆದುಕೊಳ್ಳುತ್ತದೆ.