Advertisements

ತೆಲುಗು ಚಿತ್ರ ರಂಗದ ವಿರುದ್ಧ ಸಿಡಿದೆದ್ದ ದರ್ಶನ್ …ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯದ ವಿರುಧ್ದ ದರ್ಶನ್ ಏಕಾಂಗಿ ಹೋರಾಟ.

Cinema

ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ತೂಗುದೀಪ್ ಕನ್ನಡ ಚಿತ್ರಗಳಿಗೆ, ಯುವ ಪ್ರತಿಭೆಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ವರ್ಷಕ್ಕೆ ನೂರಾರು ತೆಲುಗು ಚಿತ್ರಗಳು ಬಿಡುಗಡೆಯಾಗುತ್ತವೆ. ನಮ್ಮವರೇ ತುಂಬಾ ಅದ್ದೂರಿಯಾಗಿ ಕಟೌಟ್ ತಯಾರಿಸಿ ಸ್ವಾಗತ ಕೋರುತ್ತಾರೆ. ಇಲ್ಲಿ ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ. ಕೆಲವೊಮ್ಮೆ ಕನ್ನಡ ಚಿತ್ರಗಳಿಗಿಂತ ತೆಲುಗು ಚಿತ್ರಗಳೇ ಚೆನ್ನಾಗಿ ಪ್ರದರ್ಶನ ಕಾಣುತ್ತವೆ. ಇಲ್ಲಿ ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಯಾವುದೇ ನಿಯಮಗಳು ಇಲ್ಲ. ಆದರೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಕೆಲ ಅಲಿಖಿತ ನಿಯಮಗಳು ಇವೆ.

Advertisements

ಅಲ್ಲಿ ಯಾವುದಾದರೂ ತೆಲುಗು ಸಿನಿಮಾ ಇದ್ದರೆ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡಲು ಬಿಡುವುದಿಲ್ಲ. ಕನ್ನಡದ ತೆಲುಗು ಡಬ್ಬಿಂಗ್ ಚಿತ್ರಗಳಿಗೂ ಅವಕಾಶ ಇರುವುದಿಲ್ಲ. ತೆಲುಗಿನ ಚಿಕ್ಕ ಚಿಕ್ಕ ಸಿನಿಮಾಗಳು ಬಿಡುಗಡೆಯಾದರೂ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದಿಲ್ಲ. ಇದು ತೆಲುಗು ನಾಡಿನಲ್ಲಿ ಕನ್ನಡ ಚಿತ್ರಗಳಿಗೆ ಬಂದಿರುವ ಅಡ್ಡಿ. ಈ ಕುರಿತು ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದ್ದು ಕೆಲ ಕನ್ನಡ ತಾರೆಯರು ಇದರ ವಿರುದ್ಧ ದ್ವನಿ ಎತ್ತಿದರು. ಆದರೆ ಏನೂ ಪ್ರಯೋಜನ ಆಗಲಿಲ್ಲ.

ಈಗ ನಟ ದರ್ಶನ್ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಈ ಅನ್ಯಾಯದ ವಿರುಧ್ದ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಈ ಕುರಿತು ನೇರವಾಗಿ ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ಮಾರ್ಚ್ ತಿಂಗಳು ಅವರ ರಾಬರ್ಟ್ ಚಿತ್ರ ತೆರೆ ಕಾಣಲಿದ್ದು ಅದಕ್ಕೂ ಇಂತಹ ಸಮಸ್ಯೆಗಳು ಎದುರಾಗಿವೆಯಂತೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಕಥೆ ಬಿಡಿ, ಹೀಗೆ ಮುಂದುವರೆದರೆ ಮುಂಬರುವ ಯುವ ಪ್ರತಿಭೆಗಳ ಗತಿ ಏನು ಎಂದಿದ್ದಾರೆ. ಏಕೆ ಎಲ್ಲರೂ ಸುಮ್ಮನಿದ್ದಾರೆ ಗೊತ್ತಿಲ್ಲ ನಾನಂತೂ ಫಿಲ್ಂ ಚೇಂಬರ್ ಗೆ ದೂರು ನೀಡಿ ಮುಂದೆ ಹೋರಾಟ ನಡೆಸುತ್ತೇನೆ ಎಂದಿದ್ದಾರೆ.