Advertisements

ದರ್ಶನ್ ಆತ್ಮೀಯವಾಗಿರುವ ಸಲುಗೆಯಿಂದ ಊಟ ತಿನ್ನುಸುತ್ತಿರುವ ಈ ಮಹಿಳೆ ಯಾರು ಗೊತ್ತಾ.?

Cinema

ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸ್ಟಾರ್ ನಟ ಆಗಿದ್ದರೂ ದರ್ಶನ್ ಅವರು ತುಂಬಾ ಸರಳ ಜೀವಿ. ಎಳ್ಳಷ್ಟೂ ಅಹಂಭಾವ ಎಲ್ಲ ಅಂತ ಹೇಳಿದ್ರೆ ತಪ್ಪಾಗೊದಿಲ್ಲ. ಇನ್ನು ಪ್ರತಿಯೊಬ್ಬರ ಜೊತೆಗೂ ತಾನು ಸೆಲೆಬ್ರೆಟಿ ಎಂಬುವದನ್ನ ಮರೆತು ಸಾಮಾನ್ಯ ಜನರಂತೆ ಬೆರೆಯುತ್ತಾರೆ ಅಭಿಮಾನಿಗಳ ಪ್ರೀತಿಯ ಯಜಮಾನ್. ಇತ್ತೀಚೆಗಷ್ಟೇ ಚಿಕ್ಕ ಮಗುವಿಗೆ ಊಟ ಮಾಡಿಸುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು.

Advertisements

ಇನ್ನು ವೈರಲ್ ಆದ ಅದೇ ವಿಡಿಯೋದಲ್ಲಿ ದರ್ಶನ್ ರವರು ಮಹಿಳೆಯೊಬ್ಬರ ಜೊತೆ ಅತ್ಯಂತ ಪ್ರೀತಿಯಿಂದ, ಸಾಕಷ್ಟು ಸಲುಹಿಯಿಂದ ವರ್ತಿಸುತ್ತಿರುವುದು ಕಂಡಿದ್ದು ಆ ಮಹಿಳೆ ಯಾರೂ ಎಂಬುದರ ಬಗ್ಗೆ ಅಭಿಮಾನಿಗಳು ತುಂಬಾ ತಲೆಕೆಡಿಸಿಕೊಂಡಿದ್ದರು. ತಮ್ಮ ಸಂಬಂದಿಕರ ಜೊತೆ ತುಂಬಾ ಸಲುಹೆಯಿಂದ ವರ್ತಿಸುವಂತೆ ಆ ಮಹಿಳೆ ಜೊತೆ ತಮಾಷೆ ಮಾಡುತ್ತಿರುವುದು, ಊಟ ತಿನ್ನುಸುತ್ತಿರುವುದು, ಪ್ರೀತಿಯಿಂದ ಬೈಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ವೈರಲ್ ಆಗಿತ್ತು. ಹಾಗಾದರೆ ನಟ ದರ್ಶನ್ ಜೊತೆ ಅಷ್ಟೊಂದು ಸಲುಹೆಯಿಂದ ಇರುವ ಮಹಿಳೆ ಯಾರೆಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.

ಹೌದು, ದರ್ಶನ್ ಜೊತೆ ಆತ್ಮೀಯವಾಗಿ, ಪ್ರೀತಿಯಿಂದ ಇರುವ ಮಹಿಳೆ ಅವರ ಸಹೋದರಿ. ಅಂದರೆ ಅವರ ಸ್ವಂತ ಸಹೋದರಿಯೇನು ಅಲ್ಲ. ರಕ್ತಸಂಬಂದಿಗಳಲ್ಲದಿದ್ದರೂ ಅದಕ್ಕಿಂತು ಹೆಚ್ಚು ದರ್ಶನ್ ಮತ್ತು ಆ ಮಹಿಳೆಯ ಜೊತೆಗಿರುವ ಅಣ್ಣ ತಂಗಿ ಭಾಂದವ್ಯ. ಅಸಲಿಗೆ ಆ ಮಹಿಳೆ ದರ್ಶನ್ ಅವರ ಆಪ್ತ ಸ್ನೇಹಿತರಾಗಿರುವ ನಿರ್ಮಾಪಕ ಚೇತನ್ ರಾಜ್ ರವರ ಪತ್ನಿ. ಹಾಗಾಗಿಯೇ ಚೇತನ್ ರಾಜ್ ರವರ ಪತ್ನಿ ದರ್ಶನ್ ಅವರಿಗೆ ಸ್ವಂತ ತಂಗಿಗಿಂತ ಹೆಚ್ಚು. ಇನ್ನು ದಚ್ಚು ಊಟ ಮಾಡಿಸಿದ್ದು ಇವರ ಮಗುವಿಗೆ. ಇನ್ನು ತನ್ನ ಆಪ್ತ ಸ್ನೇಹಿತ ಚೇತನ್ ರಾಜ್ ಹಾಗೂ ತನ್ನ ಅಚ್ಚುಮೆಚ್ಚಿನ ಪ್ರೀತಿಯ ತಂಗಿಯನ್ನ ನೋಡಲು ಆಗಾಗ ಅವರ ಮನೆಗೆ ಬಂದು ಹೋಗುತ್ತಿರುತ್ತಾರೆ ದರ್ಶನ್. ಈ ವಿಡಿಯೋ ನೋಡಿ..