Advertisements

ಕರ್ನಾಟಕದ ಏಕೈಕ ಮಾತನಾಡುವ ದೇವಿಯನ್ನು ಕಂಡಿದ್ದೀರಾ! ಇಲ್ಲಿ ನಡೆಯುತ್ತೆ ಚೌಡೇಶ್ವರಿಯ ಪವಾಡ..

Temples

ತುಂಬಾ ಜನಕ್ಕೆ ಇರುವ ಅನುಮಾನ ಏನೆಂದರೆ ದೇವರು ಇದ್ದಾನೋ ಇಲ್ಲವೋ ಎನ್ನುವುದು.. ಅದಕ್ಕೆ ಉತ್ತರ ಅವರವರ ನಂಬಿಕೆ ಮತ್ತು ಅವರವರ ವಿಶ್ವಾಸ ಕೆಲವರು ಇದ್ದಾನೆ ಎಂದರೆ ಇನ್ನೂ ಕೆಲವರು ಎಲ್ಲಿದ್ದಾನೆ ಎಂದು ಪ್ರಶ್ನೆ ಮಾಡುತ್ತಾರೆ. ಕಲ್ಪತರ ನಾಡು ಎಂದೇ ಹೆಸರುವಾಸಿಯಾಗಿರುವ ತಿಪಟೂರು ತಾಲ್ಲೂಕಿನ ದಸರಿಘಟ್ಟ ಕ್ಷೇತ್ರ ಶಕ್ತಿದೇವತೆ ಚೌಡೇಶ್ವರಿ ನೆಲೆನಾಡು..

[widget id=”custom_html-3″]

ಇದು ತುಮಕೂರು ಜಿಲ್ಲೆಯಲ್ಲಿದೆ. ದಸರಿಘಟ್ಟ ಚೌಡೇಶ್ವರಿಯೂ ಭಕ್ತರ ಕಷ್ಟ ನಷ್ಟಗಳಿಗೆ ತನ್ನ ಕಳಶದ ಬರವಣಿಗೆಯ ಮೂಲಕ ಪರಿಹಾರ ಸೂಚಿಸುತ್ತಾಳೆ ಎನ್ನುವ ನಂಬಿಕೆ ಇಂತಹ ಶಕ್ತಿ ಹೊಂದಿರುವ ಚೌಡೇಶ್ವರಿಯನ್ನು ನೋಡಲು ಹಲವೆಡೆಯಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಅಷ್ಟೇ ಅಲ್ಲಾ ವಿವಿದ ಕ್ಷೇತ್ರಗಳ ಗಣ್ಯರು ಸಹ ಇಲ್ಲಿಗೆ ಬೇಟಿ ನೀಡಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ತಿಪಟೂರು ಅನತಿ ದೂರದಲ್ಲಿರುವ ಈ ಕ್ಷೇತ್ರಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಸಾಲು ತೆಂಗಿನಮರಗಳು ತಂಪುಗಾಳಿ ಸೂಸುತ್ತಾ ಭಕ್ತರಿಗೆ ಸ್ವಾಗತ ಕೋರುವ ಜೊತೆಗೆ ಕ್ಷೇತ್ರಕ್ಕೆ ಬೇಟಿ ನೀಡಿ ಎಂದು ಕೈಬೀಸಿ ಕರೆಯುತ್ತದೆ.. ಸುಮಾರು 200 ವರ್ಷಗಳ ಇತಿಹಾಸ ಇರುವ ಚೌಡೇಶ್ವರಿ ದೇವಾಲಯ ಅದ್ಬುತವಾಗಿದೆ. ಪ್ರವೇಶ ದ್ವಾರದಲ್ಲಿಯೇ 78 ಅಡಿ ಎತ್ತರದ ಭವ್ಯ ರಾಜಗೋಪುರವಿದೆ.. ದೇವಾಲಯದ ಗರ್ಭಗುಡಿಯಲ್ಲಿ ಹುತ್ತ ಮಣ್ಣಿನಿಂದ ನಿರ್ಮಿಸಲಾಗಿರುವ ಚೌಡೇಶ್ವರಿಯ ವಿಗ್ರಹವಿದೆ.

[widget id=”custom_html-3″]

ಇಲ್ಲಿರುವ ಹುತ್ತದಲ್ಲಿ ಈ ಹಿಂದೆ ಚೌಡೇಶ್ವರಿ ಲೀನವಾಗಿದ್ದಳು ಎಂದು ಪ್ರತೀತಿ ಇದೆ. ಇನ್ನೂ ದೇಗುಲದ ಮುಂದೆ ಇರುವ ಪುಟ್ಟ ದೇವಾಲಯಗಳಲ್ಲಿ ಈ ಕ್ಷೇತ್ರ ಪಾಲಕಾಳಾದ ಕರಿಯಮ್ಮ ಮೂರ್ತಿ ಇದೆ.. ಸುಂದರವಾಗಿರುವ ಈ ಶಿಲಾ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ಆದಿಚುಂಚನಗಿರಿ ಮಠವು ಈ ಕ್ಷೇತ್ರದ ಸಂಪೂರ್ಣ ಆಡಳಿತ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇಲ್ಲಿರುವ ಚೌಡೇಶ್ವರಿ ಉತ್ಸವ ಮೂರ್ತಿಯನ್ನು ಬರೆಯುವ ಅಮ್ಮ ಹಾಗು ಮಾತಾಡುವ ಅಮ್ಮ ಎಂತಲೂ ಕೂಡ ಕರೆಯಲಾಗುತ್ತದೆ.‌ ಅಥವಾ ಮಾತನಾಡುವ ದೇವಿ ಎಂದೇ ಕರೆಯಲಾಗುತ್ತದೆ‌.. ಇದು ಈಕ್ಷೇತ್ರದ ವಿಶೇಷ ಮತ್ತು ಕೂತೂಹಲ ಸಂಗತಿಯಾಗಿದೆ.

[widget id=”custom_html-3″]