ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಹದಿನೈದು ಮಂದಿಗೆ ಬೈಕ್ ಟ್ರಿಪ್ ಹೋಗಿದ್ದಾರೆ ಈ ಒಂದು ಟ್ರಿಪ್ ಗೆ ದರ್ಶನ್ ಅವರ ಆಪ್ತ ಸ್ನೇಹಿತರು ಮತ್ತು ಕೆಲವು ನಟರು ದರ್ಶನ್ ಗೆ ಸಾಥ್ ನೀಡಿದ್ದಾರೆ.. ಇವರೆಲ್ಲರೂ ಬೈಕ್ ನಲ್ಲಿ ಟ್ರಿಪ್ ಗೆ ಹೋಗುತ್ತಿರುವ ಪೊಟೊಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಹಾಗಿವೆ.. ನಟ ದರ್ಶನ್ ಅವರು ಸಿನಿಮಾ ಕೆಲಸಗಳು ಹೊರತು ಪಡಿಸಿ ಮೈಸೂರಿನ ಪಾರ್ಮ್ ಹೌಸ್ ನಲ್ಲಿ ಹೆಚ್ಚಾಗಿ ಸಮಯವನ್ನ ಕಳೆಯುತ್ತಾರೆ.. ಹಾಗು ಅವರ ಸ್ನೇಹಿತರ ಜೊತೆಯಲ್ಲೂ ಸಹ ಕಾಲ ಕಳೆಯುತ್ತಾರೆ.. ಇದರ ಜೊತೆಗೆ ಕಾರ್, ಬೈಕ್ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುವ ನಟ ದರ್ಶನ್ ಅವರು ಈಗ ಬೈಕ್ ನಲ್ಲಿ ಹದಿನೈದು ಜನ ಸ್ನೇಹಿತರೊಂದಿಗೆ ಟ್ರಿಪ್ ಹೋಗಿದ್ದಾರೆ..

ದರ್ಶನ್ ಅವರ ಆಪ್ತರಾದ ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್, ದರ್ಮ ಕೀರ್ತಿ ರಾಜ್, ಪನ್ನಾಗಭರಣ, ಯಶಸ್ ಸೂರ್ಯ, ಉಮಾಪತಿ ಶ್ರೀನಿವಾಸ್, ಚಿಕ್ಕಣ್ಣ ಹಾಗು ಇನ್ನು ಕೆಲವರ ಜೊತೆ ಟ್ರಿಪ್ ಹೋಗಿದ್ದಾರೆ.. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿ ಕಂಪನಿ ಪೇಜ್ ಅಪ್ಲೋಡ್ ಮಾಡಿದೆ.. ಇದು ಮೂರು ದಿನದ ಪ್ರವಾಸ ವಾಗಿದ್ದು ಮಡಿಕೇರಿ ಮತ್ತು ಮಂಗಳೂರಿಗೆ ಹೋಗಲಿದ್ದಾರೆ.. ದರ್ಶನ್ ಇದೇ ಮೊದಲ ಬಾರಿಗೆ ಟ್ರಿಪ್ ಹೋಗುತ್ತಿಲ್ಲ. ಪ್ರತಿವರ್ಷವೂ ಕೂಡ ಬೈಕ್ ಕಾರ್ ನಲ್ಲಿ ಹೋಡಾಡಿಕೊಂಡು ಬರುತ್ತಾರೆ.. ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿಬಂದಿದ್ರು.. ಇದರ ಜೊತೆಗೆ ಕುರಿ ಖರೀದಿ ಮಾಡಲು ಬೆಳಗಾವಿಗೂ ಸಹ ಹೋಗಿದ್ದರಿ.. ಒಟ್ಟಿನಲ್ಲಿ ಸ್ನೇಹಿತರ ಜೊತೆ ಲಾಂಗ್ ಡ್ರೈವ್ ಹೋಗೊದು ಅಂದರೆ ಅದರ ಮಜಾನೆ ಬೇರೆ..