Advertisements

ತನ್ನ ನಿಶ್ಚಿತಾರ್ಥ ನಿಲ್ಲಿಸಿ ಆಸ್ವತ್ರೆಗೆ ಹೋದ ಈ ಹುಡುಗಿ ಮಾಡಿದ್ದೇನು ಗೊತ್ತಾ? ಇಂತಹ ಹುಡುಗಿಯರು ಪ್ರಪಂಚದಲ್ಲಿ ಇರ್ತಾರ..

Inspire Kannada Mahiti

ನಮಸ್ತೆ ಸ್ನೇಹಿತರೆ, 26 ವರ್ಷದ ಈ ಹುಡುಗಿ ತನ್ನ ನಿಶ್ಚಿತಾರ್ಥವನ್ನು ನಿಲ್ಲಿಸಿ ಎಂತಹ ಕೆಲಸ ಮಾಡಿದ್ದಾಳೆ ಗೊತ್ತಾ? ನೋಡೊಣ ಬನ್ನಿ.. ಭಾರತೀಯ ಮೂಲದ ಜಯಾ ಮತ್ತು ಆಕೆಯ ಪೋಷಕರು ಬಾಂಗ್ಲಾದೇಶದಲ್ಲಿ ವಾಸವಿದ್ದಾರೆ.. ಇವರದು ಸುಖ ಸಂಸಾರ. ಆದರೆ ಒಂದು ದಿನ ಜಯ ತಾಯಿಗೆ ಹುಷಾರಿಲ್ಲ ಎಂದು ಡಾಕ್ಟರ್ ಬಳಿ ತೋರಿಸಿದಾಗ ಶಾ’ಕಿಂಗ್ ಸುದ್ದಿಯೊಂದು ಹೊರಬಿತ್ತು.. ಜಯ ಅವರ ತಾಯಿ ಶಿಕಾರಾಣಿಗೆ ಕಿಡ್ನಿ ಸಮಸ್ಯೆ ಇದ್ದು ಆಕೆ ಹೆಚ್ಚುದಿನ ಬದುಕುವುದಿಲ್ಲ ಎಂದು ಹೇಳಿದ ಡಾಕ್ಟರ್ ಆಕೆಗೆ ಯಾರಾದರೂ ಕಿಡ್ನಿ ಕೊಟ್ಟರೆ ಬದುಕಿಸಿಕೊಳ್ಳಬಹುದು ಎಂದು ಹೇಳಿದರು.

Advertisements

ಇದರಿಂದ ಅಕ್ಷರಶಃ ಕಣ್ಣೀರಿನಲ್ಲಿ ಮುಳುಗಿದ ಜಯಾ ಅವರ ತಾಯಿ ರಾಣಿಯವರು ನಾನು ಜೀ’ವ ಬಿಡುವ ಮುನ್ನ ನನ್ನ ಮಗಳ ಮದುವೆ ನೋಡಬೇಕೆಂದು ಭಾವಿಸಿ ಜಯಾಗೆ ಒಂದು ಹುಡುಗನನ್ನು ನೋಡಿದರು.. ನಿಶ್ಚಿತಾರ್ಥಕ್ಕೆ ದಿನವನ್ನು ಕೂಡ ಪಿಕ್ಸ್ ಮಾಡಿದರು. ಇದರ ಮದ್ಯೆ ತನ್ನ ತಾಯಿಯನ್ನು ಬದುಕಿಸಿಕೊಳ್ಳಲು ಪ್ರಯತ್ನ ಶುರುಮಾಡಿದ ಜಯ ಕಿಡ್ನಿ ದಾನಿಗಳಿಗಾಗಿ ಹುಡುಕಾಡಿದರು ಆದರೆ ಕಿಡ್ನಿಗಾಗಿ ಅವರು ಕೇಳಿದಷ್ಟು ಹಣ ಹೊಂದಿಸಲು ಸಾಧ್ಯವಾಗಲಿಲ್ಲ.. ಕೊನೆಗೆ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟ ಜಯಾ..

ಹೇಗಾದರೂ ಮಾಡಿ ತಾಯಿಯನ್ನು ಹುಳಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿ ತನ್ನ ಕಿಡ್ನಿಯನ್ನು ತಾಯಿಗೆ ಕೊಡಲು ಮುಂದಾದಳು. ಆದರೆ ಇದಕ್ಕೆ ತಾಯಿ ರಾಣಿಯವರು ಒಪ್ಪಿಕೊಳ್ಳಲಿಲ್ಲ.. ಕಾರಣ ಜಯಾಗೆ ಇನ್ನೂ 26 ವರ್ಷ. ಬದುಕಿ ಬಾಳಬೇಕಾದ ಹುಡುಗಿ ಅಷ್ಟೇ ಅಲ್ಲದೇ ಮದುವೆ ಕೂಡ ಪಿಕ್ಸ್ ಆಗಿದೆ. ಆದರೆ ತಾಯಿ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಹಾಗದ ಜಯಾ.. ತಾಯಿಯ ಕಾಲಿಗೆ ಬಿದ್ದು ನೀವು ನನಗೆ ಬೇಕು ದಯವಿಟ್ಟು ನನ್ನ ಕಿಡ್ನಿಯನ್ನು ತೆಗೆದುಕೊಳ್ಳಿ ಎಂದು ಊಟ ತಿಂಡಿಯನ್ನು ಬಿಟ್ಟು ತಾಯಿಯನ್ನು ಬೇಡಿಕೊಂಡಳು.

ಕೊನೆಗೆ ಮನಸಿಲ್ಲದ ಮನಸಿನಲ್ಲಿ ಮಗಳ ಕಿಡ್ನಿಯನ್ನು ತೆಗೆದುಕೊಳ್ಳಲು ತಾಯಿ  ರಾಣಿಯವರು ಒಪ್ಪಿಕೊಂಡರು. ತನ್ನ ತಾಯಿಗೆ ಕಿಡ್ನಿ ಕೊಡುತ್ತಿರುವ ವಿಷಯವನ್ನು ಜಯಾ ತನ್ನನ್ನು ಮದುವೆಯಾಗಿತ್ತಿರುವ ಹುಡುಗನಿಗೆ ತಿಳಿಸಿದಳು..ಆದರೆ ಆತ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಆಗ ಹುಡುಗನ ಸಂಬಂಧವನ್ನೇ ಕಡಿದುಕೊಂಡ ಜಯ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿ ತಾಯಿಯನ್ನು ಕರೆದುಕೊಂಡು ಬೆಂಗಳೂರಿನ ಮಣಿಪಾಲ್ ಆಸ್ವತ್ರೆಗೆ ಬಂದು ತಾಯಿಗೆ ತನ್ನ ಒಂದು ಕಿಡ್ನಿಯನ್ನು ಕೊಟ್ಟಳು..

ಆಪರೇಷನ್ ನಂತರ ಈಗ ಜಯ ಹಾಗೂ ಆಕೆಯ ತಾಯಿ ರಾಣಿಯವರು ಆಸ್ವತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.. ಕೊನೆಗೂ ತನ್ನ ತಾಯಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ಜಯಾ ಅವರು.. ತಾಯಿ ಮಗಳ ಅನುಬಂಧವನ್ನು ನೋಡಿ ಮನಸೋತ ಡಾಕ್ಟರ್ ಶಂಕರ್ ಸುಂದರನ್ ತಾಯಿ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಜಯಾ.. ತಾಯಿ ಇಲ್ಲದ ನನ್ನ ಜೀವನ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ.. ನನ್ನ ತಾಯಿಗಿಂತ ನನಗೆ ಬೇರೇನು ಮುಖ್ಯವಲ್ಲ ಎಂದು ಹೇಳಿದ್ದಾರೆ. ಎಂತಹ ಒಳ್ಳೆಯ ಮಗಳು ಅಲ್ಲವೇ.