Advertisements

ಕೆರೆ ಕಾಮೇಗೌಡರ ಸಾಧನೆಯ ಚಿತ್ರ ತಯಾರಿಸಲು ಮುಂದಾದ ಸ್ಯಾಂಡಲ್​​ವುಡ್ ನಿರ್ದೇಶಕ. ಶೀಘ್ರದಲ್ಲೇ ತೆರೆಯ ಮೇಲೆ ನೋಡುವ ಭಾಗ್ಯ.

Cinema News

ಕೆರೆಗಳ ನಿರ್ಮಾತೃ ಅಂದ್ರೆ ತಕ್ಷಣ ನೆನಪಿಗೆ ಬರುವುದು ಮಂಡ್ಯದ ಕೆರೆ ಕಾಮೇಗೌಡ್ರು ಹೌದು ಆಧುನಿಕ ಭಗೀರಥ ಎಂದು ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಕಾಮೇಗೌಡ್ರು ಬಗ್ಗೆ ಎಷ್ಟು ತಿಳಿಸಿದರೂ ಕಡಿಮೆಯೇ. ಕಾಮೇಗೌಡ ಇದಕ್ಕೂ ಮುಂಚೆ ಹಲವು ಜನರಿಗೆ ತಿಳಿದಿರಲಿಲ್ಲ. ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ಕಾಮೇಗೌಡರು ಬಗ್ಗೆ ಮಾತಾಡಿದ್ದಾರೆ ನಂತರ ಇವರ ಬಗ್ಗೆ ಹೆಚ್ಚು ಹೆಚ್ಚು ಜನಕ್ಕೆ ತಿಳಿಯುವಂತಾಗಿದೆ.

Advertisements

84 ವರ್ಷ ವಯಸ್ಸಿನ ಕಾಮೇಗೌಡ್ರು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಇವರ ಕುಟುಂಬ ತೀರಾ ಬಡತನ. ಚಿಕವಯಸ್ಸಿನಲ್ಲೇ ಮನೆಯವರು ವಿದ್ಯಾಭ್ಯಾಸ ಮಾಡಿಸದೇ ಕುರಿಯನ್ನು ಮೇಯಿಸಲು ಕಳಿಸುತ್ತಿದ್ದರಂತೆ. ಆ ದಿನದಿಂದ ಅವರಿಗೆ ಪ್ರಕೃತಿಯೇ ಅವರ ಸರ್ವಸ್ವವಾಗಿದೆ. ಮನುಷ್ಯರಾದರೆ ಹಸಿವು ದಾಹ ಎಲ್ಲವನ್ನೂ ಹೇಳಿಕೊಳ್ಳುತ್ತಾನೆ ಆದರೆ ಪ್ರಾಣಿ ಪಕ್ಷಿಗಳಿಗೆ ಯಾರು ಹಸಿವು ಬಾಯಾರಿಕೆಯನ್ನು ನೀಗಿಸುತ್ತಾರೆ. ಮನುಷ್ಯರು ಮಾತ್ರ ಇದನ್ನು ಮಾಡಲು ಸಾಧ್ಯ. ಈ ಕಾರಣಕ್ಕೆ ಕಾಮೇಗೌಡ್ರು ಒಬ್ಬರೇ ಕೆರೆಯನ್ನು ತೊಡಲು ಶುರು ಮಾಡಿದೆ. ನನಗೆ ಪ್ರಕೃತಿಯೇ ಎಲ್ಲ ಎಂದು ಏಳುತ್ತಾರೆ.

ಯಾರ ಹತ್ತಿರವೂ ಒಂದು ರುಪಾಯಿಗೆ ಕೈ ಚಾಚದೆ ಸ್ವಂತ ಹಣದಲ್ಲೇ 14 ಕೆರೆಗಳನ್ನು ನಿರ್ಮಿಸಿದ್ದಾರೆ. ಕೆರೆಯಲ್ಲಿ ಪ್ರಾಣಿ ಪಕ್ಷಿಗಳು ಬಂದು ನೀರು ಕುಡಿಯುವುದನ್ನು ನೋಡಿದರೆ ನನ್ನ ಮನಸ್ಸಿಗೆ ಸಮಾಧಾನ ಸಂತೃಪ್ತಿ ಎನ್ನುತ್ತಾರೆ ಈ ಮಹಾನುಭಾವ. ಇನ್ನು ಈ ಮಹಾನ್ ವ್ಯಕ್ತಿಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಿಳಿಸಬೇಕು ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಕೆರೆ ಕಾಮೇಗೌಡ್ರು ಬಗ್ಗೆ ಒಂದು ಸಾಕ್ಷ್ಯಚಿತ್ರ ತಯಾರಿಸುತ್ತಿದ್ದಾರಂತೆ.

ಈಗ ಕಾಮೇಗೌಡ ಅವರಿಗೆ ಜೀವಿತಾವಧಿಯವರೆಗೆ ಉಚಿತ ಪಾಸ್ ನೀಡಿದ್ದಾರೆ. ವೇಗದೂತ, ರಾಜಹಂಸ, ವೋಲ್ವೋ ಸೇರಿ ಎಲ್ಲಾ ರೀತಿಯ ಬಸ್​​​ಗಳಲ್ಲಿ ಕಾಮೇಗೌಡ ಅವರು ಪ್ರಯಾಣ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಒಟ್ಟಿನಲ್ಲಿ ಕಾಮೇಗೌಡ ಅವರ ಯಾವ ಉಡುಗೊರೆ ನೀಡಿದರೂ ಕಡಿಮೆಯೇ. ಅವರ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇನ್ನೂ ಶೀಘ್ರದಲ್ಲೇ ಕಾಮೇಗೌಡ ಅವರ ಸಾಧನೆಯನ್ನು ತೆರೆಯ ಮೇಲೆ ನೋಡುವ ಭಾಗ್ಯ ನಮ್ಮದಾಗಲಿ.