Advertisements

ರೋಹಿಣಿ ಸಿಂಧೂರಿ ಅವರ ಜಾಗಕ್ಕೆ ಬಂದ ಹೊಸ ಜಿಲ್ಲಾಧಿಕಾರಿ ಗೌತಮ್ ಮೊದಲ ದಿನವೇ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಎಲ್ಲರಿಗೂ ತಿಳಿದಿರುವಂತೆ ಮೂರು ತಿಂಗಳಿನಿಂದ ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಹಾಗು ಮೈಸೂರು ಪಾಲಿಕೆ ನಿರ್ಗಮಿತ ಆಯುಕ್ತರಾದ ಶಿಲ್ಪಾ ನಾಗ್ ಅವರ ಮನಸ್ತಾಪಗಳು ಬಹಿರಂಗವಾಗಿ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು.. ಕೊನೆಗೆ ಶನಿವಾರ ರಾತ್ರೋ ರಾತ್ರಿ ಮೈಸೂರು ಡೀಸಿ ರೋಹಿಣಿ ಸಿಂಧೂರಿ ಅವರನ್ನ ಹಾಗು ಶಿಲ್ಪಾ ನಾಗ್ ಅವರನ್ನ ಮೈಸೂರಿನಿಂದ ವರ್ಗಾವಣೆ ಮಾಡಿದ್ರು. ರಾಜಕೀಯ ನಾಯಕರ ಆಟಕ್ಕೆ ನಿಷ್ಠಾವಂತ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬ’ಲಿ’ಯಾದರು ಎನ್ನುವ ಮಾತು ಮೈಸೂರಿಗರಲ್ಲಿ ಕೇಳಿ ಬರುತ್ತಿದ್ದು.. ವರ್ಗಾವಣೆ ಬಗ್ಗೆ ಅಸಮಾಧಾನವನ್ನ ಹೊರ ಹಾಕಿದ್ದರು.

[widget id=”custom_html-3″]

Advertisements

ಇನ್ನೂ ಇತ್ತ ಮೈಸೂರಿಗೆ ಗೌತಮ್ ಅವರನ್ನ ವರ್ಗಾವಣೆ ಮಾಡಲಾಗಿತ್ತು. ನಿನ್ನೆ ರೋಹಿಣಿ ಸಿಂಧೂರಿ ಅವರು ಮೈಸೂರಿಗೆ ಬೇಟಿ ನೀಡಿ ನೂತನ ಜಿಲ್ಲಾಧಿಕಾರಿಗಳನ್ನ ಬೇಟಿ ಮಾಡಿ ಶುಭಾಶಯ ತಿಳಿಸಿ.. ಮೈಸೂರಿನಲ್ಲಿ ಕರೋನಾದ ಸಧ್ಯದ ಪರಿಸ್ಥಿತಿಯನ್ನ ವಿವರಿಸಿ ತೆರಳಿದರು. ಆದರೆ ರೋಹಿಣಿ ಸಿಂಧೂರಿ ಅವರು ಹೋಗುತ್ತಿದ್ದಂತೆ.. ಈ ಕಡೆ ನೂತನ ಜಿಲ್ಲಾಧಿಕಾರಿ ಗೌತಮ್ ಅವರು ಹೊಸ ಆದೇಶ ಹೊರಡಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಕ’ರೋ’ನ ನಿಯಂತ್ರಣಕ್ಕೆ ತರುವ ಸಲುವಾಗಿ ವಾರದಲ್ಲಿ ಎರಡ ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿದ್ರು.. ಇನ್ನೂ ಈ ಹಿಂದೆ ರೋಹಿಣಿ ಸಿಂಧೂರಿ ಅವರು ಹೊಸ ಅದೇಶ ಹೊರಡಿಸಿ..

[widget id=”custom_html-3″]

ಜೂನ್ 7 ರಿಂದ 14ನೇ ತಾರೀಖಿನವರೆಗೂ ವಾರದಲ್ಲಿ ಮೂರು ದಿನ.. ಸೋಮವಾರ, ಬುಧವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರು. ಇನ್ನೂ ಅದೇ ದಿನ ರಾತ್ರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯ ಆದೇಶ ಹೊರ ಬಿದ್ದಿತ್ತು.. ಇನ್ನೂ ನಿನ್ನೆ ಅಧಿಕಾರ ಸ್ಪೀಕಾರ ಮಾಡಿದ ನೂತನ ಜಿಲ್ಲಾಧಿಕಾರಿ ಗೌತಮ್ ಅವರು ಇಂದು ಕರ್ತವ್ಯಕ್ಕೆ ಹಾಜರಾಗಿ ರೋಹಿಣಿ ಸಿಂಧೂರಿ ಅವರ ಆದೇಶವನ್ನು ರದ್ದು ಮಾಡಿ..

ವಾರದ ಅಷ್ಟು ದಿನಗಳಲ್ಲೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿ ಹೊಸ ಆದೇಶ ಹೊರಡಿಸಿದ್ದಾರೆ.. ಜೂನ್ 14ನೇ ತಾರೀಖಿನವರೆಗೂ ರಾಜ್ಯದಲ್ಲಿ ಲಾಕ್ಡೌನ್ ಇದ್ದು ಅಲ್ಲಿಯವರೆಗೂ ಇದೇ ಆದೇಶ ಮುಂದುವರೆಯಲಿದೆ ಎಂದು ತಿಳಿಸಿ ಹೊಸ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ನಾನು ಜನಸ್ನೇಹಿಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದು ಮುಂಬರುವ ದಿನಗಳಲ್ಲಿ ಅವರ ಕಾರ್ಯವೈಖರಿ ಕೂತೂಹಲವನ್ನು ಮೂಡಿಸಿದೆ..