Advertisements

ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡುವಾಗ ಮರೆತೂ ಕೂಡ ಈ ತಪ್ಪುಗಳನ್ನ ಮಾಡಲೇಬೇಡಿ ! ಈ ತಪ್ಪುಗಳನ್ನು ಮಾಡುತ್ತಿದ್ದರೇ ಕೂಡಲೇ ಸರಿಪಡಿಸಿಕೊಳ್ಳಿ..

Astrology

ನಮಸ್ತೇ ಸ್ನೇಹಿತರೇ, ದೀಪಗಳ ಹಬ್ಬ ದೀಪಾವಳಿ ಬಂದೇ ಬಿಡ್ತು. ಅದಾಗಲೇ ಬೆಳಕಿನ ಹಬ್ಬ ದೀಪಾವಳಿಗಾಗಿ ಎಲ್ಲಾ ಕಡೆ ಸಿದ್ದತೆಗಳು ಆರಂಭಗೊಂಡಿವೆ. ಯಾವುದೇ ಹಬ್ಬವನ್ನ ಆಚರಿಸುವ ಮುನ್ನ ಮನೆಯನ್ನ ಸ್ವಚ್ಛಗೊಳಿಸುವುದು ನಮ್ಮಲ್ಲಿ ಬಂದ ವಾಡಿಕೆ. ಕೆಲವರಂತೂ ಒಂದು ತಿಂಗಳ ಮುಂಚೆಯೇ ಈ ಕಾರ್ಯದಲ್ಲಿ ತೊಡಗಿಬಿಡುತ್ತಾರೆ. ಮನೆಯನ್ನ ಹಬ್ಬಕ್ಕೆ ಮೊದಲೇ ಎಷ್ಟೇ ಸ್ವಚ್ಛ ಮಾಡಿದ್ರೂ ಕೂಡ ಅಂತಿಮ ಕ್ಷಣದಲ್ಲಿಯೂ ಕೂಡ ಮನೆಯನ್ನ ಕ್ಲೀನ್ ಮಾಡುವವರಿದ್ದಾರೆ. ಆದರೆ ಮನೆ ಸ್ವಚ್ಛ ಮಾಡಿ ಹಬ್ಬವನ್ನ ಸಂಭ್ರಮದಿಂದ ಆಚರಿಸುವ ಮುಂಚೆ ಕೆಲವೊಂಬುದು ವಿಷಯಗಳನ್ನ ನೀವು ತಿಳಿದುಕೊಳ್ಳಲೇಬೇಕು. ಏಕೆಂದರೆ ಮನೆಯನ್ನ ಕ್ಲೀನ್ ಮಾಡುವಾಗ ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೇ ಮಾಡುವ ಕೆಲವೊಂದು ತಪ್ಪುಗಳು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.

*ನೀವು ಮನೆಯನ್ನ ಕ್ಲೀನ್ ಮಾಡುವ ವೇಳೆ ಬಹಳ ವರ್ಷಗಳಿಂದ ಇರುವ ಉಪಯೋಗವಲ್ಲದ ವಸ್ತುಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಅವುಗಳಲ್ಲಿ ಹಾಳಾಗಿರುವ ಗಡಿಯಾರ, ಹಳೆ ಚಪ್ಪಲಿ ಹಾಗು ಬಟ್ಟೆಗಳು, ಕೆಟ್ಟು ಹೋಗಿರುವ ಎಲೆಕ್ಟ್ರಾನಿಕ್ ಉಪಕರಣಗಳು, ಹೀಗೆ ಬೇರೆ ಬೇರೆ ರೀತಿಯ ನಿಷ್ಪ್ರಯೋಜಕ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದಲ್ಲಿ ಅವುಗಳನ್ನ ಹೊರಗಡೆ ಹಾಕುವುದು ಉತ್ತಮ.

Advertisements

*ಒಂದು ವೇಳೆ ನಿಮಗೆ ಉಪಯೋಗವಲ್ಲದ ವಸ್ತುಗಳು ಬೇರೆಯವರ ಬಳಕೆಗೆ ಬರುವುದಾದರೆ, ಅವಶ್ಯಕತೆ ಇರುವವರಿಗೆ ಅವುಗಳನ್ನ ಅವರಿಗೆ ಕೊಡಿ. ಹಾಳಾದ ವಸ್ತುಗಳಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಹೆಚ್ಚಾಗುತ್ತದೆ.ಇದು ವಸ್ತು ದೋಷಕ್ಕೂ ಕೂಡ ಕಾರಣವಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ವಾಸ ಇದ್ದಾರೆ ಮನೆಗೆ ಬರುವ ಲಕ್ಷ್ಮಿ ಕೂಡ ಬರುವುದಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ನಿಮಗೆ ಉಪಯೋಗವಲ್ಲದ ಹಾಳಾದ ಯಾವುದೇ ವಸ್ತುಗಳನ್ನ ಮನೆಯಲ್ಲಿ ಇಡಬೇಡಿ.

*ಕೇವಲ ಮನೆಯ ಒಳಗಡೆ ಮಾತ್ರ ಕ್ಲೀನ್ ಮಾಡುವುದಲ್ಲ. ಮನೆಯ ಹೊರಗಡೆ ಸುತ್ತಮುತ್ತಲಿರುವ ಕಸವನ್ನ ತೆಗೆದು ಸ್ವಚ್ಛ ಮಾಡಿ. ನಿಮ್ಮ ಮನೆಯ ಸುತ್ತಮುತ್ತ ಕಸ ಅಥ್ವಾ ಗಲೀಜು ಇದ್ದಲ್ಲಿ ತಾಯಿ ಮಹಾಲಕ್ಷ್ಮಿ ನಿಮ್ಮ ಮನೆ ಕಡೆ ಕೂಡ ತಿರುಗಿ ನೋಡುವುದಿಲ್ಲ ಎಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಆಧ್ಯಾತ್ಮಿಕವಾಗಿ ಅಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಸಹ ಮನೆಯ ಒಳಗಡೆ ಹಾಗು ಸುತ್ತ ಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಯಾವುದೇ ಕಾಯಿಲೆಗಳು ಕೂಡ ನಿಮ್ಮ ಬಳಿಗೆ ಬರುವುದಿಲ್ಲ.

*ಬಾಗಿಲು ತೆರೆಯುವಾಗ ಮುಚ್ಚುವಾಗ ಶಬ್ದ ಬರುತ್ತಿದ್ದರೆ ಅದು ಅಶುಭ ಎಂದು ಹೇಳಲಾಗಿದೆ. ಹಾಗಾಗಿ ಬಾಗಿಲಿಗೆ ಎಣ್ಣೆ ಹಾಕಿ. ಇದರಿಂದ ಶಬ್ದ ಬರುವುದಿಲ್ಲ. ಬಾಗಿಲಿನ ಮೇಲೆ ಸ್ವಸ್ತಿಕ್ ಚಿನ್ಹೆ ಇಟ್ಟರೆ ಒಳ್ಳೆಯದು. ನಿಮ್ಮ ಮನೆಯ ಬಾಗಿಲು ಹಾಗು ಕಿಟಕಿಗಳಿಗೆ ಸಾಸಿವೆ ಎಣ್ಣೆಯನ್ನ ಹಚ್ಚಿ ಸ್ವಚ್ಛ ಮಾಡಿ.