Advertisements

ನವೆಂಬರ್ 15 ದೀಪಾವಳಿ ಹಾಗೂ ಶಕ್ತಿಶಾಲಿ ಅಮಾವಾಸ್ಯೆ ಮುಗಿದ ಕೂಡಲೇ ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ ! ನಿಮ್ಮ ರಾಶಿಯೂ ಇದೆಯಾ ನೋಡಿ..

Astrology

ನಮಸ್ತೇ ಸ್ನೇಹಿತರೇ, ಕತ್ತಲಿನಿಂದ ಬೆಳಕಿನಡೆಗೆ ನಮ್ಮನ್ನ ಕೊಂಡೊಯ್ಯುವ ಹಬ್ಬವೇ ದೀಪಾವಳಿ. ಈಗಾಗಲೇ ದೀಪಗಳ ಹಬ್ಬ ದೀಪಾವಳಿಗೆ ಕ್ಷಣಗಣನೆ ಶುರುವಾಗಿದ್ದು ಎಲ್ಲೆಡೆ ಹಬ್ಬದ ತಯಾರಿ ನಡೆಯುತ್ತಿದೆ. ನವರಾತ್ರಿ ಬಳಿಕ ನವೆಂಬರ್ ೧೪,೧೫ರಂದು ಆಚರಿಸಲಾಗುವ ಈ ಹಬ್ಬಕ್ಕೆ ವಿಶೇಷ ಶಕ್ತಿ ಕೂಡ ಇದೆ. ಇನ್ನು ಈ ಹಬ್ಬವನ್ನ ವಿಕ್ರಮ ಶಕೆಯ ವರ್ಷದ ಕೊನೆಯಲ್ಲಿ ಭಕ್ತಿ ಭಾವಗಳಿಂದ ಆಚರಣೆ ಮಾಡಲಾಗುತ್ತದೆ. ಇನ್ನು ಉತ್ತರ ಭಾರತದಲ್ಲಿ ವಿಕ್ರಮ ಶಕೆಯನ್ನ ಉಪಯೋಗಿಸುವುದರಿಂದ ಈ ಭಾಗಗಲ್ಲಿ ದೀಪಾವಳಿಯನ್ನ ಹೊಸವರ್ಷವಾಗಿ ಆಚರಣೆ ಮಾಡಲಾಗುತ್ತೆ. ಇದರ ಜೊತೆಗೆ ಲಕ್ಷ್ಮಿ ಪೂಜೆ ಹಾಗೂ ಬಲಿಪಾಡ್ಯಮಿ ಪೂಜೆ ಮಾಡುವುದರ ಮುಖಾಂತರ ಹಬ್ಬ ಆಚರಣೆ ಮಾಡಲಾಗುತ್ತೆ.

Advertisements

ಇನ್ನು ದೀಪಾವಳಿ ಹಬ್ಬಕ್ಕೆ ಪೌರಾಣಿಕ ಹಿನ್ನಲೆ ಕೂಡ ಇದೆ. ಭೂದೇವಿಯ ಮಗನಾದ ನರಕಾಸುರನನ್ನ ವಾಸುದೇವ ಶ್ರೀಕೃಷ್ಣ ಸಂ’ಹಾರ ಮಾಡಿ ಆ ಅಧರ್ಮಿಯಿಂದ ಪ್ರಜೆಗಳ ರಕ್ಷಣೆ ಮಾಡುತ್ತಾನೆ. ಇದೇ ಹಿನ್ನಲೆಯಲ್ಲಿ ನರಕಚತುರ್ದಶಿಯನ್ನ ಆಚರಿಸಲಾಗುತ್ತೆ. ಇನ್ನು ನರಕಚತುರ್ದಶಿ ಮುಗಿದ ಮಾರನೆಯ ದಿನ ಅಮಾವಾಸ್ಯೆಯೆಂದು ದೀಪವನ್ನ ಹಚ್ಚುವುದರ ಮೂಲಕ ಲಕ್ಷ್ಮಿ ಪೂಜೆ ಮಾಡುತ್ತಾರೆ. ಇನ್ನು ಈ ದೀಪಾವಳಿಯ ಮುಗಿದ ಬಳಿಕ ರಾಶಿ ಚಕ್ರಗಳಲ್ಲಿ ಆಗುವ ಬದಲಾವಣೆಗಳಿಂದ ಈ ನಾಲ್ಕು ರಾಶಿಗಳ ಜಾತಕಗಳಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆಯಾಗಿ ಅವರು ಸಿರಿವಂತರಾಗುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಪಂಡಿತರು ಹೇಳುತ್ತಾರೆ. ಹಾಗಾದ್ರೆ ಯಾವುವು ಆ ನಾಲ್ಕು ರಾಶಿಗಳು. ನಿಮ್ಮ ರಾಶಿಯೂ ಇದರಲ್ಲಿ ಇದಯೇ ಎಂದು ನೋಡೋಣ ಬನ್ನಿ..

ಮಿಥುನ ರಾಶಿ : ಸ್ನೇಹಿತರೇ ಸ್ವಯಂ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಈ ರಾಶಿಯ ಮೇಲಿದ್ದು ವ್ಯಾಪಾರ ವ್ಯವಹಾರಗಲ್ಲಿ ನಿರೀಕ್ಷೆ ಮಾಡದಂತಹ ಲಾಭ ಇವರದಾಗಲಿದೆ. ಹೂಡಿಕೆ ಮಾಡುವ ಯೋಚನೆ ಇದ್ದಲ್ಲಿ ಇದು ಶುಭ ಸಮಯವಾಗಿದೆ. ಆದರೆ ಚೆನ್ನಾಗಿ ಆಲೋಚನೆ ಮಾಡಿ ಹೂಡಿಕೆ ಮಾಡಿದಲ್ಲಿ ಅದ್ಭುತವಾದ ಲಾಭ ಗಳಿಸುವ ಸಾಧ್ಯತೆಗಳಿವೆ.

ಕುಂಭ ರಾಶಿ : ಈ ರಾಶಿಯಲ್ಲಿ ಜನಿಸಿದವರಿಗೆ ಈ ದೀಪಾವಳಿ ಶುಭದಾಯಕವಾಗಿದ್ದು ಆರ್ಥಿಕವಾಗಿ ಲಾಭ ಹೊಂದಲಿದ್ದಾರೆ. ಇನ್ನು ಇವರು ಯಾವುದೇ ಹೊಸದಾದ ವ್ಯವಹಾರ, ವ್ಯಾಪಾರಗಳನ್ನ ಶುರು ಮಾಡಲು ಇದು ಶುಭ ಸಮಯವಾಗಿದೆ. ಇನ್ನು ಪ್ರೇಮಿಗಳಿಗೂ ಈ ದೀಪಾವಳಿ ತುಂಬಾ ಶುಭದಾಯಕವಾಗಿದೆ. ಪೋಷಕರಿಂದ ಇವರ ಪ್ರೀತಿಗೆ ಒಪ್ಪಿಗೆ ಸಿಗಲಿದ್ದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಇನ್ನು ಈ ರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳು ತಮ್ಮನ್ನ ದ್ವೇಷಿಸುವವರಿಂದ ದೂರವಿರುವುದು ಬಹಳ ಉತ್ತಮ. ಹಾಗೂ ಅವರ ಜೊತೆ ಯಾವುದೇ ವ್ಯವಹಾರ ವ್ಯಪಾರಗಳನ್ನ ಇಟ್ಟುಕೊಳ್ಳದಿರುವುದು ಕೂಡ ನಿಮಗೆ ಶುಭ ಎನಿಸಲಿದೆ.

ಸಿಂಹ ರಾಶಿ : ದೀಪಾವಳಿಯ ಬಳಿಕ ಈ ರಾಶಿಯ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗಿ, ನಿಂತು ಹೋಗಿದ್ದ ಕೆಲಸಗಳಿಗೆ ಚಾಲನೆ ಸಿಕ್ಕಿ ಉತ್ತಮ ಆಧಾಯ ಇವರದಾಗಲಿದೆ. ಇನ್ನು ಇವರಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿರುವುದರಿಂದ ಆರೋಗ್ಯದ ಮೇಲೆ ನಿಗಾ ವಹಿಸುವುದು ಅವಶ್ಯಕವಾಗಿದೆ.

ತುಲಾ ರಾಶಿ : ಈ ರಾಶಿಯಲ್ಲಿ ಜನ್ಮ ತಾಳಿದ ವ್ಯಕ್ತಿಗಳು ಮಾಡುವ ವ್ಯಾಪಾರದಲ್ಲಿ ಅತೀ ದೊಡ್ಡ ಮಟ್ಟದ ಲಾಭ ಪಡೆದುಕೊಳ್ಳಲಿದ್ದಾರೆ. ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ, ಮಕ್ಕಳಿಲ್ಲದೆ ನೋವು ಅನುಭವಿಸುತ್ತಿರುವವರಿಗೆ ಸಂತಾನ ಭಾಗ್ಯ ಲಭಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಪಂಡಿತರು ಹೇಳಿದ್ದಾರೆ. ಇನ್ನು ಈ ನಾಲ್ಕು ರಾಶಿಗಳವರಿಗೆ ದೀಪಾವಳಿಯ ಬಳಿಕ ಶುಕ್ರದೆಸೆ ಆರಂಭವಾಗಲಿದ್ದು ಎಲ್ಲವೂ ಶುಭವಾಗಲಿದೆ.