1990ರ ಸೆಪ್ಟೆಂಬರ್ 30 ಕನ್ನಡ ಚಿತ್ರರಂಗಕ್ಕೆ ಕರಾಳ ದಿನ. ಏಕೆಂದರೆ ಅಂದು ಸ್ಯಾಂಡಲ್ ವುಡ್ ನ ಕರತೇ ಕಿಂಗ್ ಪ್ರತಿಭಾನ್ವಿತ ನಟ, ನಿರ್ದೇಶಕ ಅಪಘಾತದಲ್ಲಿ ವಿಧಿವಶರಾದ ದಿನ. ಶಂಕರಣ್ಣ ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ಕರುನಾಡಿನ ಎಲ್ಲಾ ಕನ್ನಡಿಗರ ಮನದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ. ಈಗ ಬಾಲಿವುಡ್ ನಟಿ ದೀಪಿಕಾ ಚಿಕ್ಲಿಯಾ ಶಂಕರ್ ನಾಗ್ ಅವರನ್ನ ನೆನೆದಿದ್ದು, ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಶಂಕರ್ ನಾಗ್ ಅವರು ವಿಧಿವಶರಾದ ವರ್ಷ 1990 ರಲ್ಲೇ ತೆರೆಕಂಡಿದ್ದ ‘ಹೊಸಜೀವನ’ ಚಿತ್ರದಲ್ಲಿ ನಾಯಕಿ ನಟಿಯಾಗಿ ನಟಿಸಿದ್ದರು ದೀಪಿಕಾ ಚಿಕ್ಲಿಯಾ. ಇನ್ನು ಈ ನಟಿ 1983ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, 1987ರಲ್ಲಿ ಬಿಡುಗಡೆಗೊಂಡಿದ್ದ ಪೌರಾಣಿಕ ಧಾರವಾಹಿ ‘ರಾಮಾಯಣ’ ಸೀತೆಯಾಗಿ ನಟಿಸಿ ಆಗಿನ ಕಾಲಕ್ಕೆ ತುಂಬಾ ಫೇಮಸ್ ಆಗಿದ್ದರು.
ಇನ್ನು ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಇಂದ್ರಜಿತ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ದೀಪಿಕಾ ಚಿಕ್ಲಿಯಾ ೧೯೯೦ರಲ್ಲಿ ಬಿಡುಗಡೆಗೊಂಡ ಹೊಸಜೀವನ ಚಿತ್ರದಲ್ಲಿ ಶಂಕರ್ ನಾಗ್ ಜೋಡಿಯಾಗಿ ಅಭಿನಯಿಸಿದ್ದರು. ಇನ್ನು ದುರಾದ್ರಷ್ಟವಷಾತ್ ಹೊಸಜೀವನ ಚಿತ್ರ ಬಿಡುಗಡೆಗೊಂಡ ಕೆಲ ತಿಂಗಳಲ್ಲೇ ಕಾರು ಅಪಘಾತದಲ್ಲಿ ಶಂಕರ್ ನಾಗ್ ವಿಧಿವಶರಾದ್ರು.

ಈಗ ಬರೋಬ್ಬರಿ ೩೦ ವರ್ಷಗಳ ಬಳಿಕ ಹೊಸಜೀವನ ಚಿತ್ರದ ಹಾಡೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ದೀಪಿಕಾ ಚಿಕ್ಲಿಯಾ ಹೊಸಜೀವನ ಚಿತ್ರದ ಕೊನೆಯ ಶೆಡ್ಯೂಲ್ ಮುಗಿಸಿದ ನಂತರ ನಟ ಶಂಕರ್ ನಾಗ್ ಅಪಘಾತದಲ್ಲಿ ವಿಧಿವಶರಾದ್ರು ಎಂಬ ಸುದ್ದಿ ಕೇಳಿ ನಾನು ಶಾಕ್ ಆಗಿದ್ದೆ. ಆ ಮನಸ್ಥಿತಿಯಿಂದ ನನಗೆ ಹೊರಗೆ ಬರಲು ನಾನು ತುಂಬಾ ಸಮಯ ತೆಗೆದುಕೊಳ್ಳಬೇಕಾಯಿತು. ಹೊಸಜೀವನ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿತ್ತು. ಆದರೆ ಖ್ಯಾತ ನಟ ಶಂಕರ್ ನಾಗ್ ಅವರನ್ನ ಕಳೆದುಕೊಂಡಿದ್ದೆವು. ಅವರಲ್ಲಿದಿರುವ ನೋವು ಇನ್ನು ಕಾಡುತ್ತಿದೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಬರೆದುಕೊಂಡಿದ್ದಾರೆ.