Advertisements

ಇಷ್ಟು ಕಪ್ಪುಗಿರುವ ಹುಡುಗಿನಾ ಹೀರೋಯಿನ್ ಮಾಡಬೇಕಾ! ಎಂದು ರಿಜೆಕ್ಟ್ ಮಾಡಿದರು.. ಆದರೆ ಈಗ ಕೋಟಿ ಕೋಟಿ ಕೊಟ್ಟರು ಈ ಕನ್ನಡ ನಟಿಯ ಡೇಟ್ ಸಿಗುತ್ತಿಲ್ಲ..

Cinema

ನಮಸ್ತೆ ಸ್ನೇಹಿತರೆ, ಸಿನಿಮಾದಲ್ಲಿ ಅವಕಾಶಕ್ಕಾಗಿ ಪೊಟೊ ಕಳುಹಿಸಿದರೆ ಹುಡುಗಿ ಸ್ವಲ್ಪ ಕಪ್ಪು ಎಂದು ತುಂಬಾ ಜ‌ನ ಅವಕಾಶ ಕೊಡಲು ಹಿಂದೇಟು ಹಾಕಿದರು.. ತಾನೊಬ್ಬ ಪ್ರಸಿದ್ಧ ಕುಟುಂಬದಿಂದ ಬಂದಿದ್ದರು ಅವಕಾಶಗಳು ಸಿಗಲಿಲ್ಲ. ಆದರು ತನ್ನ ಗುರಿಯನ್ನು ಬೆನ್ನಟ್ಟಿ ನಿಂತ ಈ ಹುಡುಗಿ ಈಗ ಇಂಡಿಯಾದ ಟಾಪ್ ನಟಿ. 2001 ರಲ್ಲಿ ಈಕೆ ನಟಿನಾ, ಇಷ್ಟು ಕಪ್ಪುಗಿದ್ದಾಳೆ.. ಪರವಾಗಿಲ್ಲ ಆದ್ರೆ ಸ್ವಲ್ಪ ದಪ್ಪ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದರು ಆಡಿಶನ್ ನಲ್ಲಿ ಪೊಟೊ ನೋಡಿದ ಸಿನಿ ಜನ. 2019 ರಲ್ಲಿ ಈ ನಟಿ ಡೇಟ್ ಕೊಟ್ಟರೆ ಸಾಕು ಎಷ್ಟು ಕೋಟಿ ಬೇಕಾದರೂ ಕೂಡ ಕೊಡ್ತೀವಿ ಎನ್ನುತ್ತಿದ್ದಾರೆ ಅದೇ ಸಿನಿ ಜನ..

Advertisements

ನಾವು ಮಾತನಾಡುತ್ತಿರುವುದು ಕನ್ನಡದಲ್ಲಿ ಮೊದಲು ನಟಿಸಿ ಈಗ ಬಾಲಿವುಡ್ ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿರುವ ದೀಪಿಕಾ ಪಡುಕೋಣೆ ಬಗ್ಗೆ. ಉಡುಪಿಯವರಾದ ಪ್ರಕಾಶ್ ಪಡುಕೋಣೆ ಅವರು ಡೆನ್ಮಾರ್ಕ್ ನಲ್ಲಿ ಇದ್ದಾಗ ದೀಪಿಕಾ ಪಡುಕೋಣೆ ಹುಟ್ಟಿದರು. ನಂತರ ದೀಪಿಕಾಗೆ 11 ವರ್ಷ ಇದ್ದಾಗ ವಾಪಸ್ ಬೆಂಗಳೂರಿಗೆ ಬಂದು ನೆಲೆಸಿದರು. ದೀಪಿಕಾ ಅವರ ತಂದೆ ನಮಗೆಲ್ಲರಿಗೂ ಗೊತ್ತಿರುವ ಬ್ಯಾಡ್ಮಿಂಟನ್ ಪ್ಲೇಯರ್ ಪ್ರಕಾಶ್ ಪಡುಕೋಣೆ.. ತಂದೆಯ ಆಗೆ ದೀಪಿಕಾ ಕೂಡ ಅಥ್ಲೆಟಿಕ್. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ..

ಈಕೆಯ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯ ಏನಪ್ಪ ಅಂದರೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ಪ್ಲೇಯರ್ ಅಷ್ಟೇ ಅಲ್ಲದೇ ಅಂತರರಾಷ್ಟ್ರೀಯ ಸ್ಪೇಸ್ ಬಾಲ್ ಪ್ಲೇಯರ್ ಕೂಡ. ಆದರೆ ಮಾಡೆಲಿಂಗ್ ಮೆಲೆ ಆಸಕ್ತಿಯಿಂದ ಕ್ರೀಡೆಗೆ ಬಾಯ್ ಬಾಯ್ ಹೇಳಿದರು.. ನಂತರ ತುಂಬಾ ಜಾಹಿರಾತುಗಳಲ್ಲಿ ನಟಿಸಿದ ದೀಪಿಕಾ ಪ್ರಾರಂಭದಲ್ಲಿ ಸಿನಿಮಾ ಅವಕಾಶಕ್ಕಾಗಿ ಎಲ್ಲಿಲ್ಲದ ಕಷ್ಟಪಟ್ಟರು. ಸಿನಿಮಾ ಅವಕಾಶಗಳಿಗಾಗಿ ಪೊಟೊ ಕಳುಹಿಸಿದರೆ ಎಲ್ಲಾ ನಿರ್ಮಾಪಕರು ದೀಪಿಕಾ ಅವರನ್ನು ರಿಜೆಕ್ಟ್ ಮಾಡುತ್ತಿದ್ದರು..

ಅದಕ್ಕೆ ಅವರು ಕೊಡುತ್ತಿದ್ದ ಕಾರಣ ಹುಡುಗಿ ಸ್ವಲ್ಪ ಕಪ್ಪು ಹಾಗು ತುಂಬಾ ಸಣ್ಣಗಿದ್ದಾರೆ ಎಂದು. ಆದರೆ ಪಟ್ಟು ಬಿಡದೆ ಮತ್ತೆ ಹತ್ತಾರು ಜಾಹೀರಾತುಗಳಲ್ಲಿ ನಟಿಸಿದ ದೀಪಿಕಾ 2005 ರಲ್ಲಿ ಮಾಡೆಲ್ ಆಪ್ ದ ಇಯರ್ ಪಟ್ಟವನ್ನು ಧರಿಸಿದರು.. ಈಗೆ ಸಿನಿಮಾ ಅವಕಾಶಗಳಿಗಾಗಿ ಪರದಾಡುತ್ತಿದ್ದ ದೀಪಿಕಾ ಪಡುಕೋಣೆಗೆ ಮೊದಲು ಅವಕಾಶಕೊಟ್ಟಿದ್ದೇ ಕನ್ನಡ ಚಿತ್ರರಂಗ. ಅವಕಾಶಗಳಿಗಾಗಿ ತಿರುಗಾಡುತ್ತಿದ್ದ ದೀಪಿಕಾ ಪಡುಕೋಣೆಯನ್ನು ಕರೆದು ಐಶ್ವರ್ಯ ಚಿತ್ರದಲ್ಲಿ ಅವಕಾಶ ಕೊಟ್ಟರು ಇಂದ್ರಜಿತ್ ಲಂಕೇಶ್..

ಆನಂತರ ಹಿಮೆಶ್ ರಶ್ಮಿಯಾ ಆಲ್ಬಮ್ ಚಿತ್ರದಲ್ಲಿ ನಟಿಸಿದರು ದೀಪಿಕಾ. ಆ ಅಲ್ಬಮ್ ನೋಡಿದ ನಿರ್ದೇಶಕಿ  ಪಾರಕಾನ್ ಅವರು ಶಾರುಖಾನ್ ಗೆ ನಾಯಕಿಯಾಗಿ ಓಂ ಶಾಂತಿ ಓಂ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು.. ಆನಂತರ ಹಿಂತಿರುಗಿ ನೋಡಲಿಲ್ಲ ದೀಪಿಕಾ ಪಡುಕೋಣೆ. ನಾನು ಮೊದಲು ಒಂದು ನಟಿಸಿದ್ದು ಕನ್ನಡ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ ಎಂದು ದೀಪಿಕಾ ಪಡುಕೋಣೆ ಹೇಳಿಕೊಳ್ಳುವುದು ತುಂಬಾ ಕಡಿಮೆ.. ಆದರೆ ಕರುನಾಡು ವ್ಯಕ್ತಿಗಳನ್ನು ಬೆಳೆಸುತ್ತೇ ಹೊರತು ಪ್ರತಿಫಲ ಆಶಿಸುವುದಿಲ್ಲ.