Advertisements

ಇಲ್ಲಿಗೆ ಹೋದವರ ಅದೃಷ್ಟವೇ ಬದಲಾಗಿ ಹೋಗುತ್ತದೆ ! ಯಾವುದೇ ತೊಂದರೆ ಇದ್ದರೆ ಭೇಟಿ ಕೊಡಲೇಬೇಕಾದ ಅದ್ಭುತ ದೇವಾಲಯ..

Adyathma Temples

ಕಷ್ಟ ಬಂದ ಕೂಡಲೇ ನಾವು ದೇವರ ಸನ್ನಿಧಿಗೆ ಓಡುತ್ತೇವೆ. ಸಂಕಟ ಬಂದಾಗ ವೆಂಕಟರಮಣ ಎಂದು. ಕೇವಲ ಕಷ್ಟ ಬಂದವರು ಮಾತ್ರವಲ್ಲ ತಮ್ಮ ಜೀವನವನ್ನು ಸುಖ ಸಂತೋಷದಿಂದ ಸಾಗಿಸಬಯಸುವವರೆಲ್ಲರೂ ದೇವಾಲಯಗಳಿಗೆ ತೆರಳುತ್ತಾರೆ. ದೇವಾಲಯಗಳಲ್ಲಿ ಧನಾತ್ಮಕ ಶಕ್ತಿ ದೊರೆಯುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾದ ಸತ್ಯ. ಅಂತಹ ಒಂದು ಅಧ್ಬುತ ದೇವಾಲಯ ಒಂದಿದೆ. ಅಲ್ಲಿಗೆ ತೆರಳಿದವರ ಅದೃಷ್ಟವೇ ಬದಲಾಗಿ ಹೋಗುತ್ತದೆ. ಅದು ಒಂದು ಸುಂದರ ಪ್ರವಾಸಿ ತಾಣವೂ ಆಗಿದೆ.

Advertisements

ಹೌದು, ಅದೇ ದೇವರಾಯನ ದುರ್ಗ. ಒಂದು ಸುಂದರ ತಾಣ. ಸಾವಿರಾರು ವರ್ಷಗಳ ಇತಿಹಾಸ ವಿರುವ ಲಕ್ಷ್ಮೀ ನರಸಿಂಹಸ್ವಾಮಿಯ ಶಕ್ತಿ ಸನ್ನಿಧಿ. ಇಲ್ಲಿ ಲಕ್ಷ್ಮೀನರಸಿಂಹ ದೇವರು ಬೆಟ್ಟದ ಮೇಲೆ ನೆಲೆಸಿದ್ದಾರೆ. ಸುತ್ತಲೂ ಕಾಡು ಹಸಿರಿನ ರಮಣೀಯ ಪರಿಸರವೂ ಇದೆ. ಬೆಂಗಳೂರಿನಿಂದ ಸುಮಾರು 80ಕಿಮೀ ದೂರದಲ್ಲಿ ಈ ಸ್ಥಳವಿದೆ. ಇದು ದೇವರಾಯನ ದುರ್ಗ ಎಂದು ಪ್ರಸಿದ್ಧಿ. ಇಲ್ಲಿಯ ದೇವರು ಲಕ್ಷ್ಮೀ ನರಸಿಂಹಸ್ವಾಮಿ. ಭೋಗ ನರಸಿಂಹ ಮತ್ತು ಯೋಗ ನರಸಿಂಹದೇವರ ಲಕ್ಷ್ಮೀ ದೇವಿಯ ಸಮೇತ ನೆಲೆಸಿದ್ದಾರೆ.

ಸ್ಥಳದ ಮಹಿಮೆ : ಇದು ಒಂದು ಶಕ್ತಿಶಾಲಿ ದೇವಾಲಯ ಇಲ್ಲಿ ಪಾಪ ಪರಿಹಾರಕ್ಕಾಗಿ ಹೆಚ್ಚಿನ ಜನರು ಬರುತ್ತಾರೆ. ವೈದ್ಯರ ಬಳಿ ಹೋದರೂ ಮಕ್ಕಳಾಗದವರು ಮಕ್ಕಳ ಭಾಗ್ಯ ಪಡೆಯುತ್ತಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಕ್ಷೇತ್ರ ಒಂದು ವರದಾನ. ಮುಖ್ಯವಾಗಿ ಬದುಕಲ್ಲಿ ಬರೀ ಸೋಲನ್ನೇ ಕಂಡವರು ಇಲ್ಲಿ ಹರಕೆ ಮಾಡಿಕೊಂಡರೆ ಅವರ ಜೀವನದ ದಿಕ್ಕೇ ಬದಲಾಗಿ ಹೋಗುತ್ತದೆ. ಇದು ಒಂದು ಪ್ರವಾಸಿ ತಾಣವೂ ಹೌದು. ಈ ಪ್ರದೇಶ ಕಾಡು ಬೆಟ್ಟದಿಂದ ಕೂಡಿದ್ದು ಕಣ್ಣಿಗೆ ತಂಪನ್ನು ಮನಸಿಗೆ ಮುದವನ್ನು ಕೊಡುತ್ತದೆ. ಇಲ್ಲಿ ಸುವರ್ಣ ಎಂಬ ನದಿಯು ಉಗಮವಾಗುತ್ತದೆ. ಅದು ಒಂದು ಕಿಲೋಮೀಟರ್ ಸಾಗಿ ಅಂತರ್ಮುಖಿಯಾಗಿ ಹರಿಯುತ್ತದೆ. ಇದರ ಸಮೀಪವೇ ನಾಮ ಚಿಲುಮೆ ಎಂಬ ಪ್ರಸಿದ್ಧ ಪ್ರವಾಸಿ ತಾಣವೂ ಇದೆ. ಇಲ್ಲಿ ಜಿಂಕೆ ಹಾಗೂ ವನ್ಯಜೀವಿಗಳ ವನವಿದೆ.

ಇಲ್ಲಿ ಪ್ರಭು ಶ್ರೀ ರಾಮ ಚಂದ್ರ ತನ್ನ ಬಾಣದಿಂದ ಮಾಡಿದ ನೀರಿನ ಚಿಲುಮೆ ಇದೆ. ಇದು ನೋಡಲು ಬಲು ಸುಂದರ. ದೇವರಾಯನ ದುರ್ಗದಲ್ಲಿ ಕಲ್ಯಾಣಿ ಮುಂತಾದ ಸುಂದರ ಸ್ಥಳಗಳು ಇವೆ. ಈ ಸ್ಥಳದವಿಶೇಷತೆ ಏನು ಗೊತ್ತಾ ? ಈ ಸ್ಥಳದ ಹತ್ತಿರದ ಗ್ರಾಮದಲ್ಲಿ ಶ್ರೀ ಶಂಕರ ಚಾರ್ಯರು ನಿರ್ಮಿಸಿರುವ ದೇವಾಲಯವಿದೆ. ಜಗತ್ತಿನ ಮೊಟ್ಟಮೊದಲ ನರಸಿಂಹ ವಿಗ್ರಹವನ್ನು ದೇವರಾಯನ ದುರ್ಗದಲ್ಲಿ ನೋಡಬಹುದು. ಒಂದು ದಿನದ ಪ್ರವಾಸಕ್ಕೆ ಇದು ತುಂಬಾ ಸೂಕ್ತ ಸ್ಥಳ. ಅಲ್ಲದೆ ನೀವು ಯಾವುದೇ ತೊಂದರೆ ಅಥವಾ ಸಂಕಷ್ಟದಲ್ಲಿ ಇದ್ದರೆ ಭೇಟಿ ಕೊಡಲೇಬೇಕಾದ ಸ್ಥಳ.