Advertisements

ದೇವೇಗೌಡ್ರ ಪತ್ನಿ ಚೆನ್ನಮ್ಮರಿಗೆ ಆ್ಯ’ಸಿಡ್ ಎರಚಿದ್ದು ಯಾರು ಗೊತ್ತಾ?

Cinema

ಒಬ್ಬ ವ್ಯಕ್ತಿ ಎತ್ತರಕ್ಕೆ ಇರುತ್ತಾನೆ ಎಂದರೆ ಅವನ ಕಾಲು ಎಳೆದು ಕೆಳಗೆ ಬಿಡಿಸಲೆಂದು ಕೆಲವರು ಕಾಯುತ್ತಾರೆ. ಹಾಗೆ ದೇವೇಗೌಡರ ರಾಜಕೀಯ ಭವಿಷ್ಯವನ್ನು ಕಂಡು ಸಹಿಸದ ಜನರು ಅವರ ಮೇಲೆ ಆ್ಯಸಿಡ್ ದಾಳಿ ಮಾಡಿದ್ದರು. ಆದರೆ ಆ ದಾಳಿಗೆ ಸಿಲುಕಿ ನಲಗಿದ್ದು ಮಾತ್ರ ಬೇರೆಯವರು. ಯಾರು ಆ್ಯಸಿಡ್ ದಾಳಿ ಮಾಡಿದರು? ಯಾಕೆ ಮಾಡಿದ್ದರು? ಅವರು ಯಾರು? ಅಂತ ನೋಡೋಣ ಬನ್ನಿ.

ದೇವೇಗೌಡರು ಕರ್ನಾಟಕ ಕಂಡ ಅತಿ ಅಪರೂಪದ ರಾಜಕಾರಣಿ ತಮ್ಮ ಪ್ರಭಾವವನ್ನು ದೇಶದುದ್ದಕ್ಕೂ ಪಸರಿಸಿ ಪ್ರಧಾನಿಯಾದವರು. ಇವರು ಕನ್ನಡ ಮಣ್ಣಿಗಾಗಿ ರಾಜ್ಯಗಳಿಗಾಗಿ ಕನ್ನಡಕ್ಕಾಗಿ ಹೋರಾಡಿದ ಧೀಮಂತ ರಾಜಕಾರಣಿ. ಇವರು 1954ರಲ್ಲಿ ಚೆನ್ನಮ್ಮಳನ್ನು ವಿವಾಹವಾದರು. ತದನಂತರ ಇವರು ರಾಜಕೀಯ ಜೀವನ ಆರಂಭವಾಯಿತು.ನಂತರ ಅವರಿಗೆ ಬೆಂಗಾವಲಾಗಿ ನಿಂತಿದ್ದು ಪತ್ನಿ ಚೆನ್ನಮ್ಮ ಅವ್ರು. ಅವರ ತ್ಯಾಗ ಮಾಡಿದ್ದು ತುಂಬಾ ಹೆಚ್ಚು ಸಮಯ. ಹೀಗೆ ಸದಾ ಪತಿ ದೇವೇಗೌಡರ ಬೆಂಗಾಲ್ ಆಗಿ ನಿಂತು.

Advertisements

ಸದಾ ಅವರ ಹಿತವನ್ನು ಬಯಸುತ್ತಾ, ಮನೆಯಲ್ಲಿದ್ದು, ರಾಜಕೀಯ ಸಲಹೆ ನೀಡುತ್ತಿದ್ದವರು ಚೆನ್ನಮ್ಮ ಅವರು. ಹೀಗೆ ಒಂದು ದಿನ ಚೆನ್ನಮ್ಮ ಹಾಗೂ ದೇವೇಗೌಡರ ಕುಟುಂಬ 2001ರಲ್ಲಿ ಹಾಸನ್ ಹೊಳೆ ನರಸೀಪುರದ ಈಶ್ವರನ ದರ್ಶನ ಪಡೆಯಲು ಹೋದರು. ಈ ಸಂದರ್ಭದಲ್ಲಿ ಆ್ಯಸಿಡ್ ದಾಳಿ ಸಂಭವಿಸುತ್ತದೆ. ಇವರ ಜೊತೆಗೆ ಸೊಸೆ ಭವಾನಿ ರೇವಣ್ಣ ಕೂಡ ಇರುತ್ತಾರೆ. ಈ ದಾಳಿ ಮಾಡ ಬಂದವರು ಎಚ್ ಡಿ ರೇವಣ್ಣ ಹಾಗೂ ದೇವೇಗೌಡರ ಮೇಲೆ. ಆದರೆ ಅದು ದೇವೇಗೌಡರ ಪತ್ನಿ ಚೆನ್ನಮ್ಮ ಮತ್ತು ಭವಾನಿಯವರ ಮೇಲೆ ಬೀಳುತ್ತದೆ. ಭಾಗಶಹ ಚೆನ್ನಮ್ಮ ಅವರ ಮುಖಕ್ಕೆ ಆಸಿಡ್ ಸಿಡಿಯುತ್ತದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ ಅದು ಮುಖದ ಅರ್ಧಭಾಗವನ್ನು ಸಂಪೂರ್ಣವಾಗಿ ಸುಟ್ಟಿರುತ್ತದೆ. ಇವರು ಸುಮಾರು ಎರಡು ತಿಂಗಳುಗಳ ಕಾಲ ಪ್ರಜ್ಞೆ ಇಲ್ಲದೆ ಆಸ್ಪತ್ರೆಯಲ್ಲಿ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.


ಅಂದಹಾಗೆ ಪೊಲೀಸರು ಈ ದಾಳಿ ಕುರಿತು ತೀವ್ರ ತನಿಖೆ ನಡೆಸುತ್ತಾರೆ. ಆಗ ತಿಳಿದಿದ್ದು ಶಾಕಿಂಗ್ ಸುದ್ದಿ. ಹೌದು… ಈ ಆ್ಯಸಿಡ್ ದಾಳಿ ಮಾಡಿದ್ದು ಅವರ ಮಗ. ರಾಜಕೀಯ ಏಳಿಗೆ ಸಹಿಸದ ದೇವೇಗೌಡರ ತಮ್ಮ ಬಸವೇ ಗೌಡರ ಮಗ ಲೋಕೇಶ್ ಎಂಬಾತನೇ ಈ ಆ್ಯಸಿಡ್ ದಾಳಿ ಮಾಡಿದ್ದ. ದೇವೇಗೌಡರ ರಾಜಕೀಯ ರಂಗದಲ್ಲಿ ಉನ್ನತಕ್ಕೆ ಎರುತ್ತಿರುವುದು ತಮ್ಮನಿಗೆ ಸಹಿಸಲು ಆಗದೆ ಕೌಟುಂಬಿಕವಾಗಿ ಕತ್ತಿ ಮಸಿಯುತಿದ್ದರು. ಇದೇ ಕಾರಣಕ್ಕೆ ಆಸಿಡ್ ದಾಳಿ ಮಾಡಿದ್ದರು ಎಂದು ಲೋಕೇಶನನ್ನು ಅರೆಸ್ಟ್ ಮಾಡಲಾಗಿತ್ತು. ಈತನಿಗೆ ಎಂಟು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಆದರೆ ನಾಲ್ಕೂವರೆ ವರ್ಷಗಳ ನಂತರ ದೇವೇಗೌಡರ ತಮ್ಮನಿಗೆ ಕ್ಯಾನ್ಸರ್ ಆಗಿದೆ. ಅವರ ಮಗನನ್ನು ಬಿಡಿ. ಅವರ ತಂದೆಯೊಂದಿಗೆ ಕೆಲ ಕಾಲ ಬದುಕಲು ಬಿಡಿ ಎಂದು ಹೇಳಿ ಬಿಡಿಸಿಕೊಂಡು ಬಂದರು. ರಾಜಕೀಯ, ಕೌಟುಂಬಿಕ ಕಲಹ, ವೈಷಮ್ಯ ದಿಂದ ಅಂದು ತೀವ್ರ ನೋವು ಅನುಭವಿಸಿದ್ದು ಮಾತ್ರ ಚೆನ್ನಮ್ಮ ಹಾಗೂ ಭವಾನಿಯವರು. ಚೆನ್ನಮ್ಮ ಅವರ ಮುಖದ ಮೇಲೆ ಈಗಲೂ ಸು’ಟ್ಟಗಾ’ಯಗಳಿವೆ.