Advertisements

ಧನುರ್ಮಾಸ ಮುಗಿಯುವುದರೊಳಗಾಗಿ ಈ ವಸ್ತುಗಳನ್ನು ಧಾನ ಮಾಡಿ! ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ..

Adyathma

ಶೂನ್ಯ ಕಳೆಯುದಕ್ಕು ಮುನ್ನ ಅಂದರೆ ಈ ಧನುರ್ಮಾಸ ಮುಗಿಯುವುದರ ಒಳಗಾಗಿ ಗೋಧೂಳಿ ಸಮಯದಲ್ಲಿ ಕೆಲ ವಸ್ತುಗಳನ್ನು ಧಾನ ಮಾಡುವುದರಿಂದ ಧನ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ಧನುರ್ಮಾಸದ ಯಾವುದೇ ದಿನ ಅಥವಾ ಸಂಕ್ರಾಂತಿ ಹಬ್ಬದಂದು ಕೆಲ ವಸ್ತುಗಳನ್ನು ಧಾನ ಮಾಡಬೇಕು. ಸಂಜೆ ಗುಧೂಳಿ ಸಮಯದಲ್ಲಿ ದೇವರ ಪೂಜೆ ಮಾಡಿ, ಬಾಗಿಲು ಪೂಜೆ ಮಾಡಿ ನಂತರ ಹಸುವಿಗೆ ಅಕ್ಕಿ ಬೆಲ್ಲವನ್ನು ಕೊಡಬೇಕು. ನಂತರ ಚಿಕ್ಕ ಮಕ್ಕಳನ್ನು ಕರೆದು ಶುದ್ಧವಾದ ಹಾಲನ್ನು ಧಾನ ಮಾಡಬೇಕು. ಇಲ್ಲವೇ ಕೈಲಾದಷ್ಟು ಜನರಿಗೆ ಅನ್ನ ಧಾನ ಮಾಡಬೇಕು.

Advertisements

ಇಲ್ಲವೇ ಹರಿಷಿನದ ಕೊನೆ, ಕಮಲದ ಹೂ, ಹಣದ ಕೆಲ ನಾಣ್ಯಗಳನ್ನು ಮಹಾ ಲಕ್ಷ್ಮಿಯ ಕಳಸದ ಎದುರು ಇಟ್ಟು ಪೂಜೆ ಮಾಡಿ ಆ ನಾಣ್ಯ ಅಥವಾ ನೋಟನ್ನು ನೀವು ಹಣ ಇಡುವ ಬೀರು, ಕಬೋರ್ಡ್ ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಧನಲಕ್ಷಿಯು ಒಲಿದು ಅಪಾರ ಹಣ ನಿಮ್ಮ ಬಳಿ ಹರಿದು ಬರುತ್ತದೆ ಎಂದು ಹೇಳಲಾಗಿದೆ. ಗೋವಿನ ಪೂಜೆ ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ಅಲ್ಲದೆ ಈ ಶುಭ ಧನುರ್ಮಾಸದಲ್ಲಿ ಶುಭ ವಸ್ತುಗಳಾದ ಎಲೆ ಅಡಿಕೆ, ಬಂಗಾರ, ಹೊಂಬಾಳೆ ಮೊದಲಾದ ವಸ್ತುಗಳ ಧಾನ ಶ್ರೇಷ್ಠ. ಹಾಲು ಅನ್ನದಾನ ಅತಿ ಶ್ರೇಷ್ಠ. ಈ ಧಾನಗಳಿಂದ ಮಾಹಲಕ್ಷ್ಮಿಯು ಪ್ರಸನ್ನಗೊಂಡು ವರ ಕರುಣಿಸುವಳು ಎಂಬ ನಂಬಿಕೆ ಇದೆ.