Advertisements

ಕೇವಲ ಒಂದೇ ವಾರಕ್ಕೆ ಬಿಗ್ ಮನೆಯಿಂದ ಹೊರ ಬಂದ ಟಿಕ್ ಟಾಕ್ ಧನುಶ್ರೀ 1 ವಾರಕ್ಕೆ ಪಡೆದ ಹಣ ಎಷ್ಟು ಗೊತ್ತಾ ?

Entertainment

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸಂಚಿಕೆ ೮ ಕಾರ್ಯಕ್ರಮ ಶುರುವಾಗಿ ಈಗಾಗಲೇ ಒಂದು ವಾರ ಕಳೆದಿದೆ. ಇನ್ನು ಬಿಗ್ ಮನೆಯಲ್ಲಿ ಈಗಾಗಲೇ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಸ್ಪರ್ಧಿಯೊಬ್ಬರು ಮನೆಯಿಂದ ಹೊರಬಂದಾಗಿದೆ. ಹದಿನೇಳು ಸ್ಫರ್ಧಿಗಳಲ್ಲಿ ಒಬ್ಬರು ಎಲಿಮನೇಟ್ ಆಗಿದ್ದು ಕೇವಲ ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯ ವಾಸ ಮುಗಿಸಿ ತಮ್ಮ ಮನೆ ಕಡೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಈ ಸಲದ ಬಿಗ್ ಬಾಸ್ ೮ ರ ವಿಶೇಷತೆ ಏನೆಂದರೆ, ತಮ್ಮ ವಿಭಿನ್ನ ಪ್ರತಿಭೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ ಆದ ಕೆಲವರನ್ನ ಆಯ್ಕೆ ಮಾಡಲಾಗಿದ್ದು,

Advertisements

ಉಳಿದವರು ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು, ಬೈಕ್ ರೇಸರ್, ಕ್ರಿಕೆಟರ್ ಹಾಗೂ ಸಾಮಾಜಿಕ ಕಾರ್ಯಕರ್ತ ಹೀಗೆ ಹಲವಾರು ವಿಭಾಗಗಳಿಂದ ಸ್ಪರ್ಧಿಗಳನ್ನ ಆಯ್ಕೆ ಮಾಡಲಾಗಿತ್ತು. ಇನ್ನು ಟಿಕ್ ಟಾಕ್ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದ ಧನುಶ್ರೀ ಕೂಡ ಒಬ್ಬರು. ಇನ್ನು ಮೊದಲ ವಾರದ ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ನಾಮಿನೇಟ್ ಆದ ಮೂರು ಸ್ಪರ್ಧಿಗಳಲ್ಲಿ ನಿರ್ಮಲಾ ಚೆನ್ನಪ್ಪ, ರಘು ಗೌಡ ಹಾಗೂ ಟಿಕ್ ಟಾಕ್ ಧನುಶ್ರೀ. ಇನ್ನು ಭಾನುವಾರದಂದು ನಡೆದ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಸುದೀಪ್ ರವರು ಒಬ್ಬ ಸ್ಪರ್ಧಿಗೆ ಬಿಗ್ ಮನೆಯಿಂದ ಗೇಟ್ ಪಾಸ್ ಕೊಡಿಸಿದ್ದಾರೆ.

ಅಂತಿಮವಾಗಿ ನಡೆದ ಎಲಿಮನೆಷನ್ ನಲ್ಲಿ ನಿರ್ಮಲಾ ಚೆನ್ನಪ್ಪ ಮತ್ತು ರಘು ಗೌಡ ಅವರ್ಫ್ ಸೇಫ್ ಆಗಿದ್ದು ಧನುಶ್ರೀ ಎಲಿಮನೇಟ್ ಆದ ಸ್ಪರ್ಧಿಯಾಗಿದ್ದಾರೆ. ಹಾಗಾದ್ರೆ ಒಂದು ವಾರಗಳ ಕಾಲ ಬಿಗ್ ಮನೆಯಲ್ಲಿದ್ದ ಧುನುಶ್ರೀಯವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ?ಹೌದು, ಸಾಮಾಜಿಕ ಜಾಲತಾಣದ ಮೂಲಕ ಖ್ಯಾತರಾಗಿರುವ ಧನುಶ್ರೀ ಸಿನಿಮಾ ಅಥ್ವಾ ಕಿರುತೆರೆಯ ಕಲಾವಿದರೇನು ಅಲ್ಲ. ಹಾಗಾಗಿ ಅವರಿಗೆ ಕಡಿಮೆ ಸಂಭಾವನೆ ನೀಡಲಾಗಿದೆ. ಎಲ್ಲಾ ಸ್ಪರ್ಧಿಗಳಿಗೂ ವಾರದ ಸಂಭಾವನೆ ನೀಡುವುದಾಗಿ ಮಾತನಾಡಲಾಗಿದ್ದು ಅದರಂತೆ ಧನುಶ್ರೀಗೆ 20 ಸಾವಿರ ರೂಗಳನ್ನ ಒಂದು ವಾರದ ಸಂಭಾವನೆಯಾಗಿ ನೀಡಲಾಗಿದೆ.