Advertisements

ಅಣ್ಣನ ಪುಣ್ಯಭೂಮಿಗೆ ಬಿಸಿಲು ತಾಗಬಾರದು, ಚಳಿ ಆಗಬಾರದು ಎಂದು ಧ್ರುವ ಸರ್ಜಾ ಮಾಡಿರುವ ಕೆಲಸ ನೋಡಿ..

Cinema

ಸ್ಯಾಂಡಲ್ವುಡ್ ಯುವ ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಒಂದು ವಾರ ಆಗಿಯೇ ಹೋಯ್ತು. ಆದರೆ ಇಷ್ಟು ಬೇಗ ಮರೆಯುವಂತದ್ದಲ್ಲ ಈ ನೋವು. ಚಿರು ಸರ್ಜಾ ತೀರಿಕೊಂಡ ಮೂರೂ ದಿನಗಳ ಬಳಿಕ ಮಾವ ಅರ್ಜುನ್ ಸರ್ಜಾ ಅವರು ಮಿಸ್ ಯೂ ಬಾಯ್, ವಿಧಿ ತುಂಬಾ ಕ್ರೂರನಾಗಿಬಿಟ್ಟ ಎಂದು ತಮ್ಮ ನೋವನ್ನ ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡರು. ಇನ್ನು ಅಣ್ಣ ತಮ್ಮಂದಿರಂದ್ರೆ ಹೀಗೆ ಇರಬೇಕು ಎನ್ನುವಂತಿದ್ದರು ಸೋದರರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ.

Advertisements

ಯಾವಾಗಲು ಅಣ್ಣನ ಜೊತೆಯಲ್ಲೇ ಇರುತ್ತಿದ್ದ ಧ್ರುವ ಸರ್ಜಾ, ಈಗ ಚಿರುವನ್ನ ಕಳೆದುಕೊಂಡು ಭರಿಸಲಾರದ ನೋವಿನಲ್ಲಿದ್ದಾರೆ. ಹಾಗಾಗಿಯೇ ಅಣ್ಣ ಯಾವಾಗಲು ತನ್ನ ಜೊತೆಗೆ ಇರಬೇಕೆಂದು, ನೆಲಗುಳಿ ಬಳಿಯಿರುವ ತನ್ನ ಫಾರ್ಮ್ ಹೌಸ್ ನಲ್ಲೆ ಅಣ್ಣನ ಅಂತಿಮ ಅಂತ್ಯಕ್ರಿಯಗಳನ್ನ ಮಾಡಿದ್ದಾರೆ. ಇನ್ನು ಚಿರಂಜೀವಿ ಸರ್ಜಾ ಅವರಿಗೂ ಕೂಡ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ಏನೇ ಆದರೂ ಅಕಾಲಿಕವಾಗಿ ನಿಧನರಾದ ಅಣ್ಣನ ನೋವು ಧ್ರುವ ಅವರಿಗೆ ಕಡಿಮೆ ಆಗುತ್ತಿಲ್ಲ. ಮೊನ್ನೆ ತಾನೇ ಅಣ್ಣಾ ನಿನ್ನನ್ನ ಬಿಟ್ಟು ನನ್ನಿಂದ ಇರಲು ಸಾಧ್ಯವಾಗುತ್ತಿಲ್ಲ..ನೀನು ನನಗೆ ವಾಪಾಸ್ ಬೇಕು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡು ತಮ್ಮ ನೋವನ್ನ ತೋಡಿಕೊಂಡಿದ್ದರು.

ಇನ್ನು ನೆನ್ನೆಯಷ್ಟೇ ಅಣ್ಣ ಮೈ ವರ್ಲ್ಡ್ ಎಂದು ಭಾವುಕರಾಗಿ ಬರೆದುಕೊಂಡಿದ್ದು, ಚಿರು ನಿಧನರಾಗುವುದಕ್ಕೆ ಒಂದು ದಿನದ ಹಿಂದಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇನ್ನು ಈಗ ತನ್ನ ಅಣ್ಣನ ಪುಣ್ಯ ಭೂಮಿಗೆ ಬಿಸಿಲು ಬೀಳಬಾರದೆಂದು, ಮಳೆ ಬಂದರೆ ಸಮಾದಿ ನೆನೆದು ಅಣ್ಣನಿಗೆ ಚಳಿ ಆಗಬಾರದೆಂದು, ತಾನೇ ಮುಂದೆ ನಿಂತು ಮಂಟಪವೊಂದನ್ನ ಧ್ರುವ ಕಟ್ಟಿಸಿದ್ದಾರೆ. ಇನ್ನು ಅವರ ಕುಟುಂಬದ ಸಂಬಂಧಿಕರೊಬ್ಬರು ಈ ಮಂಟಪ ಕಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನು ಚಿರಂಜೀವಿ ಸರ್ಜಾ ಸಮಾಧಿ ಆಗಿರುವ ಸ್ಥಳದಲ್ಲಿ ದೊಡ್ಡದಾದ ಮಂಟಪ ಕಟ್ಟಲಿದ್ದಾರೆ ಎಂದು ಹೇಳಾಗಿದ್ದು, ಕೆಲವೇ ದಿನಗಳಲ್ಲಿ ಮಂಟಪದ ಕೆಲಸಗಳು ಶುರುವಾಗಲಿವೆ ಎಂದು ಹೇಳಲಾಗಿದೆ.