Advertisements

ಬಾರದ ಲೋಕಕ್ಕೆ ಹೋದ ಅಣ್ಣನನ್ನ ತಬ್ಬಿಕೊಂಡು ಗಳಗಳನೆ ಅತ್ತ ಧ್ರುವ ಸರ್ಜಾ..ಮತ್ತೆಂದೂ ಸಿಗಲಾರದ ಅಣ್ಣನ ಅಪ್ಪುಗೆ

Cinema

ಚಿರ ನಿದ್ರೆಗೆ ಜಾರಿರುವ ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಕ್ರಿಯೆಗಳನ್ನ ಮನೆಯ ಬಳಿಯೇ ಮಾಡಲಾಗುತ್ತಿದೆ. ಇನ್ನು ಪ್ರೀತಿಯ ತಮ್ಮ ಧ್ರುವ ಸರ್ಜಾ ಅಣ್ಣನ ಅಂತಿಮ ವಿಧಿ ವಿಧಾನದ ಪೂಜೆಗಳನ್ನ ನೆರವೇರಿಸಿದ್ದಾರೆ. ಇನ್ನು ಇದೇ ವೇಳೆ ಅಣ್ಣನನ್ನ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.ಏಕೆಂದರೆ ಮತ್ತೆಂದೂ ಧ್ರುವ ಅವರಿಗೆ ತನ್ನ ಅಣ್ಣನ ಅಪ್ಪುಗೆ ಸಿಗೋದಿಲ್ಲ.

Advertisements

ಇನ್ನು ಸಾಕಷ್ಟು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಸಮಯದ ಅಭಾವ ಇರುವ ಕಾರಣದಿಂದ ಸಾರ್ವಜನಿಕರ ದರ್ಶನದ ನಡುವೆಯೇ ಅರ್ಚಕರು ಅಂತಿಮ ಸಂಸ್ಕಾರದ ಪೂಜಾ ವಿಧಿ ವಿಧಾನಗಳನ್ನ ಆರಂಭ ಮಾಡಿದ್ದಾರೆ. ಇನ್ನು ಪೂಜೆ ವೇಳೆ ಸಹೋದರ ಧ್ರುವ ಸರ್ಜಾ ಅಣ್ಣನನ್ನ ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ.

ಇನ್ನು ಅಗಾಧ ದುಃಖದಲ್ಲಿರುವ ಪತ್ನಿ ಮೇಘನಾ ರಾಜ್ ಕೂಡ ಪತಿಯ ಕೆನ್ನೆಯನ್ನ ಸವರಿದ್ದಾರೆ.ಇನ್ನು ಮೇಘ ಅವರಿಗೆ ತನ್ನ ಪತಿಯ ಅಂತಿಮ ಕಟ್ಟ ಕಡೆಯ ದರ್ಶನ ಇದು. ಇನ್ನು ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರದ ಕಾರ್ಯಕ್ರಮದಲ್ಲಿ ಮಾವ ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬದವರು ಚಿತ್ರರಂಗದ ಗಣ್ಯರು ಭಾಗವಹಿಸಿದ್ದು ಚಿರುಗೆ ಅಂತಿಮಾ ವಿಧಾಯ ಹೇಳಿದ್ದಾರೆ.