Advertisements

ಪೋಟೋ ಹಾಕಿ ಅಣ್ಣ ನೀನಿಲ್ಲದೆ ನನಗಿರಲು ಸಾಧ್ಯವಾಗುತ್ತಿಲ್ಲೊ, ವಾಪಾಸ್ ಬಂದು ಬಿಡೋ ಎಂದು ಭಾವುಕರಾದ ಧ್ರುವ ಸರ್ಜಾ

Cinema

ಸ್ಯಾಂಡಲ್ವುಡ್ ಕಂಡ ಸ್ಪುರ ದ್ರೂಪಿ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಇಡೀ ಚಿತ್ರರಂಗವೇ ಶಾಕ್ ಆಗಿತ್ತು. ಚಿತ್ರರಂಗದವರು ಅಭಿಮಾನಿಗಳೇ ಚಿರು ಸರ್ಜಾ ಅವರ ನಿಧಾನಕ್ಕೆ ಮರುಗಿರಬೇಕಾದರೆ, ಇನ್ನು ಅವರ ಕುಟುಂಬದವರ ಪಾಡೇನು ಅಲ್ಲವಾ ಸ್ನೇಹಿತರೆ. ಪತ್ನಿ ಮೇಘನಾ ರಾಜ್ ರವರ ನೋವನ್ನಂತೂ ಹೇಳುವ ಹಾಗೆ ಇಲ್ಲ.

Advertisements

ಇನ್ನು ಮೂರೂ ದಿನಗಳ ಬಳಿಕ ಮಾವ ಅರ್ಜುನ್ ಸರ್ಜಾ ರವರು ತಮ್ಮ ಫೇಸ್ಬುಕ್ ಅಕೌಂಟ್ ನಲ್ಲಿ ಚಿರು ಜೊತೆಗಿನ ಫೋಟೋವೊಂದನ್ನ ಹಂಚಿಕೊಳ್ಳುವ ಮೂಲಕ ತಮ್ಮ ಇಡೀ ನೋವನ್ನ ಒಂದೇ ಸಲ ಹೊರಹಾಕಿದ್ದರು. ಇನ್ನು ತಮ್ಮ ಧ್ರುವ ಸರ್ಜಾ. ಅಣ್ಣ ತಮ್ಮಂದಿರೆಂದರೆ ಹೀಗೆ ಇರಬೇಕು ಎಂಬುದಕ್ಕೆ ಚಿರು ಧ್ರುವ ಸರ್ಜಾ ಅವರೇ ಒಂದು ನಿದರ್ಶನ ಎಂದರೆ ತಪ್ಪಾಗೊದಿಲ್ಲ.

ಇನ್ನು ಯಾವಾಗಲು ಜೊತೆಗೆ ಇರುತ್ತಿದ್ದ ತನ್ನ ಪ್ರೀತಿಯ ಅಣ್ಣನನ್ನ ಕಳೆದುಕೊಂಡ ಧ್ರುವ ಸರ್ಜಾ ಅವರ ಮನಸ್ಸು ಎಷ್ಟು ನೊಂದಿರಬೇಡ. ಹೌದು, ಪ್ರೀತಿಯ ಅಣ್ಣನ ಅಕಾಲಿಕ ಸಾವಿನಿಂದ ನೋಡಿರುವ ಧ್ರುವ ಸರ್ಜಾ ೫ ದಿನಗಳ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕರಾಗಿ ಅಣ್ಣನ ಬಗ್ಗೆ ಬರೆದುಕೊಂಡಿದ್ದಾರೆ. ಇನ್ನು ಚಿರು ಸರ್ಜಾ ಅವರ ಸಾವಿಗೂ ಒಂದು ದಿನದ ಮುಂಚೆ ಪೋಸ್ಟ್ ಮಾಡಿದ್ದ ಫೋಟೋವನ್ನ ನೋಡಿ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

ನೀನು ನನಗೆ ವಾಪಾಸ್ ಬೇಕು (i want you back), ನೀನಿಲ್ಲದೆ ನನಗಿರಲು ಸಾಧ್ಯವಾಗುತ್ತಿಲ್ಲ (not able to be with out you) ಎಂದು ಭಾವುಕರಾಗಿ ಬರೆದುಕೊಂಡಿರುವ ಧ್ರುವ ಸರ್ಜಾ ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಧ್ರುವ ಹಾಕಿರುವ ಸ್ಟೇಟಸ್ ನೋಡಿ ಸಮಾಧಾನದ ಮಾತುಗಳನ್ನ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿದ್ದಾರೆ.