Advertisements

ಅಣ್ಣನ ಜೊತೆಗಿದ್ದ ಕೊನೆಯ ಫೋಟೋವನ್ನ ಶೇರ್ ಮಾಡಿಕೊಂಡು ಬಾವುಕರಾದ ಧ್ರುವ ಸರ್ಜಾ

Cinema

ಜೂನ್ 7 ಕನ್ನಡ ಚಿತ್ರರಂಗಕ್ಕೆ ಕರಾಳ ದಿನ ಎಂದರೆ ತಪ್ಪಾಗೊದಿಲ್ಲ. ಏಕೆಂದರೆ ಆ ದಿನ ಸ್ಯಾಂಡಲ್ವುಡ್ ಅದ್ಭುತ ಸ್ಪುರದ್ರೂಪಿ ಯುವ ನಟನನ್ನ ಕಳೆದುಕೊಂಡ ದಿನವಾಗಿದೆ. ಅವರ ಕುಟುಂಬದವರು ಮಾತ್ರವಲ್ಲದೆ ಇಡೀ ಕರ್ನಾಟಕದ ಜನ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧಾನಕ್ಕೆ ಮರುಗಿದ ದಿನ. ಇನ್ನು ಯಾವಾಗಲು ಅಣ್ಣನ ಜೊತೆಗೆ ಇರುತ್ತಿದ್ದ ನಟ ಧ್ರುವ ಸರ್ಜಾ ಅವರ ನೋವಂತೂ ಹೇಳತೀರದ್ದಾಗಿದೆ.

Advertisements

ಅಣ್ಣನನ್ನ ಕಳೆದುಕೊಂಡ ೫ ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚಿರು ಜೊತೆಗಿರುವ ಬಾಲ್ಯದ ಹಾಗೂ ಇತ್ತೀಚಿಗಿನ ಫೋಟೋವೊಂದನ್ನ ಹಾಕಿ ತಮ್ಮ ನೋವನ್ನ ತೋಡಿಕೊಂಡಿದ್ದರು. ಅಣ್ಣಾ ನೀನಿಲ್ಲದೆ ನನಗಿರಲು ಸಾಧ್ಯವಾಗುತ್ತಿಲ್ಲ..ನೀನು ವಾಪಾಸ್ ಬೇಕು ಎಂದು ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಅಭಿಮಾನಿಗಳು ಕೂಡ ಧ್ರುವ ಸರ್ಜಾ ಅವರ ಸ್ಟೇಟಸ್ ಗೆ ಸಮಾಧಾನ ಮಾಡುವ ಕಾಮೆಂಟ್ ಮಾಡಿದ್ದರು.

ಈಗ ಅಣ್ಣನ ನೆನಪಿನಲ್ಲಿ ಚಿರು ಸರ್ಜಾ ಅವರ ಜೊತೆಗಿರುವ ಮತ್ತೊಂದು ಫೋಟೋವನ್ನ ಶೇರ್ ಮಾಡಿಕೊಂಡಿರುವ ಧ್ರುವ ಸರ್ಜಾ ನಮ್ ಅಣ್ಣಾ ಎಂದು ಬರೆದುಕೊಂಡಿದ್ದು, ಅಣ್ಣನನ್ನ ಮೈ ವರ್ಲ್ಡ್ ಎಂದಿದ್ದಾರೆ. ಇನ್ನು ಅಣ್ಣನ ನೆನಪನ್ನ ಮರೆಯಲಾರದ ಸ್ಥಿತಿಯಲ್ಲಿರುವ ಧ್ರುವ ಚಿರಂಜೀವಿ ಸರ್ಜಾ

ಅವರ ಸಾವಿಗೆ ಒಂದು ದಿನದ ಮುಂಚೆ ಜೂನ್ 6 ರಂದು ಕ್ಲಿಕ್ಕಿಸಿದ್ದ ತನ್ನ ಪ್ರೀತಿಯ ಅಣ್ಣನ ಜೊತೆಗಿನ ಕೊನೆಯ ಫೋಟೋವೊಂದನ್ನ ಈಗ ಪೋಸ್ಟ್ ಮಾಡಿದ್ದಾರೆ. ಇನ್ನು ಆ ಫೋಟೋದಲ್ಲಿ ಧ್ರುವ, ಚಿರು ಸರ್ಜಾ ಹಾಗೂ ಮಾವ ಕಿಶೋರ್ ಸರ್ಜಾ ಅವರ ಮಗ ಸೂರಜ್ ಸರ್ಜಾ ಕೂಡ ಇದ್ದಾರೆ.