Advertisements

ಕೊನೆ ಗಳಿಗೆಯಲ್ಲಿ ಅಣ್ಣನ ಅಂತಿಮ ಸಂಸ್ಕಾರದ ಜಾಗವನ್ನ ಬದಲಿಸಿದ್ದೇಕೆ ಧ್ರುವಸರ್ಜಾ ?

Cinema Uncategorized

ರಾಮ ಲಕ್ಷಣರಂತಯೇ ಇದ್ದವರು ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ. ಅಣ್ಣ ತಮ್ಮಂದಿರೆಂದರೆ ಹೀಗೆ ಇರಬೇಕು ಎನ್ನುವುದಕ್ಕೆ ಇವರು ನಿದರ್ಶನವಾಗಿದ್ದರು. ಆದರೆ ದೇವರಿಗೆ ಈ ಸಹೋದರರ ಅನುಬಂಧ ಇಷ್ಟವಾಗಿಲ್ಲ ಅನ್ನಿಸುತ್ತೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಹಲವಾರು ವಿಡಿಯೊಗಳನ್ನ ನೋಡಿದ್ರೆ ನಿಮಗೆ ಅನ್ನಿಸುತ್ತೆ..ಚಿರು ಅಣ್ಣನಾದರೂ ಧ್ರುವ ಅವರನ್ನ ಮಗುವಿನಂತಯೇ ಕೇರ್ ಮಾಡುತ್ತಿದ್ದರು.

Advertisements

ತಮ್ಮನಾದ ಧ್ರುವ ಸರ್ಜಾ ತನ್ನ ಅಣ್ಣ ಚಿರುವಿಗೆ ಕೈ ತುತ್ತು ತಿನಿಸುತ್ತಿರುವ ವಿಡಿಯೋ ನೋಡಿದ್ರೆ ಸಾಕು ಈ ಅಣ್ಣ ತಮ್ಮಂದಿರ ಸಂಬಂಧ ಹೇಗಿತ್ತು ಎಂಬುದಕ್ಕೆ. ಇಂತಹ ಅಣ್ಣ ಒಮ್ಮಿಂದೊಮ್ಮೆಲೆ ಮತ್ತೆಂದೂ ಬಾರದ ಲೋಕಕ್ಕೆ ಹೋಗಿಬಿಟ್ಟರೆ, ಬಹಳವಾಗಿ ಪ್ರೀತಿಸುವ ತಮ್ಮ ಧ್ರುವ ಸರ್ಜಾ ಅವರ ಮನಸ್ಸು ಹೇಗಾಗಬೇಡ ನೀವೇ ಹೇಳಿ. ಇನ್ನು ಮುಂದೆ ಅಣ್ಣ ನನ್ನ ಜೊತೆಯಲ್ಲಿ ಶಾಶ್ವತವಾಗಿ ಇರೋದು ಇಲ್ಲ ಎಂದು ಗೊತ್ತಾದಾಗ ತಮ್ಮನ ಹೃದಯ ಹೇಗಾಗಿರಬೇಡ. ಆದರೆ ಧ್ರುವ ಸರ್ಜಾ ಅಣ್ಣ ಚಿರು ಅವರನ್ನ ತಮ್ಮ ಜೊತೆಯಲ್ಲಿಯೇ ಇರಿಸಿಕೊಳ್ಳಬೇಕೆಂಬ ನಿರ್ಧಾರ ಮಾಡಿದ್ದಾರೆ.

ಹೌದು ಸ್ನೇಹಿತರೆ, ನಟ ಧ್ರುವ ಸರ್ಜಾ ಕನಕಪುರ ರಸ್ತೆ ಬಳಿ ಇರುವ ನೆಲಗುಳಿ ಗ್ರಾಮದಲ್ಲಿ ಒಂದು ಫಾರ್ಮ್ ಹೌಸ್ ನ್ನ ಕೊಂಡಿದ್ದಾರೆ. ಆ ಫಾರ್ಮ್ ಹೌಸ್ ಎಂದರೆ ಧ್ರುವ ಅವರಿಗೆ ತುಂಬಾ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಅಣ್ಣ ತಮ್ಮಂದಿರಿಬ್ಬರು ಜೊತೆಯಾಗಿಯೇ ಆ ಫಾರ್ಮ್ ಹೌಸ್ ಗೆ ಹೋಗಿಬರುತ್ತಿದ್ದರು. ಆಗಾಗಿ ಇದೇ ಜಾಗದಲ್ಲಿಯೇ ತನ್ನ ಅಣ್ಣನ ಅಂತಿಮ ಕ್ರಿಯೆ ಆಗಬೇಕೆಂದು ಧ್ರುವ ಮತ್ತು ಕುಟುಂಬದವರು ನಿರ್ಧಾರ ಮಾಡಿದ್ದಾರೆ.

ಇನ್ನು ಮೊದಲಿಗೆ ತನ್ನ ತಾತ ನಟ ಶಕ್ತಿ ಪ್ರಸಾದ್ ಅವರನ್ನ ಸಮಾಧಿ ಮಾಡಲಾಗಿರುವ ತುಮಕೂರು ಜಿಲ್ಲೆಯ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಚಿರಂಜೀವಿ ಸರ್ಜಾ ಅವರ ಅಂತಿಮ ಅಂತ್ಯ ಕ್ರಿಯೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಧ್ರುವ ಸರ್ಜಾ ಅವರು ತನ್ನ ಅಣ್ಣ ನನ್ನ ಬಳಿಯೇ ಇರಬೇಕೆಬಂದು ಬಯಸಿರುವ ಕಾರಣ ಅವರ ಫಾರ್ಮ್ ಹೌಸ್ ನಲ್ಲೆ ಚಿರು ಅಂತಿಮ ಸಂಸ್ಕಾರ ಮಾಡಲಾಗುತ್ತಿದೆ.