ನಮಸ್ತೇ ಸ್ನೇಹಿತರೇ, ಚಿರಂಜೀವಿ ಸರ್ಜಾ ಇಲ್ಲದೇ ನೋವು ತುಂಬಿದ್ದ ಸರ್ಜಾ ಕುಟುಂಬದಲ್ಲಿ ಮುದ್ದಾದ ಮಗುವಿನ ಆಗಮನದಿಂದಾಗಿ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ರವರ ಜೀವನದಲ್ಲಿ ಹೊಸ ಬೆಳಕಿನ ಆಶಾಕಿರಣ ಮೂಡಿದೆ. ಇನ್ನುಇತ್ತೀಚೆಗಷ್ಟೇ ಮೇಘನಾರಾಜ್, ಚಿರು ಅರ್ಜಾ ಅವರ ಮುದ್ದಾದ ಗಂಡು ಮಗುವಿಗೆ ತೊಟ್ಟಿಲು ಶಾಸ್ತ್ರ ಸಂಭ್ರಮದಿಂದ ನಡೆದಿದೆ. ಇದೆಲ್ಲವೂ ಸರ್ಜಾ ಹಾಗೂ ಸುಂದರ್ ರಾಜ್ ಅವರ ಕುಟುಂಬದಲ್ಲಿ ಸಂಭ್ರಮ ತಂದಿದೆ ಎಂದರೆ ತಪ್ಪಾಗಲಾರದು. ಇದೆಲ್ಲದರ ನಡುವೆ ಸಿನಿಮಾದ ಬಾಕಿ ಕೆಲಸಗಳನ್ನ ಮುಗಿಸಿರುವ ನಟ ಧ್ರುವ ಸರ್ಜಾ ಅವರು ತನ್ನ ಪ್ರೀತಿಯ ಅಣ್ಣ ಚಿರು ಸರ್ಜಾ ಅವರಿಗಾಗಿ ಕಾರ್ಯವೊಂದನ್ನ ಮಾಡಲು ಮುಂದಾಗಿದ್ದಾರೆ.
ಹೌದು, ಧ್ರುವ ಸರ್ಜಾ ಅವರು ಮೊದಲೇ ನಿರ್ಧಾರ ಮಾಡಿದ ಹಾಗೆ ತನ್ನ ಅಣ್ಣ ಚಿರು ಸರ್ಜಾ ಅವರ ಸಮಾಧಿಯನ್ನ ಕನಕಪುರ ರಸ್ತೆಯಲ್ಲಿರುವ ತನ್ನ ಬೃಂದಾವನ ಫಾರ್ಮ್ ಹೌಸ್ ನಲ್ಲಿಯೇ ಮಾಡಬೇಕೆಂದು ಈ ಮೊದಲೇ ನಿರ್ಧಾರ ಮಾಡಿದ್ದರು. ಅದರಂತೆ ಚಿರು ಅವರ ಅಂತಿಮ ಸಂಸ್ಕಾರದ ಕಾರ್ಯಗಳನ್ನ ಇದೆ ಫಾರ್ಮ್ ಹೌಸ್ ನಲ್ಲಿಯೇ ಮಾಡಲಾಗಿತ್ತು. ಈಗ ಬಿಡುವ ಮಾಡಿಕೊಂಡಿರುವ ನಟ ಧ್ರುವ ಸರ್ಜಾ ತಮ್ಮ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಅಣ್ಣನ ಸಮಾಧಿಗೆ ಶಂಖು ಸ್ಥಾಪನೆಯನ್ನ ಪೂಜೆಯನ್ನ ನೆರವೇರಿಸಿದ್ದಾರೆ.

ಈಗ ಐದು ತಿಂಗಳ ಬಳಿಕ ಧ್ರುವ ಸರ್ಜಾ ಅವರು ತನ್ನ ಪತ್ನಿ ಪ್ರೇರಣಾ ಅವರ ಜೊತೆಯಾಗಿ ಕನಕ ಪುರ ರಸ್ತೆಯಲ್ಲಿರುವ ನೆಲಗೋಳಿಯ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರು ಸರ್ಜಾ ಅವರ ಸಮಾಧಿ ನಿರ್ಮಾಣಕ್ಕಾಗಿ ಪೂಜೆ ನೆರವೇರಿಸಿ ಶಂಖು ಸ್ಥಾಪನೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿರು ಸರ್ಜಾ ಅವರ ಸಮಾಧಿಯ ಮಂಟಪದ ಕೆಲಸಗಳು ನೆರವೇರಲಿವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಮೇಘನಾ ರಾಜ್ ರವರಿಗೆ ಮುದ್ದಾದ ಗಂಡು ಮಗುವಾದ ಮೇಲೆ ಸರ್ಜಾ ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡಿರುವುದು ಖುಷಿಯ ವಿಚಾರವಾಗಿದೆ.