Advertisements

ಧಿರೇಂದ್ರ ಗೋಪಾಲ್ ಅವರ ಜೀವನದ ಕೊನೆಯ ನೋವಿನ ದುರಂತ ಕಥೆ, ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ..

Cinema

ನಮಸ್ತೆ ಸ್ನೇಹಿತರೆ, ನಟ ದೀರೇಂದ್ರ ಗೋಪಾಲ್. ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ರೀತಿಯ ಸಂಭಾಷಣಾ ಶೈಲಿ ಹಾಗೂ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.. ಹಾಸ್ಯ ನಟರಾಗಿ, ಪೋಷಕ ನಟರಾಗಿ, ಖಳನಟನಾಗಿ ಕನ್ನಡ ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ತುಂಬಾ ಬೇಡಿಕೆ ನಟರಾಗಿದ್ದರು. ದೀರೇಂದ್ರ ಗೋಪಾಲ್ ಅವರು 1940 ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದ ಜೋಡಿ ಗುಬ್ಬಿ ಗ್ರಾಮದಲ್ಲಿ ಜನಿಸಿದರು.. ದೀರೇಂದ್ರ ಗೋಪಾಲ್ ಅವರಿಗೆ ತಮ್ಮ ಶಾಲಾ ದಿನಗಳಿಂದಲೇ ಅಭಿನಯದ ಮೇಲೆ ಹೆಚ್ಚು ಹೊಲವಿತ್ತು.

Advertisements

ಒಮ್ಮೆ ದೀರೇಂದ್ರ ಗೋಪಾಲ್ ಅವರು ಓದುತ್ತಿದ್ದ ಶಾಲೆಯಲ್ಲಿ ನಾಟಕ ಆಯೋಜಿಸಲಾಗಿತ್ತು.. ಶಾಲೆಗೆ ಮಕ್ಕಳ ಅಭಿನಯದ ಚತುರತೆಯನ್ನು ನೋಡಲು ಆ ಶಾಲೆ ಗುಬ್ಬೀ ವೀರಣ್ಣನಬರನ್ನು ಆಹ್ವಾನಿಸಿತ್ತು. ದೀರೇಂದ್ರ ಗೋಪಾಲ್ ಅವರ ಏಕ ಪಾತ್ರ ಅಭಿನಯವನ್ನು ತುಂಬಾ ಮೆಚ್ಚಿಕೊಂಡ ಗುಬ್ಬಿ ವೀರಣ್ಣನವರು ದಿರೇಂದ್ರ ಗೋಪಾಲ್ ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು ಹೇಳಿದರು.. ಈ ಮೂಲಕ ರಂಗಭೂಮಿಗೆ ಪ್ರವೇಶ ಮಾಡಿದ ದಿರೇಂದ್ರ ಗೋಪಾಲ ಅವರು ಹಲವಾರು ನಾಟಕಗಳಲ್ಲಿ ನಟಿಸಿ ರಂಗಭೂಮಿಯ ಹೆಸರಾಂತ ಕಲಾವಿದರಾದರು‌‌.

ನಂತರ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದ ದೀರೇಂದ್ರ ಗೋಪಾಲ್ ಅವರು ಪಡುವರ ಹಳ್ಳಿ ಪಾಂಡವರು ಸಿನಿಮಾದಲ್ಲಿ ಅದ್ಬುತವಾದ ಅಭಿನಯ ನೀಡಿ ಹೆಚ್ಚು ಜನಪ್ರಿಯತೆ ಪಡೆದರು.. ನಂತರ ಧೀರೇಂದ್ರ ಗೋಪಾಲ್ ಅವರು ಎಂದೂ ಹಿಂತಿರುಗಿ ನೋಡಲೇ ಇಲ್ಲಾ. ಧಿರೇಂದ್ರ ಗೋಪಾಲ್ ಅವರು ಸುಮಾರು 180 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.. ನಷ್ಟಕ್ಕೆ ಹೊಳಗಾದ ಕೆಲವು ರಂಗ ಭೂಮಿ ಮಾಲೀಕರಿಗೆ ಹಾಗು ಬಡ ಕಲಾವಿದರಿಗೆ ಧಿರೇಂದ್ರ ಗೋಪಾಲ್ ಅವರು ಆರ್ಥಿಕ ಸಹಾಯವನ್ನು ಮಾಡಿದ್ದರು.

ಇನ್ನೂ ಕನ್ನಡ ಚಿತ್ರರಂಗದಲ್ಲಿ ಖಳನಟರಿಗೆ ಶಾಪವೇನು ಎಂಬಂತೆ ತುಂಬಾ ಸಹೃದಯಿ ಹಾಗು ಧಾನ ದರ್ಮಗಳಿಗೆ ಹೆಸರಾಗಿದ್ದ ಧೀರೇಂದ್ರ ಗೋಪಾಲ್ ಅವರು ತಮ್ಮ ಕೊನೆಯ ದಿನಗಳಲ್ಲಿ ಸಾಲದ ಶೂಲಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿ.. ಆದರೆ ಕೊನೆಗಾಲದಲ್ಲಿ ಆ ದೇವರು ಒಳ್ಳೆಯದನ್ನು ಮಾಡಲಿಲ್ಲ.. ಕೆಲವು ಕಾಲ ತುಂಬಾ ಅ’ನಾರೋಗ್ಯದಿಂದ ಬಳಲಿದ್ದ ಧೀರೇಂದ್ರ ಗೋಪಾಲ್ ಅವರು ಡಿಸೆಂಬರ್ 25, 2000 ಇಸವಿಯಲ್ಲಿ ತಮ್ಮ 60ನೇ ವಯಸ್ಸಿಗೆ ಚಿರನಿದ್ರೆಗೆ ಜಾರಿದರು‌. ಆದರೆ ಇವರ ಕಲಾ ಸೇವೆ ಹಾಗು ಇವರು ಮಾಡಿದ ಧಾನ ದರ್ಮಗಳು ಮಾತ್ರ ಎಂದಿಗೂ ಶಾಶ್ವತವಾಗಿರುತ್ತವೆ.