Advertisements

ಕಣ್ಣು ಕಾಣಿಸದೇ ಇದ್ದರು ಸ್ಟಾರ್ ನಟರಾಗಿ ಬೆಳೆದಿರುವ ನಟರು ಯಾರ್ಯಾರು ಗೊತ್ತಾ?

Cinema

ಅಂಗವೈಕಲ್ಯತೆ ಅನ್ನುವುದು ಶಾಪವಲ್ಲಾ.. ಸಾಧಿಸಲೇ ಬೇಕೆಂಬ ಛಲ ಇದ್ದವರಿಗೆ ಅಂಗವಿಕಲತೆ ಅಡ್ಡಿಯಾಗುವುದಿಲ್ಲಾ ಎನ್ನುವುದಕ್ಕೆ ಈ ಕಲಾಚಿದರೆ ಸಾಕ್ಷಿ.. ಅವರಿಗಿರುವ ದೇಹದ ನ್ಯೂನ್ಯತೆಗಳನ್ನು ನೋಡಿದ್ರೆ ಇದೆಲ್ಲಾ ಸತ್ಯಾನಾ ಅನ್ನುವ ಪ್ರಶ್ನೆ ನಿಮಗೆ ಕಾಡದೇ ಇರೋದಿಲ್ಲಾ. ಈಗೆ ತಮ್ಮ ದೇಹದ ನ್ಯೂನ್ಯತೆಗಳ ಬಗ್ಗೆ ತಲೆ ಕೆಡಸಿಕೊಳ್ಳದೇ ಇಂದು ದೊಡ್ಡ ಸ್ಟಾರ್ಟ್ ನಟ ನಟಿಯರಾಗಿ ಬೆಳೆದಿರುವ ಹಲವು ಸಾಧಕರು ನಮ್ಮ ನಡುವೆ ಇದ್ದಾರೆ.. ಸೌತ್ ಇಂಡಿಯಾದ ಫೇಮಸ್ ನಟ ರಾಣಾ ದಗ್ಗುಬಾಟಿ ಅವರು ಬಾಹುಬಲಿ ಸಿನಿಮಾದ ಬಲ್ಲಾಳ ದೇವನ ಪಾತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದು ಈ ನಟನಿಗೂ ಸಹ ಅಂಗವಿಕಲತೆ ಸಮಸ್ಯೆ ಇದೆ ಅಂದರೆ ನೀವು ನಂಬೋದಿಲ್ಲಾ.. ಸತ್ಯ ಏನೆಂದರೆ ರಾಣಾ ಅವರಿಗೆ ಸಂಪೂರ್ಣವಾಗಿ ಬಲ ಭಾಗದ ಕಣ್ಣು ಕಾಣಿಸುವುದಿಲ್ಲಾ.

Advertisements

ಇನ್ನೂ ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಸ್ವತಃ ರಾಣಾ ದಗ್ಗುಬಾಟಿ ಅವರೇ ಹೇಳಿಕೊಂಡಿದ್ದಾರೆ.. ಸೌತ್ ನ ನಟಿ ಅಭಿನಯ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ್ದ ಹುಡುಗರು ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟಿದ್ದು ಪುನೀತ್ ರಾಜ್ ಕುಮಾರ್ ಅವರ ತಂಗಿ ಪಾತ್ರದಲ್ಲಿ ಮಿಂಚಿದ್ದರು. ಅಭಿನಯ ಅವರಿಗೂ ಸಹ ಮಾತು ಬರುವುದಿಲ್ಲಾ, ಕಿವಿ ಕೆಳಿಸೋದಿಲ್ಲಾ.. ಆದರೆ ತಮ್ಮ ನಟನೆ ಮೂಲಕ ಅಭಿನಯ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಸ್ಯಾಂಡಲ್ ವುಡ್ ನ ನಟ ಆದಿ ಲೋಕೇಶ್ ಅವರು ಮೊದಲು ವಿಲನ್ ರೋಲ್ ಮೂಲಕ ಸ್ಯಾಂಡಲ್ ವುಡ್ ಎಂಟ್ರಿಕೊಟ್ಟು ತದ ನಂತರ ಹಲವಾರು ಸಿನಿಮಾದಲ್ಲಿ ರೀಲ್ ರೋಲ್ ಗಳಲ್ಲಿ ನಟಿಸಿದ್ದು ಇವರು ಕೂಡ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ.‌ ಇವರಿಗೆ ಬಾಲ್ಯದಿಂದಲೂ ಬಲ ಗಣ್ಣು ಪೂರ್ತಿಯಾಗಿ ಕಾಣಿಸುತ್ತಿಲ್ಲಾ ಇದನ್ನು ಸ್ವತಃ ಆದಿ ಲೋಕೇಶ್ ಅವರೇ ಬಿಗ್ ಬಾಸ್ ಗೆ ಹೋದಾಗ ಹೇಳಿಕೊಂಡಿದ್ದಾರೆ.

ಟಾಲಿವುಡ್ ಆ್ಯಕ್ಟರ್ ನಿತಿನ್ ಅವರು ನಟಿಸಿದ ಮೊದಲ ಸಿನಿಮಾ ಜಯಂ ನಿಂದಲೇ ಹೆಚ್ಚು ಪೇಮಸ್ ಆಗಿದ್ದು ನಿತಿನ್ ಅವರಿಗೂ ಕೂಡ ಅಂಗವೈಕಲ್ಯ ಸಮಸ್ಯೆ ಇದೆ. ಹೌದು ನಿತಿನ್ ಅವರಿಗೆ ತೊದಲುವ ಸಮಸ್ಯೆ ಇದ್ದು ನಟ ನಿತಿನ್ ಪ್ರಾರಂಭದಲ್ಲಿ ತಮ್ಮ ಸಿನಿಮಾಗಳಿಗೆ ಬೇರೆಯವರ ಹತ್ತಿರ ಡಬ್ ಮಾಡಿಸುತ್ತಿದ್ದರು. ಈಗ ಅಂಗವೈಕಲ್ಯತೆಯನ್ನ ಮೆಟ್ಟಿ ನಿಂತು ಸಿನಿಮಾಗಳಿಗೆ ಅವರೇ ಡಬ್ ಮಾಡುತ್ತಿದ್ದು ಟಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ.. ಸೌತ್ ಮತ್ತು ಟಾಲಿವುಡ್ ನಲ್ಲಿ ಹಾಸ್ಯನಟನಾಗಿ ಮಿಂಚಿರುವ ಆಲಿ ಅವರಿಗೂ ಕೂಡ ಪ್ರಾರಂಭದಲ್ಲಿ ತೊದಲುವ ಸಮಸ್ಯೆ ಇತ್ತು ಇದರಿಂದ ಅವರು ಶುರುವಿನಲ್ಲಿ ಅವಮಾನ ನೋವನ್ನು ಅನುಭವಿಸಬೇಕಾಯಿತು. ಇನ್ನೂ ಈ ಸಮಸ್ಯೆ ಇದ್ದರು ಯಾರಿಗೂ ಗೊತ್ತಾಗದಂತೆ ಬ್ಯಾಲೆನ್ಸ್ ಮಾಡುತ್ತಿದ್ದರು..