Advertisements

ಬಿಗ್ ಬಾಸ್ ನಿಂದ ಬಂದಿರುವ ದುಡ್ಡನ್ನು ದಿವ್ಯಾ ಅರವಿಂದ್ ಯಾವ ಕೆಲಸಕ್ಕೆ ಬಳಸ್ತಿದಾರೆ ಗೊತ್ತಾ? ನಿಜಕ್ಕೂ ಗ್ರೇಟ್..

Cinema Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ ಲೌವ್ ಬರ್ಡ್ಸ್ ಎಂದೇ ಖ್ಯಾತರಾಗಿರುವ ದಿವ್ಯಾ ಉರುಡುಗ ಮತ್ತು ಅರವಿಂದ್ ಅವರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿ ಇದ್ದಾರೆ.. ಈ ಜೋಡಿಗಳು ಬಿಗ್ ಬಾಸ್ ಮುಗಿದ ಮೇಲೆ ಪೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಆ ವೇಳೆಯಲ್ಲಿ ಇಬ್ಬರು ಕೂಡ ಪ್ರೀತಿಸಿರೋದಾಗಿ ಸೂಚನೆ ಕೂಡ ನೀಡಿದ್ದರು.. ಇದೀಗ ದಿವ್ಯಾ ಮತ್ತು ಅರವಿಂದ್ ಅವರು ಬಿಗ್ ಬಾಸ್ ಶೋನಿಂದ ಬಂದಿರುವ ಹಣವನ್ನ ಏನು ಮಾಡಿದ್ದಾರೆ ಗೊತ್ತಾ? ಅರವಿಂದ್ ಅವರು ಬಿಗ್ ಬಾಸ್ ಟ್ರೋಪಿ ಮತ್ತು 50 ಲಕ್ಷ ಕ್ಯಾಶ್ ಹಣವನ್ನ ತಮ್ಮದಾಗಿಸಿಕೊಳ್ಳಲು ಬಹಳ ಆಸೆಯನ್ನು ಇಟ್ಟುಕೊಂಡಿದ್ದರು.

Advertisements

ಆದರೆ ಈ ಶೋ ಅರ್ಧಕ್ಕೆ ನಿಂತು ಹೋದ ಕಾರಣ ಎಲ್ಲರಿಗೂ ಕೂಡ ವಾರದ ಲೆಕ್ಕದಲ್ಲಿ ಸಂಭಾವನೆ ನೀಡಲಾಗಿದೆ.. ಬಿಗ್ ಬಾಸ್ ಸೀಸನ್ 8 ರದ್ದಾದ ನಂತರ ಎಲ್ಲಾ ಸ್ಪರ್ಧಿಗಳು ಮನೆಗೆ ಹಿಂದಿರುಗುವ ಮುನ್ನ ತಾವು ಕೂಡ ವಾರ್ಸಿಯಸ್ ಆಗಿ ಕೆಲಸ ಮಾಡ್ತೀವಿ ಎಂದಿದ್ದರು. ಇದೀಗ ಎಲ್ಲರಿಗಿಂತ ಮೊದಲು ಶುಭ ಪೂಂಜಾ ಅವರು ಹೇಳಿದಂತೆ ನಡೆದುಕೊಂಡಿದ್ದಾರೆ.. ತಮ್ಮ ಮನೆ ಬಳಿ ಇರುವ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ದಿನಸಿ ಕಿಟ್ ನೀಡಿದ್ದಾರೆ.

ಸಧ್ಯಕ್ಕೆ ಪುಟ್ಟದಾಗಿ ಕೆಲಸ ಆರಂಭಿಸಿದ್ದೇನೆ ಮುಂದೆ ಇನ್ನೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತೇನೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.. ಇನ್ನೂ ಶಮಂತ್ ಕೂಡ ತಮ್ಮ ಮನೆ ಬಳಿ ಊಟ ಮತ್ತು ತಿಂಡಿಯನ್ನ ಹಂಚಿದ್ದಾರೆ. ಇದೀಗ ದಿವ್ಯಾ ಮತ್ತು ಅರವಿಂದ್ ಅವರು ಕೂಡ ಇದೇ ದಾರಿಯಲ್ಲಿ ಹೋಗ್ತಿದ್ದು ಬಿಗ್ ಬಾಸ್ ಶೋನಿಂದ ಬಂದಿರುವ ಹಣದಿಂದ ಕೆಲವು ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಹೇಳ್ತಿದ್ದಾರೆ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈ’ರಲ್ ಆಗ್ತಿದ್ದು ಬಿಗ್ ಬಾಸ್ ಸ್ಪರ್ಧಿಗಳ ಒಳ್ಳೆಯ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ..

>