Advertisements

ಸೋತರು ಕೂಡ ಅರವಿಂದ್ ಮತ್ತು ದಿವ್ಯಾ ಅವರಿಗೆ ಬಿಗ್ ಬಾಸ್ ಕೊಟ್ಟಿದ್ದು ಎಷ್ಟು ದೊಡ್ಡ ಸಂಭಾವನೆ ಗೊತ್ತಾ?

Entertainment

ನಮಸ್ತೇ ಸ್ನೇಹಿತರು, ಬಿಗ್ ಬಾಸ್ ಕನ್ನಡ ಸೀಸನ್ 8 ಮುಕ್ತಾಯವಾಗಿದೆ.. ಎಲ್ಲರೂ ಅಂದುಕೊಂಡ ಆಗೆ ಮಂಜು ಪಾವಗಡ ಅವರೇ ಈ ಬಾರಿಯ ವಿನ್ನರ್ ಆಗಿ ಆಯ್ಕೆ ಆಗಿದ್ದಾರೆ. ಅರವಿಂದ್ ಕೆಪಿ ಅವರು ಕೆಲವೇ ಕೆಲವು ವೋಟ್ ಗಳಿಂದ ವಿನ್ನರ್ ಆಗುವ ಸ್ಥಾನವನ್ನು ಕಳೆದುಕೊಂಡು ಎರಡನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ.. ಇನ್ನೂ ದಿವ್ಯಾ ಉರುಡುಗ ಅವರು ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾದರೆ ಫಿನಾಲೆಯಲ್ಲಿ ಬಂದು ಸೋತಿರುವ ಅರವಿಂದ್ ಮತ್ತು ದಿವ್ಯಾ ಉರುಡುಗ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಅಂಥ ಗೊತ್ತಾ..

[widget id=”custom_html-3″]

Advertisements

ಬಿಗ್ ಬಾಸ್ ಫಿನಾಲೆಗೆ ಆಯ್ಕೆಯಾದ ಟಾಪ್ 5 ಸ್ಪರ್ಧಿಗಳಲ್ಲಿ ದಿವ್ಯಾ ಉರುಡುಗ ಅವರು ಮೊದಲ ದಿನವೇ ಎಲಿಮಿನೇಟ್ ಆಗ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.. ಆದರೆ ದಿವ್ಯ ಅವರು ಎಲ್ಲರ ನಿರೀಕ್ಷೆಯನ್ನ ಸುಳ್ಳು ಮಾಡಿ ಟಾಪ್ ಮೂರು ಸ್ಪರ್ಧಿಗಳಲ್ಲಿ ಸ್ಥಾನವನ್ನು ಪಡೆದುಕೊಂಡರು. ಇನ್ನೂ ಅರವಿಂದ್ ಕೆಪಿ ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಸಿಕ್ಕಾಪಟ್ಟೆ ಪ್ಯಾನ್ ಫಾಲೋಯಿಂಗ್ ಅನ್ನು ಪಡೆದುಕೊಂಡರು.. ಹಾಗು ದಿವ್ಯಾ ಉರುಡುಗ ಅವರ ಅಭಿಮಾನಿಗಳ ಬೆಂಬಲವನ್ನು ಕೂಡ ಪಡೆದುಕೊಂಡಿದ್ದರು.

[widget id=”custom_html-3″]

ಇಷ್ಟೆಲ್ಲಾ ಇದ್ದರು ಮಂಜು ಪಾವಗಡ ಎದುರು ಕೆಲವೇ ಕೆಲವು ವೋಟ್ ಗಳ ಅಂತರದಲ್ಲಿ ಸೋತಿದ್ದಾರೆ.. ರನ್ನರ್ ಅಪ್ ಆಗಿರುವ ಅರವಿಂದ್ ಕೆಪಿ ಅವರು 11 ಲಕ್ಷ ರೂಪಾಯಿ ಕ್ಯಾಶ್ ಹಾಗು ಬಿಗ್ ಬಾಸ್ ಮನೆಯಲ್ಲಿ ಸಿಕ್ಕಿರುವ 2 ಲಕ್ಷದ ಜೊತೆಗೆ ಕಿಚ್ಚ ಸುದೀಪ್ ಅವರ ಜಾಕೇಟ್ ಅನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.. ಇನ್ನೂ ಸೆಕೆಂಡ್ ರನ್ನರ್ ಅಪ್ ಆಗಿರುವ ದಿವ್ಯ ಉರುಡುಗ ಅವರು 6 ಲಕ್ಷದ ಹಣವನ್ನ ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್ ನಿಜವಾದ ವಿನ್ನರ್ ಯಾರು ಆಗಬೇಕಿತ್ತು..