Advertisements

ಮಂಜು ನಾನು ಕೃಷ್ಣ ರಾಧಾ ಇದ್ದಂತೆ ಎಂದು ಹೇಳಿಕೊಂಡ ದಿವ್ಯಾ ಸುರೇಶ್.. ಮಂಜು ಜೊತೆ ಮದುವೆ ಆಗೊದರ ಬಗ್ಗೆ ದಿವ್ಯಾ ಸುರೇಶ್ ಹೇಳಿದ್ದೇನು ಗೊತ್ತಾ?

Entertainment

ಬಿಗ್ ಬಾಸ್ ಸೀಸನ್ ಮುಕ್ತಾಯಗೊಂಡು ಗ್ರಾಂಡ್ ಫಿನಾಲೆ ಮೂಲಕ ಅದ್ದೂರಿಯಾಗಿ ಕಾರ್ಯ ಕ್ರಮಕ್ಕೆ ತೆರೆ ಬಿದ್ದಿದೆ.. ಇತ್ತ ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಪಡೆದು 53 ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡರು.. ಇನ್ನೊಂದೆಡೆ ಬಿಗ್ ಬಾಸ್ ಗೆಲ್ತಾರೆ ಎಂದುಕೊಂಡಿದ್ದ ಅರವಿಂದ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.. ಮಳೆ ನಿಂತರು ಮಳೆಯ ಹನಿ ನಿಲ್ಲದು ಎನ್ನುವಂತೆ ಬಿಗ್ಬಾಸ್ ಮುಕ್ತಾಯ ಗೊಂಡರು ಇದೀಗ ಬಿಗ್ಬಾಸ್ ಮಂದಿಯ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಒಂದು ಕಡೆ ಪ್ರಶಾಂತ್ ಸಂಬರಗಿ ಹಾಗು ಚಕ್ರವರ್ತಿ ಚಂದ್ರಚೂಡ್ ನಡುವೆ ಕೆಲವೊಂದು ಮಾತಿಗೆ ಮಾತು ನಡೆಯುತ್ತಿದ್ದು ಸುದೀಪ್ ಅವರು ಅನುಮತಿ ಕೊಟ್ಟರೆ ನಾನು ಕೋರ್ಟ್ ಗು ಸಹ ಹೋಗುವೆ ಎನ್ನುತ್ತಿದ್ದಾರೆ ಚಕ್ರವರ್ತಿ ಚಂದ್ರಚೂಡ್..

[widget id=”custom_html-3″]

Advertisements

ಇನ್ನೊಂದು ಕಡೆ ಅರವಿಂದ್ ಗೆಲ್ಲದ ಕಾರಣ ದಿವ್ಯಾ ಉರುಡುಗ ಇನ್ನೂ ಸಹ ಸಪ್ಪೆ ಮುಖದಲ್ಲಿಯೇ ಸಂದರ್ಶನ ನೀಡುತ್ತಿದ್ದಾರೆ.. ಆದರೆ ಇದೆಲ್ಲದರ ನಡುವೆ ಬಿಗ್ಬಾಸ್ ವಿನ್ನರ್ ಮಂಜು ಪಾವಗಡ ಅವರ ಮದುವೆ ವಿಚಾರ ದೊಡ್ಡದಾಗಿ ಸುದ್ದಿ ಮಾಡುತ್ತಿದೆ.. ಹೌದು ಸ್ನೇಹಿತರೆ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಮದುವೆ ಹಾಗೋದು ಬಹುತೇಕ ಖಚಿತವಾಗಿದೆ. ಇದರ ಬಗ್ಗೆ ಸ್ವತಃ ದಿವ್ಯಾ ಸುರೇಶ್ ಮಾತನಾಡಿ ನಾನು ಮತ್ತು ಮಂಜು ಪಾವಗಡ ಗಂಡ ಹೆಂಡತಿ ರೀತಿ ಪರೋಕ್ಷವಾಗಿ ಹೇಳಿದ್ದಾರೆ.. ಹಾಗಾದ್ರೆ ಏನ್ ಹೇಳಿದ್ದಾರೆ ಅನ್ನೋದನ್ನ ನೋಡೋಣ. ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅವರ ಮದುವೆ ವಿಚಾರ ದೊಡ್ಡದಾಗಿಯೇ ಸುದ್ದಿಯಾಗುತ್ತಿದೆ.. ಅದರಲ್ಲಿಯೂ ದಿವ್ಯಾ ಸುರೇಶ್ ಇದೀಗ ಪ್ರಪಂಚದ ಅತ್ಯಂತ ಶ್ರೇಷ್ಠ ಪ್ರೇಮಿಗಳಾದ ರಾದಾ ಕೃಷ್ಣರಿಗೆ ತಮ್ಮನ್ನ ಹಾಗು ಮಂಜು ಪಾವಗಡ ಅವರನ್ನ ಹೋಲಿಕೆ ಮಾಡಿಕೊಂಡಿದ್ದಾರೆ.

[widget id=”custom_html-3″]

ನಾನು ಮಂಜು ರಾದಾ ಕೃಷ್ಣರ ರೀತಿ ಎನ್ನುವ ಮಾತುಗಳನ್ನ ಹಾಡಿದ್ದಾರೆ.. ಹೌದು ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಮಾದ್ಯಮ ಒಂದರ ಸಂದರ್ಶನದಲ್ಲಿ ತಮ್ಮ ಬಿಗ್ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಳ್ಳುವ ಸಮಯದಲ್ಲಿ ಮಂಜು ಪಾವಗಡ ಅವರ ಬಗ್ಗೆ ಈ ಮಾತುಗಳನ್ನ ದಿವ್ಯಾ ಸುರೇಶ್ ಅವರು ಹೇಳಿಕೊಂಡಿದ್ದಾರೆ.. ಫಿನಾಲೆಗೆ ಇನ್ನೂ ಮೂರು ನಾಲ್ಕು ದಿನಗಳು ಬಾಕಿ ಇರುವ ಸಮಯದಲ್ಲಿ ಮಧ್ಯರಾತ್ರಿ ಎರಡು ಮೂವತ್ತರ ಸಮಯದಲ್ಲಿ ದಿವ್ಯಾ ಸುರೇಶ್ ಎಲಿಮಿನೇಟ್ ಆಗಿ ಬಿಗ್ಬಾಸ್ ಮನೆಯಿಂದ ಹೊರ ನಡೆದಿದ್ದರು. ಆ ಕ್ಷಣಕ್ಕು ಕೆಲವೇ ಘಂಟೆಗಳ ಮುನ್ನ ನಡೆದ ಘ’ಟ’ನೆಗಳ ಬಗ್ಗೆ ಮಾತನಾಡಿದ ದಿವ್ಯಾ ಸುರೇಶ್ ಆ ದಿನ ನಾನು ಬಹಳ ಖುಷಿಯಾಗಿದ್ದೆ.. ಮಂಜುಗೆ ನಾನು ಸರ್ಪ್ರೈಸ್ ಕೊಟ್ಟು ಸಂತೋಷ ಪಡಿಸಿದ್ದೆ. ಕೇಕ್ ತಿನ್ನಿಸಿ ಖುಷಿ ಕೊಟ್ಟಿದ್ದೆ.. ಆ ದಿನ ಬಹಳ ಸ್ಪೆಷಲ್ ಆಗಿತ್ತು..

[widget id=”custom_html-3″]

ಮಂಜು ಪಾವಗಡ ಅವರ ಪೋಟೋ ವಾಲ್ ನಲ್ಲಿ ನನ್ನದೇ ಹೆಚ್ಚು ಪೋಟೊಗಳು ಇದ್ದವು. ಅದನ್ನೆಲ್ಲಾ ನೋಡಿ ಮತ್ತಷ್ಟು ಸಂತೋಷ ಪಟ್ಟೆ.. ಆದರೆ ಇಷ್ಟೆಲ್ಲಾ ಸಂತೋಷ ಪಡ್ತಾಯಿದಿನಿ ಇವತ್ತು ನಾನೇ ಮನೆಯಿಂದ ಹೊರ ಹೋಗ್ತೀನಾ ಅನ್ನುವ ಅನುಮಾನ ಶುರುವಾಯ್ತು. ಇಲ್ಲಿ ಏನೋ ಇದೆ ಅನ್ನಿಸೋಕೆ ಶುರುವಾಯ್ತು.. ಬಿಗ್ ಬಾಸ್ ಮನೆಯಲ್ಲಿ ಹಿಂದೆ ಯಾವತ್ತೂ ಸಹ ನಾನು ಮಂಜು ಆ ರೀತಿ ಮಾಡಿರಲ್ಲಿಲ್ಲಾ.. ಆದರೆ ಆ ದಿನ ನಾನು ಮಂಜು ಜೊತೆ ಲಿವಿಂಗ್‌ ಏರಿಯಾದಲ್ಲಿ ಬುಜಕ್ಕೆ ಬುಜ ಕೊಟ್ಟು ಮಲಗಿದ್ದೆವು.. ರಾದಾ ಕೃಷ್ಣ ರೀತಿ ಇದ್ದೆವು. ಆದರೆ ಆ ದಿನವೇ ನಾನು ಮನೆಯಿಂದ ಹೊರ ಬರುವಾಗಾಯಿತು.. ಬ್ರೇ’ಕಪ್ ಗಿಂತ ಹೆಚ್ಚು ನೋವಾಯ್ತು ನನಗೆ. ಈಗಲೂ ಸಹ ಆ ವೀಡಿಯೋ ನೋಡಿದರೆ ನನಗೆ ಬಹಳ ನೋವಾಗುತ್ತದೆ ಎಂದಿದ್ದಾರೆ.. ಅಷ್ಟೇ ಅಲ್ಲದೇ ಮಂಜು ಮದುವೆ ಬಗ್ಗೆಯೂ ನಾನು ಅವರ ಅಪ್ಪ ಅಮ್ಮನ ಜೊತೆ ಮಾತನಾಡಿದ್ದೇನೆ.

[widget id=”custom_html-3″]

ಬೇಗ ಮದುವೆ ಮಾಡಿಬಿಡಿ ಎಂದಿದ್ದೇನೆ ಅವರು ಸಹ ಹೌದು ಮಾಡಿಬಿಡಬೇಕು ಎಂದಿದ್ದಾರೆ ಎಂದು ತಿಳಿಸಿದ್ದಾರೆ.. ಆದರೆ ಇತ್ತ ದಿವ್ಯಾ ಸುರೇಶ್ ಅವರು ತಮ್ಮನ್ನು ಹಾಗು ಮಂಜು ಪಾವಗಡ ಅವರನ್ನು ರಾದಾ ಕೃಷ್ಣ ಜೋಡಿಗೆ ಹೋಲಿಕೆ ಮಾಡಿಕೊಂಡಿದ್ದು ಇದನ್ನು ನೋಡಿ ಒಂದಷ್ಟು ಜನ ಇವರಿಬ್ಬರೂ ಮದುವೆ ಆಗೋದು ಖಚಿತ ಎಂದರೆ, ಮತ್ತೆ ಕೆಲವರು ಇದೆಲ್ಲಾ 53 ಲಕ್ಷದ ಮಹಿಮೆಗೋ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದಿವ್ಯಾ ಸುರೇಶ್ ತಮ್ಮನ್ನು ತಾವು ಜಗತ್ತಿನ ಅತಿ ಶ್ರೇಷ್ಠ ಪ್ರೇಮಿಗಳಾದ ರಾದಾ ಕೃಷ್ಣನಿಗೆ ಹೋಲಿಕೆ ಮಾಡಿಕೊಂಡಿರುವುದು ದಿವ್ಯಾ ಸುರೇಶ್ ಮಂಜು ಪಾವಗಡ ಅವರನ್ನ ಮದುವೆ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.. ಸ್ನೇಹಿತರೆ ಇದರ ಬಗ್ಗೆ ನಿವೇನ್ ಹೇಳ್ತೀರಾ.