Advertisements

ಒಂದು ದಿನದ ಮುಂಚೆಯೇ ನಾಮಪತ್ರ ಸಲ್ಲಿಸಿದ ಡಿಕೆ ರವಿ ಪತ್ನಿ ! ಇಂದರ ಹಿಂದಿರುವ ಕಾರಣ ಏನ್ ಗೊತ್ತಾ ?

News

ರಾಜರಾಜೇಶ್ವರಿ ನಗರದಲ್ಲಿ ಉಪ ಚುನಾವಣಾ ಕಣ ರಂಗೇರಿದ್ದು ಖಡಕ್ ಹಾಗೂ ದಿಟ್ಟ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಇದಕ್ಕೂ ಮುಂಚೆ ಡಿಕೆ ರವಿ ಅವರ ತಾಯಿ ತನ್ನ ಮಗನ ಹೆಸರು ಹೇಳಿಕೊಂಡು ತನ್ನ ಸೊಸೆ ಚುನಾವಣೆಗೆ ಸ್ಪರ್ಧಿಸಬಾರದು ಎಂದು ತಮ್ಮ ಆಕ್ರೋಶವನ್ನ ಹೊರಹಾಕಿದ್ದರು. ಇನ್ನು ಇದೆಲ್ಲದರ ನಡುವೆ DK ರವಿ ಅವರ ಪತ್ನಿ ಕುಸುಮಾ ಅವರು ಒಂದು ದಿನದ ಮುಂಚಿತವಾಗಿಯೇ ನಾಮಪತ್ರ ಸಲ್ಲಿಸಿದ್ದಾರೆ.

Advertisements

ಆದರೆ ನಿಗಧಿಯಾದ ದಿನಾಂಕದ ಪ್ರಕಾರ ನಾಳೆ ಅಂದರೆ ಬುಧವಾರದಂದು ಕುಸುಮಾ ಅವರು ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ಈಗ ಅದಾಗಲಿಲ್ಲ. ಅದಕ್ಕೆ ಕಾರಣವೂ ಇದೆ. ಡಿಕೆ ಶಿವಕುಮಾರ್ ಅವರ ಮಾತಿನಂತೆ ಖ್ಯಾತ ಜ್ಯೋತಿಷಿಯ ಸಲಹೆಯ ಮೇರೆಗೆ ಇಂದೇ ಕುಸುಮಾ ಅವರು ಒಂದು ದಿನದ ಮುಂಚೆಯೇ ನಾಮಪತ್ರ ಸಲ್ಲಿಸಿದ್ದಾರೆ. ಹೌದು, ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಸೂಚಿಸಿದಂತೆ, ಕುಸುಮಾ ಅವರು ಖ್ಯಾತ ಜ್ಯೋತಿಷಿ ಆರಾಧ್ಯ ಅವರ ಸಲಹೆ ಮೇರೆಗೆ ತಮ್ಮ ಹುಟ್ಟಿದ ದಿನವಾದ ಮಂಗಳವಾರವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇಂದು ಮಂಗಳವಾರ ಕುಸುಮಾ ಅವರ ಹುಟ್ಟಿದ ದಿನವಾಗಿದ್ದು ಇಂದೇ ನಾಮಪತ್ರ ಸಲ್ಲಿಸಲು ಜ್ಯೋತಿಷಿಗಳ ಮಾತಿನಂತೆ ಮಹೂರ್ತ ಫಿಕ್ಸ್ ಮಾಡಲಾಗಿದೆ. ಅದರಂತೆ ಇಂದು ಹನ್ನೆರಡು ಗಂಟೆಯಿಂದ ೧೨.೧೫ರ ಸಮಯಕ್ಕೆ ಸರಿಯಾಗಿ ಕುಸುಮಾ ಅವರು ನಾಮಪತ್ರ ಸಲ್ಲಿಸಿದ್ದಾರೆ. ಕುಸುಮಾ ಅವರ ಹುಟ್ಟಿದ ದಿನವಾದ ಮಂಗಳವಾರದ ಈ ದಿನದಂದು ಅವರ ತಾರಾಬಲ ಶುಭವಾಗಿದ್ದು, ಇದೆ ಕಾರಣದಿಂದ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷದಿಂದ ರಾಜ ರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಸ್ಪರ್ಧೆ ನೀಡುತ್ತಿರುವ ಕುಸುಮಾ ಅವರು ತಮ್ಮ ಪ್ರತಿಸ್ಪರ್ಧಿ ಮುನಿರತ್ನ ಅವರ ವಿರುದ್ಧ ಸ್ಪರ್ಧೆ ನೀಡಲಿದ್ದಾರೆ ಎಂದು ಹೇಳಲಾಗಿದೆ.