Advertisements

ಮುಖೇಶ್ ಅಂಬಾನಿಗೆ, ಡಿಕೆ ಶಿವಕುಮಾರ್ ಗೆ ಏನ್ ಸಂಬಂಧ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಡಿಕೆಶಿ ಶಿವಕುಮಾರ್ ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.. ರಾಜಕಾರಣಿಗಳ ಲೀಸ್ಟ್ ನಲ್ಲಿ ಇವರು ಕೂಡ ಅತ್ಯಂತ ಶ್ರೀಮಂತ ನಾಯಕ ಕೂಡ ಹೌದು. ಇನ್ನೂ ಕಾಪಿಡೇ ಮಾಲೀಕ ಸಿದ್ದಾರ್ಥ ಹೆಗಡೆಯವರ ಪುತ್ರ ಅಮರ್ಥ್ಯ ಹೆಗಡೆಯವರಿಗೆ ಡಿಕೆ ಶಿವಕುಮಾರ್ ಅವರು ತಮ್ಮ ಮುದ್ದಿನ ಮಗಳು ಐಶ್ವರ್ಯ ಅವರನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.. ಈ ಮದುವೆಗೆ ದೊಡ್ಡ ದೊಡ್ಡ ರಾಜಕಾರಣಿಗಳು, ಬ್ಯುಸಿನೆಸ್ ಮ್ಯಾನ್ಸ್, ಹಾಗು ಶ್ರೀಮಂತ ವ್ಯಕ್ತಿಗಳು ಕೂಡ ಆಗಮಿಸಿದ್ದರು.. ಇವರ ಪೈಕಿ ದೇಶದಲ್ಲೇ ದೊಡ್ಡ ಉದ್ಯಮಿ ಅನಿಸಿಕೊಂಡಿರುವ ಮುಖೇಶ್ ಅಂಬಾನಿ ಕೂಡ ಆಗಮಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಮುಕೇಶ್ ಅಂಬಾನಿ ಡಿಕೆಶಿ ಮಗಳ ಮದುವೆಗೆ ಬರಲು ಕಾರಣಾಂತರಗಳಿಂದ ಆಗಲಿಲ್ಲ..

Advertisements

ಇನ್ನೂ ಮುಕೇಶ್ ಅಂಬಾನಿ ಮಗಳ ಮದುವೆಗೆ ಡಿಕೆ ಶಿವಕುಮಾರ್ ಅವರು ಆಗಮಿಸಿದ್ದರು.. ಆಗಿನಿಂದಲೂ ಅಂಬಾನಿ ಮತ್ತು ಡಿಕೆಶಿಯ ನಡುವಿನ ಸ್ನೇಹದ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು.. ಇವರಿಬ್ಬರು ಇದುವರೆಗೂ ಎಲ್ಲೂ ಜೊತೆಯಾಗಿದ್ದು ನೋಡಲೇ ಇಲ್ಲಾ. ಇವರ ಸ್ನೇಹ ಯಾವಾಗ ಎಲ್ಲಿ ಚಿಗುರಿತು ಎಂದು ಅನೇಕ ಚರ್ಚೆಗಳು ಹುಟ್ಟಿಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಕರ್ನಾಟಕ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಆಹ್ವಾನ ಕೊಡಲಾಗಿತ್ತು. ಡಿಕೆ ಶಿವಕುಮಾರ್ ಹಾಗು ಅಂಬಾನಿ ಕುಟುಂಬದ ಪರಿಚಯ ಈಗಿನಿದ್ದಲ್ಲ ತುಂಬಾ ವರ್ಷಗಳದ್ದು.. ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಅವರು ಕರ್ನಾಟಕದಲ್ಲಿ ಹಲವಾರು ಹೂಡಿಕೆಗಳನ್ನು ಮಾಡಿದ್ದಾರೆ.

ಅದಕ್ಕೆ ಮುಖ್ಯ ಕಾರಣ ಯಾರು ಅಂದರೆ ಡಿಕೆ ಶಿವಕುಮಾರ್ ಅವರು.. ಡಿಕೆ ಶಿವಕುಮಾರ್ ಅವರು ಹೂಡಿಕೆ ಮಾಡುವುದರಲ್ಲಿ ಮುಖೇಶ್ ಅಂಬಾನಿಯವರಿಗೆ ಸಹಾಯವನ್ನು ಮಾಡಿದ್ದರು. ಡಿಕೆ ಶಿವಕುಮಾರ್ ಅವರ ನಂಟನ್ನು ಮುಕೇಶ್ ಅಂಬಾನಿಯವರು ಇಟ್ಟಿಕೊಳ್ಳುವುದಕ್ಕೆ ಮುಖ್ಯ ಕಾರಣ ಇಲ್ಲಿದೆ ನೋಡಿ.. ನೀವು ಗಮನಿಸಿ ನೋಡಿದರೆ ಯಾವಾಗಲೂ ಶ್ರೀಮಂತ ವ್ಯಕ್ತಿಗಳು ಎಲ್ಲಾ ರಾಜಕೀಯ ನಾಯಕರ ಜೊತೆ ಸ್ನೇಹವನ್ನು ಇಟ್ಟಿಕೊಂಡಿರುತ್ತಾರೆ.

ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಆ ಪಕ್ಷದ ರಾಜಕಾರಣಿಗಳನ್ನು ಸಹಾಯವನ್ನು ಕೇಳುತ್ತಾರೆ ಶ್ರೀಮಂತರು.. ಅದರ ಉದಾಹರಣೆ ಮುಕೇಶ್ ಅಂಬಾನಿ ಹಾಗು ಮೋದಿಯವರ ಸಂಬಂಧ. ಮೋದಿಯವರ ರಾಜ್ಯವಾಗಿರುವ ಗುಜರಾತ್ ನಲ್ಲಿ ಮುಕೇಶ್ ಅಂಬಾನಿಯವರು ಅತಿ ಹೆಚ್ಚು ಹೂಡಿಕೆಯನ್ನು ಮಾಡಿದ್ದಾರೆ.. ಮುಂದೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆದರೆ ಅಂಬಾನಿಯವರು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ.