Advertisements

ಈ ನಾಯಿ ಮಾಡಿದ ಕೆಲಸಕ್ಕೆ ಪ್ರಪಂಚವೇ ಶಾ’ಕ್‌.. ನಾಯಿ ಮಾಡಿದ್ದು ಏನು ಗೊತ್ತಾ?

Kannada Mahiti

ನಾಯಿ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ? ನಾಯಿಯಂದ್ರೆ ಪ್ರೀತಿ, ಪ್ರಾಮಾಣಿಕತೆಯ ಪ್ರತೀಕ. ನಾಯಿಯನ್ನ ನಿಯತ್ತಿನ ಪ್ರಾಣಿ ಅಂತ ಸುಮ್ಮಸುಮ್ಮನೆ ಕರೆಯಲ್ಲ. ನಾಯಿಗೆ ಮನುಷ್ಯನ ಜೀವನದಲ್ಲಿ ವಿಶೇಷ ಪಾತ್ರ ಇದೆ ಅಂದರೆ ತಪ್ಪಾಗಲ್ಲ, ಹಾಗೆನೇ ಮನುಷ್ಯ ಬೇರೆ ಪ್ರಾಣಿಗಳನ್ನ ಇಷ್ಟ ಪಡುದಕ್ಕಿಂತ ಜಾಸ್ತಿ ನಾಯಿಯನ್ನ ಇಷ್ಟ ಪಡ್ತಾನೆ ಅಂದ್ರೆ ಅದು ಸುಳ್ಳಲ್ಲ. ಅಷ್ಟಕ್ಕೂ ನಾವ್ಯಾಕೆ ನಾಯಿ ಬಗ್ಗೆ ಪೀಠಿಕೆ ಕೊಡ್ತಿದೀವಿ ಅಂದ್ರೆ ಅದಕ್ಕೂ ಒಂದು ಕಾರಣ ಇದೆ.
ಸುಲಿನಾ ಎನ್ನುವ ಮಹಿಳೆ ತನ್ನ ಗಂಡನ ಜೊತೆ ಬ್ರೆಜಿಲ್‌ನಲ್ಲಿ ಸುಖ ಸಂಸಾರವನ್ನ ನಡೆಸಿಕೊಂಡು ಜೀವನ ಸಾಗಿಸುತ್ತಿದ್ರು. ಹೀಗಿರುವಾಗ ಒಂದು ದಿನ ಸುಲಿನಾ ಬೀದಿಯಲ್ಲಿ ಗಡಗಡ ನಡುಗುತ್ತಿರುವ ನಾಯಿ ಮರಿ ಒಂದನ್ನು ನೋಡ್ತಾರೆ..

[widget id=”custom_html-3″]

Advertisements

ಆ ನಾಯಿ ಮರಿ ನೋಡಿ ಸುಲಿನಾ ಅವರಿಗೆ ಏನನ್ನಿಸುತ್ತೋ ಏನೋ ಆ ಪುಟ್ಟ ನಾಯಿಮರಿಯನ್ನು ಮನೆಗೆ ಕರೆದುಕೊಂಡು ಹೋಗಿ ಸಾಕಲು ಶುರು ಮಾಡ್ತಾರೆ. ಆ ನಾಯಿಗೆ ಲಾನಾ ಅಂತ ಹೆಸರಿಟ್ಟು, ಸ್ನಾನ ಮಾಡಿಸಿ ನಾಯಿ ಹೇರ್ ಕಟ್ ಮಾಡಿ, ಅದಕ್ಕೆ ಅಂತ ಒಂದು ಪುಟ್ಟ ಗೂಡು ಮಾಡಿ ಆ ಗೂಡಿನಲ್ಲಿ ಲಾನಾವನ್ನು ಸುಲಿನಾ ಸುರಕ್ಷಿತವಾಗಿ ನೋಡಿ ಕೊಳ್ಳುತ್ತಿದ್ದರು. ಲಾನಾ ಮನೆಗ ಬಂದು 8 ತಿಂಗಳ ನಂತರ ಬ್ರೆಜಿಲ್‌ನಲ್ಲಿ ವಿಪರೀತ ಚಳಿ ಇರುತ್ತದೆ. ಆ ಚಳಿಗೆ ಲಾನಾ ಗೂಡಿನಲ್ಲಿದ್ದರೂ ಶೇ’ಕ್ ಆಗ್ತಾ ಇರುತ್ತೆ. ಇದನ್ನು ಒಂದು ದಿನ ಸುಲಿನಾ ಗಮನಿಸುತ್ತಾರೆ. ನಂತರ ಲಾನಾಗೆ ಒಂದು ದುಬಾರಿ ಬೆಲೆಯ ಬೆಡ್‌ಶಿಟ್ ಆರ್ಡರ್ ಮಾಡಿ ನಿತ್ಯವೂ ಆ ಬೆಡ್‌ಶಿಟ್ ಒಳಗೆ ಲಾನಾವನ್ನು ಬೆಚ್ಚಗೆ ಗೂಡಿನಲ್ಲಿ ಮಲಗಿಸಲಿಕ್ಕೆ ಶುರು ಮಾಡ್ತಾರೆ.

[widget id=”custom_html-3″]


ಹೀಗೆ ಒಂದು ಸೋಮವಾರ ರಾತ್ರಿ ಎಂದಿನಂತೆ ಲಾನಾವನ್ನು ಬೆಡ್‌ಶಿಟ್ ಒಳಗೆ ಮಲಗಿಸಿ ಸುಲಿನಾ ತನ್ನ ಕೊಠಡಿಗೆ ಹೋಗಿ ಮಲಗಿ ಕೊಳ್ತಾರೆ, ಆದರೆ ಮಾರನೇ ದಿನ ಅಂದ್ರೆ ಮಂಗಳವಾರ ಬೆಳಿಗ್ಗೆ ಎದ್ದು ನೋಡಿದಾಗ ಲಾನಾ ಗೂಡಿನಲ್ಲಿ ಇರುವುದಿಲ್ಲ, ಬಹಳ ಮುದ್ದಾಗಿ ಪ್ರೀತಿಯಿಂದ ಸಾಕಿದ ಲಾನಾ ಗೂಡಿನಲ್ಲಿ ಇರದದ್ದನ್ನು ನೋಡಿ ಸುಲಿನಾ ಕಂಗಲಾಗಿ ಹೋಗ್ತಾರೆ, ನಂತರ ಸ್ವಲ್ಪ ದೂರ ಹೋಗಿ ಸುಲಿನಾ ನೋಡಿದಾಗ ಅವರಿಗೆ ಒಂದು ಆಶ್ಚರ್ಯ ಕಾದಿರುತ್ತೆ ಏನಂದ್ರೆ ಲಾನಾ ತನ್ನ ಬೆಡ್‌ಶಿಟ್‌ನ್ನ ಇನ್ನೊಂದು ನಾಯಿ ಜೊತೆಗೆ ಶೇರ್ ಮಾಡಿ ಮಲಗಿರುತ್ತೆ, ಆಶ್ಚರ್ಯ ಎನಿಸಿದ್ರು ನೀವು ನಂಬಲೇಬೇಕು, ಲಾನಾ ನಾಯಿಮರಿಗೆ ಎಷ್ಟು ಬುದ್ದಿ ನೋಡಿ, ಬೀದಿಯಲ್ಲಿ ಕಂಬಗಳ ಮಧ್ಯೆ ಚಳಿಯಲ್ಲಿ ನಡುಗುತ್ತಾ ಮಲಗಿರುವ ಇನ್ನೊಂದು ನಾಯಿ ಕಂಡು ಲಾನಾ ಹೃದಯ ಮಿಡಿಯಿತು ಎನ್ನಿಸುತ್ತೆ..

[widget id=”custom_html-3″]

ಲಾನಾ ತನ್ನ ಬೆಡ್‌ಶಿಟ್ ಶೇರ್ ಮಾಡಿ ಇನ್ನೊಂದು ಬೀದಿ ನಾಯಿ ಜೊತೆ ಮಲಗಿರುವ ಫೋಟೋವನ್ನು ಸುಲಿನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾನೂ ಬೀದಿಯಿಂದ ಬಂದಕಾರಣ ತನ್ನಂತೆ ಇತರ ಬೀದಿ ನಾಯಿಗಳು ಪಡುವ ಕಷ್ಟ ಲಾನಾಗೆ ತಿಳಿದಿದ್ದರಿಂದಲೇ ಲಾನಾ ಮಾನವೀಯತೆ ಮೆರೆದಿದೆ ಅಂತ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ನೇಹಿತರೇ ಮನುಷ್ಯರೇ ಈಗಿನ ಕಾಲದಲ್ಲಿ ಸಹಾಯ ಮಾಡಿದವರಿಗೆ ಸಹಾಯ ಮಾಡಲು ಹಿಂದೂ ಮುಂದೂ ನೋಡುವಾಗ ಈ ಮೂಕ ಪ್ರಾಣಿ, ಇನ್ನೊಂದು ಮೂಕ ಪ್ರಾಣಿಯ ಸಂವೇದನೆಯನ್ನು ಅರ್ಥ ಮಾಡಿಕೊಂಡು ಸ್ಪಂಧಿಸಸಿರುವುದು ನಿಜಕ್ಕೂ ಗ್ರೇಟ್ ಅಲ್ವಾ? ಲಾನಾ ನಾಯಿಮರಿಯ ಬಗ್ಗೆ ನಿವೇನು ಹೇಳ್ತೀರಾ..