Advertisements

ನಾಲ್ಕು ತಿಂಗಳಿನಿಂದ ಆಸ್ವತ್ರೆ ಮುಂದೆ ಕೂತು ಸಿಕ್ಕಾಪಟ್ಟೆ ಕಣ್ಣೀರು ಹಾಕುತ್ತಿರುವ ನಾಯಿ.. ಕಾರಣ ನೋಡಿದ್ರೆ ನಿಮಗು ಕಣ್ಣೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ನಾಲ್ಕು ತಿಂಗಳಿನಿಂದ ಆಸ್ವತ್ರೆಯೊಂದರ ಬಾಗಿಲ ಮುಂದೆ ಕೂತು ಕಣ್ಣೀರು ಹಾಕುತ್ತಿರುವ ನಾಯಿ.. ಅಷ್ಟಕ್ಕೂ ಈ ನಾಯಿ ಆಸ್ವತ್ರೆಯ ಬಾಗಿಲಿನ ಮುಂದೆ ಕೂತು ಕಣ್ಣೀರು ಇಡುತ್ತಾ ಯಾರಿಗಾಗಿ ಕಾಯುತ್ತಿದೆ ಎಂಬ ಒಂದು ಕರುಣಾಜನಕ ಕಥೆ ಬಗ್ಗೆ ತಿಳಿದುಕೊಳ್ಳೋಣ.. ಬ್ರೆಜಿಲ್ ದೇಶದ ಪ್ರತಿಷ್ಠಿತ ಆಸ್ವತ್ರೆ ಒಂದರ ಬಾಗಿಲಿನ ಬಳಿ ಈ ನಾಯಿ ಹಲಾವರು ದಿನಗಳಿಂದ ಕೂತುಕೊಳ್ಳುತ್ತಿದೆ.. ಈ ನಾಯಿ ಬಾಗಿಲಿನ ಬಳಿ ಕೂತಿದ್ದರು. ಆಸ್ವತ್ರೆಗೆ ಹೋಗಿ ಬರುವ ಜನಗಳಿಗೆ ಯಾವುದೇ ರೀತಿ ತೊಂದರೆ ಕೊಟ್ಟಿಲ್ಲ.. ಈ ರೀತಿ ನಾಯಿ ಬಾಗಿಲಿನ ಮುಂದೆ ಕೂತಿರುವುದನ್ನು ಆಸ್ವತ್ರೆಗೆ ಯಾರನ್ನೋ ನೋಡಲು ಬಂದಿದ್ದ ಒಬ್ಬ ಮಹಿಳೆ ಕಣ್ಣಿಗೆ ಬೀಳುತ್ತದೆ..

Advertisements

ಇನ್ನೂ ಈ ಮಹಿಳೆಯ ಹೆಸರು ಕ್ರಿಸ್ಟೀನ್. ಆಸ್ವತ್ರೆಗೆ ಎರಡು ಮೂರು ದಿನದಿಂದ ಹೋಗಿ ಬರುವುದನ್ನು ಮಾಡುತ್ತಿದ್ದರು.. ಯಾವಾಗಲೂ ಆ ನಾಯಿ ಆಸ್ವತ್ರೆಯ ಬಾಗಿಲಿನ ಬಳಿ ಇರುತ್ತಿದ್ದ ಕಾರಣ ಯಾರಾದರೂ ರೋಗಿಗಳನ್ನ ಕರೆದುಕೊಂಡು ಹೋಗುವ ಸಮಯದಲ್ಲಿ ಅವರಿಗೆ ದಾರಿ ಬಿಟ್ಟು ಮತ್ತೇ ಅದೇ ಜಾಗದಲ್ಲಿ ಬಂದು ಕೂರುತ್ತಿತ್ತು.. ಇದನ್ನು ಪ್ರತಿದಿನ ಗಮನಿಸುತ್ತಿದ್ದ ಕ್ರಿಸ್ಟೀನ್ ಅವರಿಗೆ ನಾಯಿಯ ಬಗ್ಗೆ ತಿಳಿದುಕೊಳ್ಳಲು ಕುತೂಹಲ ಹೆಚ್ಚಾಗುತ್ತದೆ.. ಈಗಾಗಿ ಕ್ರಿಸ್ಟೀನ್ ಅವರು ಆಸ್ವತ್ರೆಯ ಸಿಬ್ಬಂದಿ ಹತ್ತಿರ ಈ ನಾಯಿಯ ಕಥೆ ಏನೆಂದು ಕೇಳಿದ್ದಾರೆ.

ಆಗ ಆಸ್ವತ್ರೆಯ ಸಿಬ್ಬಂದಿ ಈ ನಾಯಿಯ ಕರುಣಾಜನಕ ಕಥೆಯನ್ನು ಹೇಳುತ್ತಾರೆ.. ಒಂದು ದಿನ ಈ ಆಸ್ವತ್ರೆಯ ಎಮರ್ಜೆ’ನ್ಸಿ ವಾರ್ಡ್ ಗೆ ವ್ಯಕ್ತಿಯೊಬ್ಬರನ್ನು ಆಂಬುಲೆನ್ಸ್ ಮೂಲಕ ಕರೆತರುತ್ತಾರೆ.. ಇನ್ನೂ ಆಂಬುಲೆನ್ಸ್ ಹಿಂದೆಯೇ ಈ ನಾಯಿ ಕೂಡ ಹೋಡಿ ಬಂದಿದೆ.. ಆದರೆ ಈ ನಾಯಿಯನ್ನು ಆಸ್ವತ್ರೆಯ ಸಿಬ್ಬಂದಿ ಒಳಗೆ ಬಿಡಲಿಲ್ಲ. ಆಗ ಆಸ್ವತ್ರೆಯ ಬಾಗಿಲಿನ ಬಳಿಯೇ ಈ ನಾಯಿ ಕೂರುತ್ತದೆ.. ಎಮರ್ಜೆ’ನ್ಸಿ ವಾರ್ಡ್ ನಲ್ಲಿದ್ದ ವ್ಯಕ್ತಿಯನ್ನು ಬದುಕಿಸಲು ಡಾಕ್ಟರ್ ಗಳು ತುಂಬಾ ಪ್ರಯತ್ನ ಪಡುತ್ತಾರೆ ಆದರೆ ಆ ವ್ಯಕ್ತಿ ಕೊನೆಗೆ ಬದುಕುಳಿಯಲಿಲ್ಲ.‌.

ಈ ವ್ಯಕ್ತಿ ಅನಾಥರಾಗಿದ್ದ ಕಾರಣ ಆಸ್ವತ್ರೆಯಲ್ಲಿ ದ’ಫನ್ ಮಾಡಲಾಗಿತ್ತು.. ಆದರೆ ಈ ನಾಯಿಗೆ ಏಗೆ ತಾನೆ ಗೊತ್ತಾಗುತ್ತದೆ ತನ್ನ ಯಜಮಾನ ಸಾ’ವನ್ನಪ್ಪಿದ್ದಾನೆ ಎಂದು.. ಹೊರಗಡೆ ಹೋದ ಯಜಮಾನ ಮತ್ತೆ ಬರುತ್ತಾನೆ ಎಂದು ಅವರಿಗೋಸ್ಕರ ಈ ನಾಯಿ ತುಂಬಾ ದಿನಗಳಿಂದ ಕಾಯುತ್ತಿದೆ.. ಎಷ್ಟು ಬಾರಿ ಈ ನಾಯಿಯನ್ನು ಅಲ್ಲಿಂದ ಓಡಿಸಲು ಪ್ರಯತ್ನ ಮಾಡಿದರೂ ಅದು ಮತ್ತೆ ಬಂದು ಬಾಗಿಲಿನ ಬಳಿಯೇ ಕೂರುತ್ತಿದೆ ಎಂದು ಹೇಳುತ್ತಾರೆ.. ಈ ನಾಯಿಯ ಕಣ್ಣೀರಿನ ಕಥೆ ಕೇಳಿದ ಕ್ರಿಸ್ಟೀನ್ ಅವರು ಭಾವುಕರಾಗಿ ಕಣ್ಣೀರು ಹಾಕುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ.