Advertisements

ರಾಗಿ ಮುದ್ದೆ, ಡೋಲೊ 650 ಮಾತ್ರೆ ಡೈಲಾಗ್ ನಿಂದ ವೈರಲ್ ಆದ ಈ ಹೆಣ್ಣು ಮಗಳು ಯಾರು.. ಓದಿರೋದು ಏನು ಗೊತ್ತಾ?

Kannada Mahiti

ನಿಮಗೆಲ್ಲ ಇತ್ತೀಚಿಗೆ ಸರ್ಕಾರಕ್ಕೆ ಸರಿಯಾಗಿ ತರಾಟೆಗೆ ತೆಗೆದುಕೊಂಡ ಓರ್ವ ಯುವತಿಯ ವಿಡಿಯೋ ವೈರೆಲ್ ಆಗಿರುವುದನ್ನು ನೋಡಿರಬಹುದು. ಈ ಬಗ್ಗೆ ಗೊತ್ತಿರಬಹುದು. ಎಲ್ಲ ಮಾದ್ಯಮಗಳಲ್ಲಿಯೂ ಸಹ ಈಕೆಯದ್ದೇ ಸುದ್ದಿ, ಎಲ್ಲರ ವಾಟ್ಸಪ್ ಸ್ಟೇಟಸ್‌ನಲ್ಲಿಯೂ ಸಹ ಈಕೆಯದ್ದೇ ವಿಡಿಯೋ, ಎಲ್ಲೆಲ್ಲಿಯೂ ಈಕೆಯ ವಿಡಿಯೋಗಳದ್ದೇ ಸದ್ದು, ಸಾಮಾನ್ಯ ಮಹಿಳೆಯೊಬ್ಬಳು ಆಡಳಿತದ ವೈಖರಿ ಬಗ್ಗೆ ಪ್ರಶ್ನೆ ಮಾಡಿದ ಪರಿ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದೆ. ಕೊ’ರೊ’ನಾ ವೈ’ರೆ’ಸ್ ರಾಜ್ಯದಲ್ಲಿ ತಾಂಡವ ಆಡ್ತಾಯಿದ್ದರೆ ರಾಜಕಾರಣಿಗಳು ತಲೆಕೆಡಿಸಿಕೊಳ್ತಿಲ್ಲ, ಆಳುವ ಸರ್ಕಾರ ಕ್ಷಣಕ್ಕೊಂದು ನೆಪವೊಡ್ಡುತ್ತಿದೆ ಅಂತ ಈ ಯುವತಿ ಹಿಗ್ಗಾಮುಗ್ಗಾ ಥರಾಟೆಗೆ ತೆಗೆದುಕೊಂಡಿದ್ದರು.

[widget id=”custom_html-3″]

Advertisements

ಜೊತೆಗೆ ಪಕ್ಕದ ಸರ್ಕಾರದ ಸೌಕರ್ಯವನ್ನು, ಎಳೆ ಎಳೆಯಾಗಿ ಬಿಚ್ಚಿಡುತ್ತಾ, ಸದ್ಯ ಆಡಳಿತರೂಢ ಸರ್ಕಾರವನ್ನು ಚೆನ್ನಾಗಿಯೇ ಬೆಂಡೆತ್ತಿ ಸಖತ್ ಸೌಂಡ್ ಮಾಡಿದ್ರು. ಅಷ್ಟಕ್ಕೂ ಈ ಯುವತಿ ಯಾರು? ಈಕೆ ಓದಿದ್ದು ಯಾರು? ಈಕೆಯ ಕನಸೇನು ಕೇಳ್ತೀವಿ ಕೇಳಿ.. ಅಂದಹಾಗೇ ಈ ಮಹಿಳೆಯ ಹೆಸರು ಶಶಿರೇಖಾ. ಮೈಸೂರಿನ ಜನತಾನಗರದ ನಿವಾಸಿಯಾಗಿದ್ದಾರೆ. ಶಶಿರೇಖಾ ಅವರು ಚಿಕ್ಕ ವಯಸ್ಸಿನಲ್ಲಿಯೇ ಸಿಕ್ಕಾಪಟ್ಟೆ ಕಲಿಕೆಯಲ್ಲಿ ಮುಂದಿದ್ರು. ಓದಿನಲ್ಲಿ ಅಪಾರ ಆಸಕ್ತಿಯಿದ್ರು ಸಹ ಆಕೆಯ ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದ ಆಕೆಗೆ ಮುಂದಕ್ಕೆ ಓದಲಿಕ್ಕೆ ಆಗಲಿಲ್ಲ, ಸ್ಥಳೀಯ ಶಿಕ್ಷಕಿಯೊಬ್ಬರ ಸಹಾಯದಿಂದ ಶಶಿರೇಖಾ ಅವರು ಎಂಟನೇ ತರಗತಿಯವರೆಗೆ ಓದುತ್ತಾರೆ..

[widget id=”custom_html-3″]

ಮುಂದೆ ಓದಲಿಕ್ಕೆ ಆಗೋದೆಯಿಲ್ಲ, ನಂತರ ಈಕೆಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ, ಸದ್ಯ ಈಗ ಶಶಿರೇಖಾ ಅವರಿಗೆ ಒಬ್ಬಳು ಹೆಣ್ಣುಮಗಳು ಸಹ ಇದ್ದಾರೆ, ಆ ಮಗುವಿನ ಹೆಸರು ಧೃತಿ. ಈ ಮಗುವನ್ನು ಹೇಗಾದರೂ ಮಾಡಿ ಸಾಲ ಸೋಲಾ ಮಾಡಿ ಆದ್ರು ಕಷ್ಟಪಟ್ಟು ಓದಿಸಿ ಧೃತಿಯನ್ನು ಐಎಎಸ್ ಮಾಡಬೇಕು ಎನ್ನೋದು ಶಶಿರೇಖಾ ಅವರ ಕನಸಂತೆ, ಆ ಕನಸನ್ನು ನನಸು ಮಾಡಿಕೊಳ್ಳಲು ಎಷ್ಟು ಬೇಕಾದರೂ ಶ್ರಮವನ್ನು ಆಕೆ ಪಡುತ್ತಾರಂತೆ.

[widget id=”custom_html-3″]

ತನ್ನ ಆಸೆಯಂತೂ ಇಡೇರಲಿಲ್ಲ, ನನ್ನ ಆಸೆಯನ್ನು ನನ್ನ ಮಗಳು ಮೂಲಕ ನೆರವೇರಿಸಿಕೊಳ್ಳುತ್ತೇನೆ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇನ್ನು ಶಶಿರೇಖಾ ಅವರಿಗೆ ರೋಹಿಣಿ ಸಿಂಧೂರಿಯಂಂತೆ ತನ್ನ ಮಗಳು ನಿಷ್ಟಾವಂತ, ಬಡವರ ಪರ, ನೋವಿಗೆ ಸ್ಪಂದಿಸುವ, ಸಂವೇದನೆಗಳಿಗೆ ಮಿಡಿಯುವ ದಿಟ್ಟ ದಕ್ಷ ಹಾಗೂ ಖಡಕ್ ಆಫಿಸರ್ ಆಗಬೇಕು ಎಂಬ ಆಸೆಯಿದೆಯಂತೆ. ಇವರ ಮಗಳು ದೊಡ್ಡವಳಾಗಿ ಐಎಎಸ್ ಆದ ಮೇಲೆ ಧೃತಿ ಜೂನಿಯರ್ ರೋಹಿಣಿ ಸಿಂಧೂರಿ ಅಂತ ಮರು ನಾಮಕರಣ ಸಹಾ ಮಾಡುತ್ತಾರಂತೆ..