ಸನಾತನ ಕಾಲದಿಂದಲೂ ಹಿಂದೂಧರ್ಮದಲ್ಲಿ ಪೂಜೆಗಾಗಿ ಹಲವಾರು ವಿಧಿವಿಧಾನಗಳನ್ನ ಅನುಸರಿಸಲಾಗುತ್ತಿದೆ. ಇನ್ನು ಶಾಸ್ತ್ರಗಳಲ್ಲಿ ಹೇಳಿರುವಂತೆ ನಿಯಮಗಳಾನುಸಾರ ಪೂಜೆ ಮಾಡುವುದರಿಂದ ಕಷ್ಟ ಕಾರ್ಪಣ್ಯಗಳಿಂದ ಪಾರಾಗಬಹುದು ಎಂಬ ನಂಬಿಕೆ ಇದೆ. ಶಾಸ್ತ್ರಗಳಲ್ಲಿ ಉಲ್ಲೇಖಮಾಡಿರುವನಂತೆ ಈ ಐದು ಸ್ಥಳಗಳಿಗೆ ಮರೆತೂ ಕೂಡ ಚಪ್ಪಲಿ, ಬೂಟ್ ಗಳನ್ನ ಧರಿಸಿಕೊಂಡು ಹೋಗಬಾರದು ಎಂದು ಹೇಳಲಾಗಿದೆ.

*ಹಿಂದೂ ಧರ್ಮದವರ ಪ್ರತಿಯೊಬ್ಬರ ಮನೆಗಳಲ್ಲೂ ದೇವರ ಕೋಣೆ ಇದ್ದೆ ಇರುತ್ತದೆ. ಇನ್ನು ದೇವರ ಕೋಣೆ ಹಾಗೂ ದೇವಸ್ಥಾನದಲ್ಲಿ ದೇವಾನುದೇವತೆಗಳು ವಾಸಮಾಡುತ್ತಾರೆ. ಈ ಪವಿತ್ರ ಸ್ಥಳಗಳ ಒಳಗೆ ಯಾವುದೇ ಕಾರಣಕ್ಕೂ ಚಪ್ಪಲಿ ಧರಿಸಿ ಒಳ ಹೋಗಬಾರದು.
*ಅನ್ನವನ್ನ ಅನ್ನಪೂರ್ಣೇಶ್ವರಿ ಎಂದು ಹೇಳಲಾಗುತ್ತದೆ. ಇನ್ನು ಶಾಸ್ತ್ರಗಳಲ್ಲಿ ಅಡುಗೆ ಮನೆಗೆ ವಿಶೇಷ ಮಹತ್ವವಿದೆ. ಮನುಷ್ಯನ ಹೊಟ್ಟೆ ತುಂಬಿಸಲು ಆಹಾರ ತಯಾರಿಸುವ ಪವಿತ್ರ ಸ್ಥಳ ಎಂದು ಹೇಳಲಾಗಿದೆ. ಇನ್ನು ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯೇ ಅಡುಗೆ ಮನೆಯಲ್ಲಿ ವಾಸಿಸುತ್ತಾಳೆ ಎಂದು ಹೇಳಲಾಗಿದ್ದು, ಅಡುಗೆ ಮನೆಗೆ ಅಥ್ವಾ ಅಡುಗೆ ಮಾಡುವ ವೇಳೆ ಚಪ್ಪಲಿ ಧರಿಸುವುದು ಅಶುಭ ಎಂದು ಹೇಳಲಾಗಿದೆ.

*ಆಹಾರಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನ ಸ್ಟೋರ್ ರೂಮ್ ನಲ್ಲಿ ಇಡಲಾಗಿರುತ್ತದೆ. ಹಾಗಾಗಿ ಈ ಜಾಗಕ್ಕೂ ಚಪ್ಪಲಿ ಧರಿಸಿಕೊಂಡು ಹೋಗಬಾರದು.ಹಾಗೂ ಆ ಸ್ಥಳವನ್ನ ಯಾವಾಗಲೂ ಸ್ವಚ್ಛವಾಗಿ ಇಟ್ಟಿಕೊಂಡರೆ, ಅನ್ನಪೂರ್ಣೇಶ್ವರಿಯ ಅನುಗ್ರಹ ಸದಾ ಅವರ ಮೇಲಿರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಇನ್ನು ಪವಿತ್ರ ನದಿಗಳ ಒಳಗೆ ಇಳಿಯುವಾಗಲೂ ಸಹ ಚಪ್ಪಲಿ ಧರಿಸಿರಬಾರದು.ಇಲ್ಲಿ ದೇವನದೇವತೆಗಳು ನೆಲಸಿರುವ ಕಾರಣ ಚಪ್ಪಲಿ ಧರಿಸಿ ಪವಿತ್ರ ನದಿಗಳಿಗೆ ಇಳಿಯುವುದು ಅಶುಭ ಎಂದು ಶಾಸ್ತ್ರಗಳು ಹೇಳುತ್ತವೆ.