Advertisements

ತಮ್ಮ ಸಂಬಳದಲ್ಲಿ ಸರಕಾರೀ ಶಾಲೆಯನ್ನು ದತ್ತು ಪಡೆದ ಈ ಪೊಲೀಸ್ ಅಧಿಕಾರಿಯ ಬಗ್ಗೆ ನಿಮಗೆ ಗೊತ್ತೇ ?

Inspire

ನಮ್ಮನ್ನ ರಕ್ಷಣೆ ಮಾಡುವ ಪೊಲೀಸರೆಂದ್ರೆ ಮಾರುದೂರ ಓಡಿಹೋಗುವವರೇ ಹೆಚ್ಚು. ಆದರೆ ಎಲ್ಲಾ ಪೊಲೀಸರು ಒಂದೇ ರೀತಿ ಇರುವುದಿಲ್ಲ. ಸಾರ್ವಜನಿಕರನ್ನ ರಕ್ಷಣೆ ಮಾಡುವುದರ ಜೊತೆ ಸಮಾಜ ಸೇವೆಯಲ್ಲಿ ಕೂಡ ನಿರತರಾಗಿರುವವರು ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಲಂಚ ಬಾಕ ಅಧಿಕಾರಿಗಳ ನಡುವೆ, ತಮ್ಮ ಸ್ವಂತ ಹಣದಿಂದಲೇ ವಿಭಿನ್ನ ರೀತಿಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಇದ್ದಾರೆ.

ಹೌದು, ಸರ್ಕಾರಗಳು ಮಕ್ಕಳನ್ನ ಶಾಲೆಗೆ ಬರುವಂತೆ ಮಾಡಲು ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಿರುತ್ತದೆ. ಆದರೆ ಪಾಠ ಕೇಳುವ ಶಾಲೆಗಳಲ್ಲಿ ಮಾತ್ರ ಸರಿಯಾದ ವಾತಾವರಣ ಇರುವುದಿಲ್ಲ. ಆದರೆ ಗಂಗಾವತಿಯ ಡಿವೈಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಚಂದ್ರಶೇಖರ್ ರವರು ಸರ್ಕಾರಿ ಶಾಲೆಯೊಂದನ್ನ ದತ್ತು ತೆಗೆದುಕೊಂಡಿದ್ದು, ತಮ್ಮ ಸ್ವಂತ ಹಣದಲ್ಲೇ ಅಭಿವೃದ್ಧಿ ಗೊಳಿಸಿ ಮಾದರಿ ಶಾಲೆಯನ್ನಾಗಿ ಮಾರ್ಪಾಡು ಮಾಡಿದ್ದಾರೆ.

Advertisements

ಕೊಪ್ಪಳದ ಸರ್ಕಾರೀ ಶಾಲೆಯನ್ನ ದತ್ತು ತೆಗೆದುಕೊಂಡಿರುವ ಡಾ.ಚಂದ್ರಶೇಖರ್ ರವರು ಇಡೀ ಶಾಲೆಗೆ ಸುಣ್ಣ ಬಣ್ಣ ಬಳಿಸಿ, ಜ್ನ್ಯಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನ ಶಾಲೆಯ ಗೋಡೆಗಳ ಮೇಲೆ ಪೈಂಟ್ ಮಾಡಿಸಿ, ಕಲರ್ ಫುಲ್ ಆಗಿ ಬದಲಾಗುವಂತೆ ಮಾಡಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಮೂಲ ಸೌಕರ್ಯವನ್ನ ಕಲ್ಪಿಸಿರುವ ಡಿವೈಎಸ್ಪಿ ಅವರು ಗ್ರಂಥಾಲಯವನ್ನು ಕೂಡ ಕಲ್ಪಿಸಿಕೊಟ್ಟಿದ್ದು, ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಅನ್ನುವನೆ ಅಭಿವೃದ್ಧಿ ಮಾಡಿದ್ದು, ಸರ್ಕಾರಿ ಶಾಲೆಗೆ ಅತೀ ಹೆಚ್ಚು ವಿದ್ಯಾರ್ಥಿಗಳು ಬರವಂತೆ ಮಾಡಿದ್ದಾರೆ. ಇನ್ನು ಇವರ ಸಾಮಾಜಿಕ ಕಳಕಳಿಗೆ ಜನರು ಅಪಾರ ಮೆಚ್ಚುಗೆಗಳನ್ನ ವ್ಯಕ್ತಪಡಿಸಿದ್ದಾರೆ.